ಜಾರ್ಜಿಯಾ: ವಿದ್ಯಾಭ್ಯಾಸಕ್ಕೆಂದು ಅಮೆರಿಕಕ್ಕೆ ತೆರಳಿದ್ದ ಭಾರತೀಯ ಮೂಲದ ವಿದ್ಯಾರ್ಥಿಯೋರ್ವ ತನ್ನ ಹುಟ್ಟುಹಬ್ಬದ ದಿನದಂದೇ ಆಕಸ್ಮಿಕ ಗುಂಡು ತಗುಲಿ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಜಾರ್ಜಿಯಾದ ಅಟ್ಲಾಂಟಾದಲ್ಲಿ ನಡೆದಿದೆ.
ನವೆಂಬರ್ 13 ರಂದು ಈ ಘಟನೆ ನಂದೆದಿದ್ದು ಆರ್ಯನ್ ರೆಡ್ಡಿ(23) ಮೃತ ವಿದ್ಯಾರ್ಥಿಯಾಗಿದ್ದಾನೆ.
ಕಳೆದ ಬುಧವಾರ (ನ. 13) ರಂದು ಆರ್ಯನ್ ತನ್ನ ಹುಟ್ಟುಹಬ್ಬದ ನಿಮಿತ್ತ ಜಾರ್ಜಿಯಾದ ಅಟ್ಲಾಂಟಾದಲ್ಲಿರುವ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದ, ಅದರಂತೆ ಸ್ನೇಹಿತರನ್ನು ಕರೆಸಿದ್ದಾನೆ. ಇದೆ ವೇಳೆ ತಾನು ಇತ್ತೀಚಿಗೆ ಖರೀದಿಸಿದ ಹೊಸ ಬಂದೂಕನ್ನು ಸ್ನೇಹಿತರಿಗೆ ತೋರಿಸಿ ಬಳಿಕ ತನ್ನ ಕೊಠಡಿಯಲ್ಲಿ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದೆ ದುರದೃಷ್ಟವಶಾತ್ ಗುಂಡು ಆರ್ಯನ್ ಎದೆಯನ್ನೇ ಸೀಳಿಕೊಂಡು ಹೋಗಿದೆ, ಗುಂಡು ಹಾರಿದ ಸದ್ದು ಕೇಳಿ ಪಕ್ಕದ ಕೋಣೆಯಲ್ಲಿದ್ದ ಆತನ ಸ್ನೇಹಿತರು ಬಂದು ನೋಡಿದಾಗ ಆರ್ಯನ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ, ಕೂಡಲೇ ಸ್ನೇಹಿತರು ಆತನನ್ನು ಪಕ್ಕದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಆದರೆ ಪರಿಶೀಲಿಸಿದ ವೈದ್ಯರು ಆರ್ಯನ್ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ತೆಲಂಗಾಣದ ಭುವನಗಿರಿ ಜಿಲ್ಲೆಯವನಾಗಿರುವ ಆರ್ಯನ್ ಅಟ್ಲಾಂಟಾದ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದು, ಮಾಸ್ಟರ್ ಆಫ್ ಸೈನ್ಸ್ ಓದುತ್ತಿದ್ದಾನೆ ಎಂದು ಕುಟುಂಬ ಮೂಲಗಳಿಂದ ಮಾಹಿತಿ ಲಭಿಸಿದ್ದು, ಮೃತದೇಹವನ್ನು ಇಂದು(ಶುಕ್ರವಾರ) ತೆಲಂಗಾಣಕ್ಕೆ ತರಲಾಗುತ್ತದೆ ಎಂದು ಹೇಳಲಾಗಿದೆ.
ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.
ಇದನ್ನೂ ಓದಿ: ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