ಅಹಮದಾಬಾದ್: ಪ್ಲೇಆಫ್ ಗೆ ಪ್ರವೇಶಿಸದ ಐಪಿಎಲ್ ತಂಡಗಳ ಭಾರತೀಯ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಮುನ್ನ ಎರಡು ವಾರಗಳ ಕಂಡೀಷನಿಂಗ್ ಶಿಬಿರಕ್ಕಾಗಿ ಲಂಡನ್ ನಲ್ಲಿ ಸೇರಿಕೊಳ್ಳಬಹುದು ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸೋಮವಾರ ಹೇಳಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವು ಜೂನ್ 7ರಿಂದ ಆರಂಭವಾಗಲಿದೆ. ಐಪಿಎಲ್ ಫೈನಲ್ ಪಂದ್ಯವು ಮೇ 29 ರಂದು ನಡೆಯಲಿದೆ.
“ಇದು ನಮಗೆ ಸಾಕಷ್ಟು ನಿರ್ಣಾಯಕವಾಗಿದೆ. ನಾವು ಆ ಫೈನಲ್‌ನಲ್ಲಿ ಆಡಲಿರುವ ಎಲ್ಲಾ ಆಟಗಾರರೊಂದಿಗೆ ನಿರಂತರ ಸಂಪರ್ಕದಲ್ಲಿರಲಿದ್ದೇವೆ. ಅವರ ಕೆಲಸದ ಹೊರೆಯನ್ನು ಮೇಲ್ವಿಚಾರಣೆ ಮಾಡುತ್ತೇವೆ” ಎಂದು ಅಹಮದಾಬಾದ್ ಪಂದ್ಯದ ಬಳಿಕ ಶರ್ಮಾ ಹೇಳಿದರು.
ಇದನ್ನೂ ಓದಿ:ವಿಶ್ವದ 50 ಅತ್ಯಂತ ಕಲುಷಿತ ನಗರಗಳಲ್ಲಿ 39 ನಗರಗಳು ಭಾರತದಲ್ಲೇ ಇವೆಯಂತೆ…
Related Articles
“ಮೇ 21 ರ ಸುಮಾರಿಗೆ ಆರು ತಂಡಗಳು ಐಪಿಎಲ್ ಪ್ಲೇ-ಆಫ್ ರೇಸ್ ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಆದ್ದರಿಂದ ಯಾವ ಆಟಗಾರರು ಲಭ್ಯವಿದ್ದರೂ, ನಾವು ಅವರನ್ನು ಲಂಡನ್ ಗೆ ಸಾಧ್ಯವಾದಷ್ಟು ಬೇಗ ಕಳುಹಿಸಲು ಪ್ರಯತ್ನಿಸುತ್ತೇವೆ. ನಾವು ಸಾಧ್ಯವಾದಷ್ಟು ಮೇಲ್ವಿಚಾರಣೆ ಮಾಡುತ್ತೇವೆ” ಎಂದು ರೋಹಿತ್ ಹೇಳಿದರು.
“ನಾವು ಎಲ್ಲಾ ವೇಗದ ಬೌಲರ್‌ಗಳಿಗೆ ಕೆಲವು (ಕೆಂಪು) ಡ್ಯೂಕ್ ಬಾಲ್ ಗಳನ್ನು ಕಳುಹಿಸುತ್ತಿದ್ದೇವೆ. ಅದರೊಂದಿಗೆ ಅವರು ಸಮಯ ಸಿಕ್ಕಾಗ ಬೌಲ್ ಮಾಡಬಹುದು” ಎಂದು ಟೀಂ ಇಂಡಿಯಾ ನಾಯಕ ಹೇಳಿದರು.