Advertisement

ಕ್ಯಾಲಿಫೋರ್ನಿಯಾ:800 ಅಡಿ ಪ್ರಪಾತಕ್ಕೆ ಬಿದ್ದ ಭಾರತೀಯ ದಂಪತಿ !

02:38 PM Oct 30, 2018 | |

ನ್ಯೂಯಾರ್ಕ್‌: ಭಾರತೀಯ ಮೂಲದ ಸಾಫ್ಟ್ವೇರ್‌ ಉದ್ಯೋಗಿ ದಂಪತಿಗಳಿಬ್ಬರು ಪ್ರವಾಸಿ ಸ್ಥಳದಲ್ಲಿ  ಪ್ರಪಾತಕ್ಕೆ ಬಿದ್ದು  ದಾರುಣವಾಗಿ ಸಾವನ್ನಪ್ಪಿದ ಘಟನೆ ಅಮೆರಿಕಾದಲ್ಲಿ ನಡೆದಿದೆ. 

Advertisement

ಕ್ಯಾಲಿಫೋರ್ನಿಯಾದ ಯೋಸೆಮೈಟ್‌ ನ್ಯಾಷನಲ್‌ ಪಾರ್ಕ್‌ನಲ್ಲಿ  ಆಕ್ಟೋಬರ್‌ 25 ರಂದು ವಿಷ್ಣು ವಿಶ್ವನಾಥ್‌ (29) ಮತ್ತು ಪತ್ನಿ ಮೀನಾಕ್ಷಿ ಮೂರ್ತಿ (30) ಅವರು 800 ಅಡಿ ಆಳಕ್ಕೆ ಬಿದ್ದು  ದಾರುಣವಾಗಿ ಸಾವನ್ನಪ್ಪಿದ್ದಾರೆ. ಅವರ ಶವಗಳನ್ನು ಸೋಮವಾರ ಮೇಲಕ್ಕೆತ್ತಿ ಗುರುತು ಪತ್ತೆ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.

ವಿಷ್ಣು ಅವರಿಗೆ ಇತ್ತೀಚೆಗೆ ಸಿಸ್ಕೋ ಕಂಪೆನಿಯಲ್ಲಿ ಸಿಸ್ಟಂ ಇಂಜಿನಿಯರ್‌ ಆಗಿ ಕೆಲಸ ಸಿಕ್ಕಿದ ಹಿನ್ನಲೆಯಲ್ಲಿ ದಂಪತಿಗಳು ಅಮೆರಿಕಕ್ಕೆ ತೆರಳಿ ಅಲ್ಲಿ ನೆಲೆಸಿದ್ದರು.

ಇಬ್ಬರು ಚಾರಣ ಪ್ರಿಯರಾಗಿದ್ದು ಸಾಹಸ ಪ್ರವೃತ್ತಿಯವರಾಗಿದ್ದರು. ಹಾಲಿಡೇಸ್‌ ಎಂಡ್‌ ಹ್ಯಾಪಿಲಿ ಎವರ್‌ ಆಫ್ಟರ್‌ ಎನ್ನುವ ಬ್ಲಾಗ್‌ನಲ್ಲಿ ತಮ್ಮ ಪ್ರವಾಸದ ಅನುಭವಗಳನ್ನು ಪೋಸ್ಟ್‌ ಮಾಡುತ್ತಿದ್ದರು. 

Advertisement

ದಂಪತಿ 2014 ರಲ್ಲಿ ವಿವಾಹವಾಗಿದ್ದರು. ಚೆಂಗನೂರಿನಲ್ಲಿ ಇಬ್ಬರು ಇಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದರು. 

ಯಾವ ಕಾರಣಕ್ಕಾಗಿ ಅವರು ಪ್ರಪಾತಕ್ಕೆ ಬಿದ್ದಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ನಾವು  ಆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಇದೊಂದು ದುರಂತ ಎಂದು ಪಾರ್ಕ್‌ನ ವಕ್ತಾರ ಜಾಮೀ ರಿಚರ್ಡ್ಸ್‌ ಹೇಳಿಕೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next