Advertisement

ನಭಕ್ಕೆ ಇಂದು ವಿಕ್ರಂ-ಎಸ್‌

10:55 PM Nov 17, 2022 | Team Udayavani |

ಬಾಹ್ಯಾಕಾಶ ಕ್ಷೇತ್ರದಲ್ಲಿ ಈಗಾಗಲೇ ಹಲವು ಮಹತ್ವದ ದಾಖಲೆಗಳನ್ನು ಸಾಧಿಸಿರುವ ದೇಶ ಶುಕ್ರವಾರ ಇನ್ನೊಂದು ಇತಿಹಾಸ ನಿರ್ಮಿಸಲು ಮುಂದಾಗಿದೆ. ಶ್ರೀಹರಿಕೋಟಾದಲ್ಲಿ ಇರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಹೈದರಾಬಾದ್‌ನ ಖಾಸಗಿ ಕಂಪನಿ ಸ್ಕೈರೂಟ್‌ ಏರೋಸ್ಪೇಸ್‌ ನಿರ್ಮಾಣ ಮಾಡಿದ “ವಿಕ್ರಂ- ಎಸ್‌’ ಎಂಬ ಹೆಸರಿನ ರಾಕೆಟ್‌ ಅನ್ನು ಉಡಾಯಿಸಲಾಗುತ್ತದೆ.

Advertisement

ರಾಕೆಟ್‌ ವಿಶೇಷತೆ :

  • ಅದು ಆರು ಮೀಟರ್‌ ಎತ್ತರ ಹೊಂದಿದೆ.
  • ಭಾರತದ ಎರಡು ಮತ್ತು ವಿದೇಶದ ಒಂದು ಪೇಲೋಡ್‌ಗಳನ್ನು ಹೊಂದಿದೆ.
  • ದೇಶದ ಬಾಹ್ಯಾಕಾಶ ಕ್ಷೇತ್ರಕ್ಕೆ ಆಧುನಿಕತೆಯ ಸ್ಪರ್ಶ ನೀಡಿದ ವಿಜ್ಞಾನಿ ಡಾ.ವಿಕ್ರಂ ಸಾರಾಭಾಯ್‌ ಹೆಸರಿನಲ್ಲಿ ಹೆಸರು ಇರಿಸಲಾಗಿದೆ.
  • ಅದು ಸಿಂಗಲ್‌ ಎಂಜಿನ್‌ ಹೊಂದಿದ್ದು, 815 ಕೆಜಿ ವರೆಗೆ ಇರುವ ಉಪಗ್ರಹಗಳನ್ನು ಹೊತ್ತೂಯ್ಯಲಿದೆ.

ಉದ್ದೇಶವೇನು?:

  • ದೇಶದಲ್ಲಿ ಖಾಸಗಿ ಕಂಪನಿಗಳಿಗೆ ರಾಕೆಟ್‌ ಉಡಾವಣೆ ಮಾಡಲು ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ.
  • ಈ ಉಡಾವಣೆ ಯಶಸ್ವಿಯಾದರೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅವಕಾಶವನ್ನು ಇತರರಿಗೆ ಸೃಷ್ಟಿ ಮಾಡಲಿದೆ.
  • ಇಂಡಿಯನ್‌ ನ್ಯಾಷನಲ್‌ ಸ್ಪೇಸ್‌ ಪ್ರೊಮೇಷನ್‌ ಆ್ಯಂಡ್‌ ಅಥೋರೈಸೇಷನ್‌ ಸೆಂಟರ್‌ (ಇನ್‌-ಸ್ಪೇಸ್‌) ನೇತೃತ್ವದಲ್ಲಿ ಹೊಸ ಸಂಶೋಧನೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು.

ಎಲ್ಲಿಂದ? :

ಆಂಧ್ರಪ್ರದೇಶದ ಶ್ರೀಹರಿ ಕೋಟಾದಲ್ಲಿ ಇರುವ ಸತೀಶ್‌ ಧವನ್‌ ಬಾಹ್ಯಾಕೇಶ ಕೇಂದ್ರದಿಂದ

Advertisement

3 ರಾಕೆಟ್‌ಗಳು :

ಸ್ಕೈರೂಟ್‌ ಏರೋಸ್ಪೇಸ್‌ ಎಂಬ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್‌ಅಪ್‌ ವಿಕ್ರಂ-1 480 ಕೆಜಿ ಸಾಮರ್ಥ್ಯ,  ವಿಕ್ರಂ-2 595 ಕೆಜಿ ಸಾಮರ್ಥ್ಯ ವಿಕ್ರಂ-3 595 ಕೆಜಿ ಸಾಮರ್ಥ್ಯ ಇರುವ ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಿತ್ತು.

ಪ್ರಾರಂಭ’ ಹೆಸರಿನ ಮಿಷನ್‌:

“ಪ್ರಾರಂಭ’ ಎಂಬ ಹೆಸರಿನ ಧ್ಯೇಯವನ್ನು ಇರಿಸಿಕೊಂಡು ಸ್ಕೈರೂಟ್‌ ಏರೋಸ್ಪೇಸ್‌ ಮೂರು ಪೇಲೋಡ್‌ಗಳನ್ನು ಉಡಾಯಿಸಲಿದೆ. ಅದರಲ್ಲಿ ಚೆನ್ನೈನ ಸ್ಪೇಸ್‌ ಕಿಡ್ಜ್ (Spacekidz) ಎಂಬ ಸಂಸ್ಥೆ ನಿರ್ಮಿಸಿದ “ಫ‌ನ್‌-ಸ್ಯಾಟ್‌’ ಎಂಬ ಉಪಗ್ರಹವೂ ನಭಕ್ಕೆ ಉಡಾವಣೆಗೊಳ್ಳಲಿದೆ. ಅದು 2.5 ಕೆಜಿ ತೂಕ ಹೊಂದಿದೆ. ಅಮೆರಿಕ, ಭಾರತ, ಸಿಂಗಾಪುರ ಮತ್ತು ಇಂಡೋನೇಷ್ಯಾದ ಮಕ್ಕಳು ಅದನ್ನು ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next