Advertisement

ಯು-17 ಮಹಿಳಾ ಫುಟ್‌ಬಾಲ್‌ ಕೋಚ್‌ ಅಮಾನತು

09:25 PM Jun 30, 2022 | Team Udayavani |

ಹೊಸದಿಲ್ಲಿ: ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ಭಾರತೀಯ ಸೈಕ್ಲಿಂಗ್‌ ಒಕ್ಕೂಟದ ಕೋಚ್‌ ಆರ್‌.ಕೆ. ಶರ್ಮ ಅವರನ್ನು ಹೊರಹಾಕಿದ ವಿದ್ಯಮಾನ ಮಾಸುವ ಮೊದಲೇ ಭಾರತದ ಅಂಡರ್‌-17 ಮಹಿಳಾ ಫ‌ುಟ್‌ಬಾಲ್‌ ತಂಡದ ಕೋಚ್‌ ಒಬ್ಬರನ್ನು ಅಮಾನತು ಮಾಡಿ, ದೇಶಕ್ಕೆ ಕರೆಸಿಕೊಳ್ಳಲಾಗಿದೆ.

Advertisement

ಸದ್ಯ ತರಬೇತಿಗಾಗಿ ನಾರ್ವೆಯಲ್ಲಿದ್ದ ತಂಡದ ಅಪ್ರಾಪ್ತ ವಯಸ್ಕ ಆಟಗಾರ್ತಿಯೊಬ್ಬರೊಂದಿಗೆ ಕೋಚ್‌ ತಪ್ಪಾಗಿ ನಡೆದುಕೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಎಐಎಫ್ಎಫ್ ಆಡಳಿತಾಧಿಕಾರಿಗಳು (ಸಿಒಎ) ಕೂಡಲೇ ಕ್ರಮ ಕೈಗೊಂಡಿದ್ದಾರೆ.

ಈ ವಿಷಯವನ್ನು ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಗಮನಕ್ಕೂ ತರಲಾಗಿದೆ. ಸಂಬಂಧಪಟ್ಟ ವ್ಯಕ್ತಿ ಭಾರತೀಯ ಫ‌ುಟ್‌ಬಾಲ್‌ ತಂಡದ ಯಾವುದೇ ಸದಸ್ಯರನ್ನು ಮಾತನಾಡಿಸಬಾರದೆಂದು ತಾಕೀತು ಮಾಡಲಾಗಿದೆ. ವಿಚಾರಣೆಗೆ ನೇರವಾಗಿ ಹಾಜರಾಗಬೇಕೆಂದು ಕಟುವಾಗಿ ಸೂಚಿಸಿದೆ.

ಸದ್ಯ ಭಾರತ ಮಹಿಳಾ ತಂಡ ಯೂರೋಪ್‌ ಪ್ರವಾಸದಲ್ಲಿದೆ. ಮುಂದಿನ ಅಂಡರ್‌-17 ಮಹಿಳಾ ವಿಶ್ವಕಪ್‌ ಹಿನ್ನೆಲೆಯಲ್ಲಿ ಯೂರೋಪ್‌ನ ವಿವಿಧ ದೇಶಗಳಲ್ಲಿ ತರಬೇತಿ ಪಡೆಯಲಿದೆ. ವಿಶ್ವಕಪ್‌ ಅ. 11ರಿಂದ 30ರ ವರೆಗೆ ಭಾರತದಲ್ಲೇ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next