Advertisement

ಅಮರನಾಥ ಯಾತ್ರೆಗೆ ಅಡ್ಡಿಪಡಿಸುವ ಉಗ್ರರ ಯತ್ನ ವಿಫಲಗೊಳಿಸಿದ ಯೋಧರು

11:10 PM May 05, 2022 | Team Udayavani |

ಜಮ್ಮು : ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾ ರಾಷ್ಟ್ರೀಯ ಗಡಿ ಸಮೀಪದಲ್ಲಿ ಪಾಕಿಸ್ಥಾನಿ ಉಗ್ರರು ನಿರ್ಮಿಸಿರುವ ಸುರಂಗವನ್ನು ಬಿಎಸ್‌ಎಫ್ ಗುರುವಾರ ಪತ್ತೆಹಚ್ಚಿದೆ. ಈ ಮೂಲಕ ಮುಂಬರುವ ಅಮರನಾಥ ಯಾತ್ರೆಗೆ ಅಡ್ಡಿಪಡಿಸುವಂಥ ಜೈಶ್‌-ಎ- ಮೊಹಮ್ಮದ್‌ ಉಗ್ರರ ಯೋಜನೆಯನ್ನು ಯೋಧರು ವಿಫ‌ಲಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಜಮ್ಮು ವಲಯದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

Advertisement

ಸಾಂಬಾದ ಚಕ್‌ ಫ‌ಕೀರಾ ಗಡಿ ಹೊರಠಾಣೆಯ ವ್ಯಾಪ್ತಿಯಲ್ಲೇ 150 ಮೀ. ಉದ್ದದ ಈ ಸುರಂಗ ಪತ್ತೆಯಾಗಿದೆ. ಹೊಸದಾಗಿ ಕೊರೆದ ಸುರಂಗ ಇದಾಗಿದ್ದು, ಪಾಕಿಸ್ಥಾನದಿಂದ ಭಾರತಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಒಂದೂವರೆ ವರ್ಷಗಳಲ್ಲಿ ಪತ್ತೆಯಾದ 5ನೇ ಸುರಂಗ ಇದಾಗಿದೆ ಎಂದು ಡಿಐಜಿ ಎಸ್‌.ಪಿ.ಎಸ್‌.ಸಂಧು ಹೇಳಿದ್ದಾರೆ.

– ಸುರಂಗದ ಉದ್ದ 150 ಮೀಟರ್‌
– ನಿರ್ಗಮನ ದ್ವಾರದ ಅಗಲ-2 ಅಡಿ
– ನಿರ್ಗಮನದಲ್ಲಿ ಅಳವಡಿ ಸಿದ್ದ ಮರಳುಚೀಲ-21
– ಅಂತಾರಾಷ್ಟ್ರೀಯ ಗಡಿಯಿಂದಿರುವ ದೂರ -150 ಮೀ.
– ಗಡಿ ಬೇಲಿಯಿಂದ ಇರುವ ದೂರ-50 ಮೀ.

Advertisement

Udayavani is now on Telegram. Click here to join our channel and stay updated with the latest news.

Next