ಸಿಂಗಾಪುರ : ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಇಲ್ಲಿ ಐದು ತಿಂಗಳ ಜೈಲು ಶಿಕ್ಷೆಯಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಜೈಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ವಿದ್ಯಾರ್ಥಿಯನ್ನು 27ರ ಹರೆಯದ ರವಿ ಕುಮಾರ್ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಸೆ.9ರಂದು ಈತನ ರೆಡ್‌ಹಿಲ್ ಹೌಸಿಂಗ್ ಎಸ್ಟೇಟ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ.
ಅಂದು ಕುಮಾರ್ ಬಾರ್ ಒಂದರಲ್ಲಿ ಬಿಯರ್ ಸೇವಿಸುತ್ತಿದ್ದ. ಅಲ್ಲೇ ಸನಿಹದಲ್ಲಿ ಕುಳಿತಿದ್ದ ಬ್ಲಾಕ್ 84 ರೆಡ್ ಹಿಲ್ ಲೇನ್ ನಿವಾಸಿ ಮಹಿಳೆಯ ಬಳಿ ಆಕೆಯೊಂದಿಗೆ ಮಾತುಕತೆಗೆ ಮುಂದಾದ.
ಆಕೆಯ ಬಳಿಯೇ ಇದ್ದ ಮತ್ತು ಸೆಲ್‌ಫೋನ್‌ನಲ್ಲಿ ಮಾತನಾಡುತ್ತಿದ್ದ ಆಕೆಯ ಸಹೋದರಿಗೆ 10 ಡಾಲರ್ ಕೊಟ್ಟು ಬಿಯರ್ ತೆಗೆದುಕೊಂಡು ಬಾ ಎಂದು ಕಳುಹಿಸಿದ.
ಆಕೆ ಅತ್ತ ಹೋಗುತ್ತಲೆ ರವಿ ಕುಮಾರ್ ಮಹಿಳೆಯ ಹೆಗಲ ಮೇಲೆ ಕೈಹಾಕಿ ಆಕೆಗೆ ಲೈಂಗಿಕ ಕಿರುಕುಳ ಕೊಡಲು ಆರಂಭಿಸಿದ. ಇದರಿಂದ ಸಿಟ್ಟಿಗೆದ್ದು ಬೊಬ್ಬಿಟ್ಟ ಮಹಿಳೆ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡಳು ಎಂದು ಮಾಧ್ಯಮ ವರದಿ ತಿಳಿಸಿದೆ.