ನವದೆಹಲಿ: ಬಾಲ್‌ಪಾಯಿಂಟ್ ಪೆನ್ ಬಳಸಿ ವಿಶ್ವದ ಅತಿ ಚಿಕ್ಕ ವ್ಯಾಕ್ಯೂಮ್ ಕ್ಲೀನರ್ ನಿರ್ಮಿಸುವ ಮೂಲಕ ಭಾರತದ ವಿದ್ಯಾರ್ಥಿಯೊಬ್ಬ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದ್ದಾನೆ.
ಎನ್‌ಐಟಿ ಪಾಟ್ನಾದ ವಿದ್ಯಾರ್ಥಿ ತಪಾಲಾ ನಂದಮುನಿ ಸುಮಾರು 20,000 ರೂ. ವೆಚ್ಚದಲ್ಲಿ ತನ್ನ ಅಕ್ಷದಲ್ಲಿ ಕೇವಲ 0.25 ಇಂಚು ಗಾತ್ರ ಹೊಂದಿರುವ ಕಿರು ವ್ಯಾಕ್ಯೂಮ್ ಕ್ಲೀನರ್ ಅಭಿವೃದ್ಧಿಪಡಿಸಿದ್ದಾನೆ.
ಈ ಯಂತ್ರವು ಬಾಲ್ ಪಾಯಿಂಟ್ ಪೆನ್‌ನಿಂದ ನಿರ್ಮಿತವಾಗಿದ್ದು, ನಿರ್ವಾತ ಸೃಷ್ಟಿಸಲು 4 ವೋಲ್ಟ್ನ ವೈಬ್ರೇಷನ್ ಮೋಟರ್ ನೆರವಿನಿಂದ ತಿರುಗುವ ಸಣ್ಣ ಪಂಕವನ್ನು ಹೊಂದಿದೆ. ವಿದ್ಯುತ್ಛಕ್ತಿ ಸಂಪರ್ಕ ಒದಗಿಸಿದಾಗ ತಿರುಗುವ ಪಂಕವು ನಿರ್ವಾತ ಸೃಷ್ಟಿಸಿ ಧೂಳಿನ ಕಣಗಳನ್ನು ಸೆಳೆದು, ಸಂಗ್ರಹಾಗಾರ (ಸ್ಟೋರೇಜ್)ದಲ್ಲಿ ಸಂಗ್ರಹಿಸುತ್ತದೆ. ಈ ಮೊದಲು ಕೂಡ ನಂದಮುನಿ 0.69 ಇಂಚಿನ ಯಂತ್ರ ರೂಪಿಸಿ ದಾಖಲೆ ನಿರ್ಮಿಸಿದ್ದರು. 2022ರಲ್ಲಿ ಈ ದಾಖಲೆಯನ್ನು ಮತ್ತೂಬ್ಬ ಉತ್ಸಾಹಿ ಮುರಿದಿದ್ದರು.
ಇದನ್ನೂ ಓದಿ: Arrested: ವಿಜಯಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ: ಅಂತರಾಜ್ಯ ನಾಲ್ವರು ಕಳ್ಳರ ಬಂಧನ