Advertisement

ಪ್ರತಿಷ್ಠೆಗಾಗಿ ವನಿತೆಯರ ಪ್ರಯತ್ನ

12:30 AM Feb 10, 2019 | Team Udayavani |

ಹ್ಯಾಮಿಲ್ಟನ್‌: ಸತತ 2 ಸೋಲುಗಳೊಂದಿಗೆ ಟಿ20 ಸರಣಿಯನ್ನು ಕಳೆದುಕೊಂಡಿರುವ ಭಾರತದ ವನಿತಾ ತಂಡ  ಹ್ಯಾಮಿಲ್ಟನ್‌ನಲ್ಲಿ ರವಿವಾರ ನ್ಯೂಜಿಲ್ಯಾಂಡ್‌ ವಿರುದ್ಧ  ಕೊನೆಯ ಪಂದ್ಯವನ್ನಾಡಲಿದೆ. ವೈಟ್‌ವಾಶ್‌ ಸಂಕಟಕ್ಕೆ ಸಿಲುಕದೆ, ಗೆದ್ದು ಒಂದಿಷ್ಟು ಪ್ರತಿಷ್ಠೆ ಗಳಿಸುವುದಷ್ಟೇ ಹರ್ಮನ್‌ಪ್ರೀತ್‌ ಕೌರ್‌ ಮುಂದಿರುವ ಮಾರ್ಗ.

Advertisement

ಏಕದಿನ ಸರಣಿಯನ್ನು ಗೆದ್ದು ಬೀಗಿದ ಭಾರತದ ವನಿತಾ ತಂಡ ಟಿ20 ಸರಣಿಯಲ್ಲಿ ಸಂಪೂರ್ಣವಾಗಿ ವೈಫ‌ಲ್ಯ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಬ್ಯಾಟಿಂಗ್‌ ವೈಫ‌ಲ್ಯ. ಸ್ಮತಿ ಮಂಧನಾ, ಜೆಮಿಮಾ ರೋಡ್ರಿಗಸ್‌ ಹೊರತುಪಡಿಸಿ ಉಳಿದ ಯಾವ ಆಟಗಾರ್ತಿಯರೂ ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಿಲ್ಲ. ಎಲ್ಲರೂ ಒಂದಂಕಿಗೆ ಅಂಟಿಕೊಂಡಿದ್ದಾರೆ. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೂಡ ಇದಕ್ಕೆ ಹೊರತಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಕೌರ್‌ ಗಳಿಸಿದ್ದು 17 ಹಾಗೂ 5 ರನ್‌ ಮಾತ್ರ. ಭಾರತ ಗೆಲ್ಲಬೇಕಾದರೆ ಬ್ಯಾಟಿಂಗ್‌ ವಿಭಾಗದಲ್ಲಿ ಸಾಂ ಕ ಆಟ ಹೊರಹೊಮ್ಮುವುದು, ದೊಡ್ಡ ಮೊತ್ತ ದಾಖಲಾಗುವುದು ಅತ್ಯಗತ್ಯ.

ಭಾರತದ ಬೌಲಿಂಗ್‌ ವಿಭಾಗ ಕೂಡ ಘಾತಕವಾಗಿ ಕಂಡುಬಂದಿಲ್ಲ. ಆಫ್ಸ್ಪಿನ್ನರ್‌ ದೀಪ್ತಿ ಶರ್ಮ ವೈಫ‌ಲ್ಯ ತಂಡಕ್ಕೆ ಕುತ್ತಾಗಿದೆ. ಇವರ ಸ್ಥಾನಕ್ಕೆ ಬೇರೆಯವರನ್ನು ಆಡಿಸೋಣವೆಂದರೆ ತಂಡದಲ್ಲಿ ಬೌಲರ್‌ಗಳ ಕೊರತೆ ಕಾಡುತ್ತಿದೆ.

ಬಲಿಷ್ಠ ಟಿ20 ತಂಡಗಳಲ್ಲಿ ಒಂದಾಗಿರುವ ನ್ಯೂಜಿಲ್ಯಾಂಡ್‌ ಸಂಘಟಿತ ಪ್ರದರ್ಶನದ ಮೂಲಕ ಭಾರತದ ಮೇಲೆ ಸವಾರಿ ಮಾಡಿದೆ. ಏಕದಿನದಲ್ಲಿ ಅನುಭವಿಸಿದ ಸರಣಿ ಸೋಲನ್ನು ಇಲ್ಲಿ ತೀರಿಸಿಕೊಂಡಿದೆ. ಆ್ಯಮಿ ಸ್ಯಾಟರ್‌ವೆàಟ್‌, ಸೋಫಿ ಡಿವೈನ್‌, ಸುಝೀ ಬೆಟ್ಸ್‌ ಬ್ಯಾಟಿಂಗ್‌ ವಿಭಾಗದ ಪಿಲ್ಲರ್‌ಗಳಂತಿದ್ದಾರೆ. ಬೌಲಿಂಗ್‌ನಲ್ಲಿ ಲೀ ಟಹುಹು, ಲೀಗ್‌ ಕ್ಯಾಸ್ಪರೆಕ್‌ ಮಿಂಚು ಹರಿಸಿದ್ದಾರೆ.

ಆರಂಭ: ಬೆಳಗ್ಗೆ 8.30 ಜ ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement
Advertisement

Udayavani is now on Telegram. Click here to join our channel and stay updated with the latest news.

Next