Advertisement

ಅಮೆರಿಕದಲ್ಲಿ ನಿಲ್ಲದ ಭಾರತೀಯರ ಹತ್ಯೆ;ಇನ್ನೋರ್ವ ಯುವಕ ಗುಂಡಿಗೆ ಬಲಿ 

11:52 AM Apr 08, 2017 | |

ವಾಷಿಂಗ್ಟನ್‌ : ಅಮೆರಿಕದಲ್ಲಿ ಜನಾಂಗೀಯ ದಾಳಿ ಮುಂದುವರಿದಿದ್ದು, ಗುರುವಾರ  ಭಾರತೀಯ ಮೂಲದ 26 ರ ಹರೆಯದ ವಿಕ್ರಮ್‌ ಜರ್ಯಾಲ್‌ ಎಂಬ ಯುವಕನನ್ನು  ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ.

Advertisement

ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಟ್ವೀಟ್‌ ಮಾಡಿದ್ದು, ವಾಷಿಂಗ್ಟನ್‌ನ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಹತ್ಯೆಗೀಡಾಗಿರುವ ಯುವಕನ ಕುಟುಂಬಕ್ಕೆ ಸೈಂಟ್‌ ಫ್ರಾನ್ಸಿಸ್ಕೊ ದಲ್ಲಿರುವ ಭಾರತೀಯ ರಾಯಭಾರಿ ಎಲ್ಲಾ ರೀತಿಯ ನೆರವು ನೀಡುತ್ತಿರುವುದಾಗಿ ತಿಳಿಸಿದ್ದಾರೆ. 

ಪಂಜಾಬ್‌ನ ಹೋಶಿಯಾಪುರ್‌ ಮೂಲದ ವಿಕ್ರಮ್‌ ಜರ್ಯಾಲ್‌ 25 ದಿನಗಳ ಹಿಂದಷ್ಟೆ ಅಮೆರಿಕಕ್ಕೆ ತೆರಳಿ ಸ್ನೇಹಿತನ ಗ್ಯಾಸ್‌ ಸ್ಟೇಷನ್‌ನಲ್ಲಿ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. 

ಗುರುವಾರ ಮಧ್ಯಾಹ್ನ  1.30ರ ವೇಳೆಗೆ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಕ್ಯಾಶ್‌ನಿಂದ ಹಣ ಕಸಿದು ಗುಂಡಿಟ್ಟು ಹತ್ಯೆಗೈದು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.  

Advertisement

Udayavani is now on Telegram. Click here to join our channel and stay updated with the latest news.

Next