Advertisement

ಬಾಲಕಿ ವೇಶ್ಯೆ ಜತೆಗೆ ಸೆಕ್ಸ್‌: ಭಾರತೀಯನಿಗೆ 10 ತಿಂಗಳ ಜೈಲು

12:25 PM Dec 13, 2017 | udayavani editorial |

ಸಿಂಗಾಪುರ : ಅಪ್ರಾಪ್ತ ವಯಸ್ಸಿನ ವೇಶ್ಯೆಯ ಜತೆಗೆ ಸೆಕ್ಸ್‌ ನಡೆಸಿ ಆಕೆಗೆ ಕಳೆದ ವರ್ಷ ಮೇ ತಿಂಗಳಲ್ಲಿ ಹಣ ಪಾವತಿಸದೇ ಇದ್ದ ಅಪರಾಧಕ್ಕಾಗಿ ಭಾರತೀಯ ವಿದ್ಯಾರ್ಥಿ, 25ರ ಹರೆಯದ ಹರಿಕುಮಾರ್‌ ಅಂಪಲಗನ್‌ ಎಂಬಾತನಿಗೆ ಸಿಂಗಾಪುರದಲ್ಲಿ 10 ತಿಂಗಳ ಜೈಲು ಶಿಕ್ಷೆಯಾಗಿದೆ. 

Advertisement

ತಾನಿನ್ನೂ ಹದಿನಾಲ್ಕರ ಹರೆಯದವಳು ಮತ್ತು ಹಣಕ್ಕಾಗಿ ತಾನು ಸೆಕ್ಸ್‌ ಸೇವೆ ನೀಡುವವಳು; ಅಂತೆಯೇ ಹರಿ ಕುಮಾರ್‌ ಜತೆಗೆ ತಾನು ಸೆಕ್ಸ್‌ ನಡೆಸಿದ್ದೇನೆ, ಆತ ನನಗೆ ಹಣ ಪಾವತಿಸಿಲ್ಲ ಎಂಬುದಾಗಿ ಹುಡುಗಿಯು ಕೋರ್ಟಿನಲ್ಲಿ ಸಾಕ್ಷಿ ನುಡಿದಿದ್ದಳು ಎಂದು ಸ್ಟ್ರೇಟ್‌ ಟೈಮ್ಸ್‌ ವರದಿ ಮಾಡಿದೆ. 

ಮೂರು ದಿನಗಳ ಕೋರ್ಟ್‌ ವಿಚಾರಣೆಯಲ್ಲಿ ಆರೋಪಿ ಹರಿಕುಮಾರ್‌ ಅಪರಾಧಿ ಎಂದು ಸಾಬೀತಾಗಿ ಆತನಿಗೆ 10 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next