ವಾಷಿಂಗ್ಟನ್: ಟೆಕ್ ಕಂಪನಿಗಳ ಸಾಮೂಹಿಕ ಉದ್ಯೋಗ ಕಡಿತದ ಕ್ರಮದಿಂದಾಗಿ ಕೆಲಸ ಕಳೆದುಕೊಂಡಿರುವ ಸಾವಿರಾರು ಭಾರತೀಯ ಕುಟುಂಬಗಳು ಅಮೆರಿಕದಲ್ಲಿ ಸಂಕಷ್ಟಕ್ಕೆ ಸಿಲುಕಿವೆ.
ನಿಯಮ ಪ್ರಕಾರ, ಉದ್ಯೋಗ ಕಳೆದುಕೊಂಡ 60 ದಿನಗಳಲ್ಲಿ ಅವರೆಲ್ಲರೂ ಅಮೆರಿಕ ತೊರೆಯಬೇಕಾದ ಕಾರಣ, ಸಾವಿರಾರು ಮಂದಿ ಭಾರತೀಯ ಟೆಕಿಗಳು ಮತ್ತು ಅವರ ಕುಟುಂಬ ಸದಸ್ಯರು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಇದು ದುರದೃಷ್ಟಕರ ಸಂಗತಿ ಎಂದು ಈ ಉದ್ಯೋಗಿಗಳ ಪರ ಹೋರಾಡುತ್ತಿರುವ ಫೌಂಡೇಶನ್ ಫಾರ್ ಇಂಡಿಯಾ ಆ್ಯಂಡ್ ಇಂಡಿಯನ್ ಡಯಾನ್ಪೋರಾ ಸ್ಟಡೀಸ್(ಎಫ್ಐಐಡಿಎಸ್) ಹೇಳಿದೆ.
ಈಗಾಗಲೇ ಎಫ್ಐಐಡಿಎಸ್ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆಯನ್ನು ಸಂಪರ್ಕಿಸಿ, ಎಚ್-1ಬಿ ವೀಸಾ ಹೊಂದಿರುವವರಿಗೆ ನೀಡಲಾಗಿರುವ 60 ದಿನಗಳ ಗಡುವನ್ನು 180 ದಿನಗಳಿಗೆ ಏರಿಸುವಂತೆ ಮನವಿ ಮಾಡಿದೆ.
ಸರ್ಕಾರ ಕೂಡ ಈ ಕೋರಿಕೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಇನ್ನೂ ಅಂತಿಮ ನಿರ್ಧಾರವನ್ನು ಪ್ರಕಟಿಸಿಲ್ಲ. ಹೀಗಾಗಿ, 60 ದಿನಗಳ ಅವಧಿ ಪೂರ್ಣಗೊಂಡವರು ಸ್ವದೇಶಕ್ಕೆ ಮರಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.