Advertisement

ಪರೋಪಕಾರಿ ಪಟ್ಟೆ ಚಿಕ್ಕ

03:05 AM Nov 18, 2017 | |

 ಪರೋಪಕಾರಕ್ಕೆ ಇನ್ನೊಂದು ಹೆಸರು ಎಂಬಂತಿರುವುದು ಪಟ್ಟೆ ಚಿಕ್ಕ ಪಕ್ಷಿಯ ಹೆಚ್ಚುಗಾರಿಕೆ. Indian scimitar  Babbler  (Pomatorhimus horfieldii skyes)  R -Bul Bul  +MYna ಮರಳ ಬೇರು, ತೊಗಟೆಗಳನ್ನು ಕೊರೆಯುವ ಹುಳು ಹಾಗೂ ಕ್ರಿಮಿ ಕೀಟಗಳನ್ನು ಈ ಪಕ್ಷಿ ಹುಡುಕಿ ಹುಡುಕಿ ತಿಂದುಹಾಕುತ್ತದೆ. ಆ ಮೂಲಕ, ಕಾಡನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 

Advertisement

 ಸ್ಕಿಂಟರ್‌ ಅಂದರೆ ಕೆ‌ಳಮುಖಬಾಗಿ ಡೊಂಕಾದ, ಚೂಪಾದ ಕೊಕ್ಕು ಇರುವ ಹಕ್ಕಿ ಎಂದು ಅರ್ಥ.  ಪಾಟಿಬಣ್ಣದ ತಲೆಯ, ಕಂದುಗಪ್ಪು ಮೈಬಣ್ಣದ ಹಕ್ಕಿ ಈ ಪಟ್ಟೆ ಚಿಕ್ಕ.  ಬಿಳಿ ಕುತ್ತಿಗೆ, ಬಿಳಿ ಎದೆ, ಕಣ್ಣಿನ ಮೇಲೆ ಬಿಳಿ ಹುಬ್ಬಿನ ಆಕರ್ಷಕ ಹಕ್ಕಿ. ಇದರ ಕೆನ್ನೆ ಕಪ್ಪು ಬಣ್ಣದಿಂದ ಕೂಡಿದೆ. 

