ನವ ದೆಹಲಿ : ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದ ಮಾಜಿ ವೇಗಿ ವಕಾರ್ ಯೂನಿಸ್ ಅವರ 21 ನೇ ವಿವಾಹ ವಾರ್ಷಿಕೋತ್ಸವದಂದು ಟ್ವಿಟ್ಟರ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.
ಪಾಕಿಸ್ತಾನದ ಆಲ್ ರೌಂಡರ್ ಶೋಯೆಬ್ ಮಲಿಕ್ ಅವರ ಪತ್ನಿ ಸಾನಿಯಾ, ವಾಕರ್ ಅವರ ಪತ್ನಿ ಫರಿಯಾಲ್ ವಾಕರ್ ಅವರ ಪೋಸ್ಟ್ ನ್ನು ರಿಟ್ವೀಟ್ ಮಾಡಿ, “ವಾವ್ಹ್ .. ನನ್ನ ಇಬ್ಬರು ಫೆವರೇಟ್ ಗಳಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.
ಓದಿ : ಪಿಎಂ ಆವಾಸ್ ಯೋಜನೆ, ಪಿಎಂ ಸ್ವನಿಧಿ ಯೋಜನೆ: ತ್ವರಿತ ಸಾಲ ವಿತರಣೆಗೆ ಸಿಎಂ ಸೂಚನೆ
Related Articles
14 ವರ್ಷಗಳ ವೃತ್ತಿಜೀವನದಲ್ಲಿ 373 ಟೆಸ್ಟ್ ವಿಕೆಟ್ ಮತ್ತು 416 ಏಕದಿನ ವಿಕೇಟ್ ಗಳನ್ನು ಪಡೆದಿದ್ದ ವಾಕರ್ ಯೂನಿಸ್ ಪಾಕಿಸ್ತಾನದ ಪ್ರಮುಖ ವೇಗಿಗಳಲ್ಲಿ ಒಬ್ಬರು. ಯೂನಿಸ್ ಕೂಡ ಪಾಕಿಸ್ತಾನ ತಂಡದ ನಾಯಕನಾಗಿದ್ದರು ಮತ್ತು ಕೆಲವು ಕಾಲ ಪಾಕಿಸ್ತಾನ ತಂಡಕ್ಕೆ ಮುಖ್ಯ ತರಬೇತುದಾರರಾಗಿದ್ದರು.
ಕಳೆದ ತಿಂಗಳು ಸಾನಿಯಾ ಮಿರ್ಜಾ ಕೋವಿಡ್ ಸೋಂಕಿಗೆ ಒಳಗಾಗಿದ್ದ ವಿಚಾರವನ್ನು ಹಾಗೂ ಅವರು ಎದುರಿಸಿದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದರು.
“ಜಗತ್ತಿನಲ್ಲಿ ಏನಾಗುತ್ತಿದೆ ಎನ್ನುವುದರ ಬಗ್ಗೆ ನಿಮಗೆ ಅರಿವಿರಲಿ. ನಾನು ಕೋವಿಡ್ ಸೋಂಕಿನ ವಿರುದ್ಧ ಹೋರಾಡಿ ಸರ್ವಶಕ್ತನ ಆಶೀರ್ವಾದದಿಂದ ಗುಣಮುಖಳಾಗಿದ್ದೇನೆ. ನಾನು ಎಲ್ಲ ರೀತಿಯಿಂದಲೂ ಎಚ್ಚರದಿಂದಿದ್ದೆ ಆದರೂ ಸೋಂಕಿಗೆ ಒಳಗಾಗುವಂತಾಯ್ತು. ನಾವು ನಮ್ಮ ಕುಟುಂಬದವರನ್ನು ಸೋಂಕು ತಗುಲದಂತೆ ರಕ್ಷಣೆ ಮಾಡಬೇಕು. ಮಾಸ್ಕ್ ಧರಿಸಬೇಕು, ಆಗಾಗ ಕೈ ತೊಳೆಯುತ್ತರಬೇಕು, ನಾವು ನಮ್ಮನ್ನು ರಕ್ಷಿಸಿಕೊಳ್ಳುವುದರೊಂದಿಗೆ ನಮ್ಮ ಪ್ರೀತಿ ಪಾತ್ರರನ್ನು ಕೂಡ ಕೋವಿಡ್ ಸೋಂಕು ತಗುಲದಂತೆ ರಕ್ಷಿಸೋಣ” ಎಂದು ಜನವರಿ 19ರಂದು ಸಾನಿಯಾ ಬರೆದುಕೊಂಡಿದ್ದರು.
ಓದಿ : “ನಮಗೆ ರಾಜಕೀಯ ಮತ್ತು ಜೀವನದಲ್ಲಿ ಗಾಂಧಿ ನಡೆಗಳು ಆದರ್ಶ” : ಪ್ರಧಾನಿ ಮೋದಿ