Advertisement

26,000 ಐಸ್‌ಕ್ರೀಂ ಸ್ಟಿಕ್‌ನಿಂದ ರಂಗೋಲಿ!

07:07 PM Jan 27, 2023 | Team Udayavani |

ಸಿಂಗಾಪುರ: ರಂಗೋಲಿ ಪುಡಿಯನ್ನು ಬಳಸಿ ಚಂದದ ರಂಗೋಲಿಯನ್ನ ಅಚ್ಚುಕಟ್ಟಾಗಿ ಬಿಡಿಸುವುದೇ ಕೊಂಚ ಕಷ್ಟ ಎನಿಸುತ್ತದೆ. ಆದರೆ, ಸಿಂಗಾಪುರದಲ್ಲಿರುವ ಭಾರತೀಯ ಮೂಲದ ಅಮ್ಮ-ಮಗಳ ಜೋಡಿ 26,000 ಐಸ್‌ಕ್ರೀಂ ಸ್ಟಿಕ್‌ಗಳನ್ನು ಬಳಸಿ, 6 ಬೈ 6 ಮೀಟರ್‌ ರಂಗೋಲಿ ಬಿಡಿಸುವ ಮೂಲಕ ಸಿಂಗಾಪುರ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದೆ.

Advertisement

ಸುಧಾರವಿ ಹಾಗೂ ರಕ್ಷಿತ ಎನ್ನುವ ಅಮ್ಮ-ಮಗಳು ಪೊಂಗಲ್‌ ಹಬ್ಬದ ಹಿನ್ನೆಲೆ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ವಿಶೇಷ ಅಂದರೆ ಐಸ್‌ಕ್ರೀಂ ಸ್ಟಿಕ್‌ಗಳನ್ನ ಬಳಸಿ ತಮಿಳಿನ ಖ್ಯಾತ ಕವಿಗಳ ಚಿತ್ರಗಳನ್ನು ಇವರು ರಚಿಸಿದ್ದಾರೆ. ಈ ಚಿತ್ರದ ರಚನೆಗೆ 1 ತಿಂಗಳ ಸಮಯ ತೆಗೆದುಕೊಂಡಿದ್ದು, ಅದ್ಭುತ ಕಲಾಕೃತಿ ದಾಖಲೆ ನಿರ್ಮಿಸಿದೆ. ಇದಕ್ಕೂ ಮುಂಚೆ 3,200 ಚದರ ಅಡಿ ರಂಗೋಲಿಯನ್ನು ಚಿತ್ರಿಸುವ ಮೂಲಕ 2016ರಲ್ಲಿಯೂ ಈ ಅಮ್ಮ-ಮಗಳು ದಾಖಲೆ ಸೃಷ್ಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next