Advertisement

ಭೀಕರ ರಸ್ತೆ ಅಪಘಾತ: ಭಾರತದ ಖ್ಯಾತ ಯೂಟ್ಯೂಬರ್‌ ಸಾವು

06:44 PM Sep 29, 2022 | Team Udayavani |

ನವದೆಹಲಿ: ತನ್ನ ಗೇಮಿಂಗ್‌ ವಿಡಿಯೋಗಳಿಂದ ಲಕ್ಷಾಂತರ ಫ್ಯಾನ್‌ ಫಾಲೋವರ್ಸ್‌ ಗಳನ್ನು ಹೊಂದಿದ್ದ ಖ್ಯಾತ ಯೂಟ್ಯೂಬರ್‌, ಸ್ಕೈ ಲಾರ್ಡ್‌ ಎಂದೇ ಜನಪ್ರಿಯರಾಗಿದ್ದ  ಅಭ್ಯುದಯ್ ಮಿಶ್ರಾ ರಸ್ತೆ ಅಪಘಾತದಲ್ಲಿ ಸಾವಿಗೀಡದ್ದಾರೆ ಎಂದು ವರದಿಯಾಗಿದೆ.

Advertisement

ಅಭ್ಯುದಯ್ ಮಿಶ್ರಾ  ಪಬ್ ಜಿಯಂತಿರುವ ಫ್ರೀ ಫೈಯರ್‌ ಗೇಮಿಂಗ್‌ ಕುರಿತು ಹಲವಾರು ವಿಡಿಯೋಗಳನ್ನು ಆಪ್ಲೋಡ್‌ ಮಾಡುತ್ತಿದ್ದರು, ಅವರ ವಿಡಿಯೋಗಳು ಮಿಲಿಯನ್‌ ಗಟ್ಟಲೇ ವೀಕ್ಷಣೆ ಆಗುತ್ತಿತ್ತು. ಯೂಟ್ಯೂಬ್‌ ನಲ್ಲಿ 1.64 ಮಿಲಿಯನ್‌ ಸಬ್‌ ಸ್ಕ್ರೈಬರ್ಸ್‌ ನ್ನು ಅವರು ಹೊಂದಿದ್ದಾರೆ. ಇನ್ಸ್ಟಾಗ್ರಾಮ್‌ ನಲ್ಲೂ ಅವರಿಗೆ 4.24 ಲಕ್ಷ ಫಾಲೋವರ್ಸ್‌ ಇದ್ದಾರೆ.

ವರದಿಯ ಪ್ರಕಾರ ಅಭ್ಯುದಯ್‌ ಮಧ್ಯಪ್ರದೇಶ ಸರ್ಕಾರದ ಪ್ರವಾಸೋದ್ಯಮ ಪ್ರಚಾರದ ಅಂಗವಾಗಿ ಆಯೋಜಿಸಿದ ಬೈಕ್‌ ಯಾತ್ರೆಯಲ್ಲಿ ಸೆ.21 ರಂದು ಖಜುರಾಹೊದಿಂದ ಹೊರಟಿದ್ದರು.

ಭಾನುವಾರ (ಸೆ.25) ಭೋಪಾಲ್‌ ನ ಸೋಹಾಗ್‌ ಪುರದ ಬಳಿ ಬೈಕ್‌ ನಲ್ಲಿ ಹೋಗುತ್ತಿದ್ದಾಗೆ ಟ್ರಕ್‌ ಢಿಕ್ಕಿಯಾಗಿ ಅಭ್ಯುದಯ್‌ ಗಂಭೀರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಅವರು ಸೆ.26 ( ಸೋಮವಾರ) ಅವರು ಮೃತ ಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಅಭ್ಯುದಯ್ ನಿಧನದಿಂದ ಲಕ್ಷಂತರ ಅಭಿಮಾನಿಗಳು ದುಃಖಿತರಾಗಿದ್ದಾರೆ. ಟ್ರಕ್‌ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next