  ಹಳದಿ ಬಣ್ಣದ, ಕೆಳಮುಖ ಬಾಗಿದ ಚೂಪಾದ ಕೊಕ್ಕು ಇದನ್ನು ಗುರುತಿಸಲು ಸಹಾಯಕವಾಗಿದೆ. ಗಂಡು-ಹೆಣ್ಣು ಹಕ್ಕಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ.ಇದು  22 ಸೆಂ.ಮೀ ಇರುವ ದೊಡ್ಡ ಹಕ್ಕಿ. ಬಣ್ಣದ ವ್ಯತ್ಯಾಸ ಮತ್ತು ಚುಂಚು ಆಕಾರ ಆಧರಿಸಿಯೇ ನಮ್ಮಲ್ಲಿ ಸುಮಾರು 10 ಉಪಜಾತಿಯ ಪಟ್ಟಿ ಚಿಕ್ಕ ಪಕ್ಷಿಗಳು ಇವೆಯಂದು ಗುರುತಿಸಲಾಗಿದೆ. ಜಗತ್ತಿನಲ್ಲಿ ಇದೇ ಲಕ್ಷಣ ಹೊಂದಿರುವ  77 ಜಾತಿಯ ಹಕ್ಕಿಗಳಿವೆ. ಬಲವಾದ ಕಂದುಗಪ್ಪು ಬಣ್ಣದ ಕಾಲು, ಸ್ವಲ್ಪ ದಪ್ಪ, ಉದ್ದ ಬಾಲದಿಂದ ಕಾಡಿನ ಮರಗಳ ಮಧ್ಯವೂ ಇದನ್ನು ಗುರುತಿಸಬಹುದು. ಮರದ ಟೊಂಗೆ ಏರಿ ಕೆಲವೊಮ್ಮ ಬೆಂಡಾದ ಮರಗಳಲ್ಲಿ ಹುಳುಗಳನ್ನು ಅರಸಿ ತಿನ್ನುತ್ತದೆ. ಇದೊಂದು ನೆಲ ಹಕ್ಕಿ ಎಂದರೆ ತಪ್ಪಾಗಲಾರದು. ಭಾರತದಲ್ಲಿ ಪಶ್ಚಿಮ ಘಟ್ಟದ ಕಾಡಿನಲ್ಲಿ ವಿಶೇಷವಾಗಿ ಕಾಣಸಿಗುತ್ತದೆ.  ಸದಾ ಗೊರಗಲು ದನಿಯಲ್ಲಿ ಕೂಗುತ್ತ , ಟೊಂಗೆಯಿಂದ ಟೊಂಗೆಗೆ, ಇಲ್ಲವೆ ಗಿಡಗಂಟಿಯ ಸಂದಿನಲ್ಲಿ ಹಾರುತ್ತಿರುತ್ತದೆ. ಒಂದೆರಡು ಹಕ್ಕಿ ಹಾರಿದ ನಂತರ ಅದನ್ನು ಅನುಸರಿಸಿ, ಜೊತೆಯಲ್ಲಿ ಬಂದು ಇತರ ಹಕ್ಕಿ ಸೇರಿಕೊಳ್ಳುವುದು ಇದರ ವರ್ತನೆ.  ಇದರಿಂದಾಗಿ ಹಳ್ಳಿಗರು ಇದನ್ನು ವಾಚಾಳಿ ಹಕ್ಕಿ ಎಂದೂ ಕರೆಯುವುದುಂಟು.  ಇದು ದಟ್ಟ ಕಾಡು -ಇಳಿಜಾರು -ಪ್ರದೇಶದಲ್ಲಿ ನೆಲೆಗೊಂಡಿರುತ್ತದೆ.   ಇದು ತುಂಬಾ ಸಂಕೋಚ ಸ್ವಭಾವದ ಹಕ್ಕಿ. ಹಾಗಾಗಿ ಸುಲಭವಾಗಿ ಕಣ್ಣಿಗೆ ಬೀಳುವುದು ಅಪರೂಪ .ಟಿ ಟೋ ಟೋ ಟೋ ಟೋ ಎಂದು ಆಗಾಗ್ಗೆ ನಾಲ್ಕರ ಆವರ್ತದಲ್ಲಿ ಸಿಳ್ಳೆ ಹೊಡೆಯುವ ಈ ಹಕ್ಕಿಯನ್ನು, ಈ ದನಿಯಿಂದ ಗುರುತಿಸಬಹುದಾಗಿದೆ.
ಮನುಷ್ಯರ ಸಂಪರ್ಕದ ಸೂಚನೆ ಬಂದಕೂಡಲೆ, ಗಿಡಗಂಟಿಗಳ ಸಂದಿನಲ್ಲಿ ಇಲ್ಲವೇ ಬಿದಿರು ಮಳೆಗಳ ಸಂದಿನಲ್ಲಿ ತಕ್ಷಣ ಮರೆಯಾಗಿಬಿಡುತ್ತದೆ. ಇದು  ಸಂಕೋಚ ಸ್ವಭಾವದ ಹಕ್ಕಿಯಷ್ಟೇ ಅಲ್ಲ ಮನುಷ್ಯರ ಚಲನವಲನಗಳನ್ನು ತಿಳಿಯುವ ಸೂಕ್ಷ ಸಂವೇದನೆಯ ಹಕ್ಕಿ. 

ಇದರ ಪ್ರಧಾನ ಆಹಾರ ಕೀಟಗಳು. ಇತರ ಗೀಜಗ ಹಕ್ಕಿಗಳಂತೆ ಇದು ನೆಲದಮೇಲೆ ಓಡಾಡುತ್ತಾ -ತೆರಗೆಲೆಗಳಲ್ಲಿ ಆಹಾರ ಹುಡುಕುತ್ತದೆ.  ಬಿದಿರು ಎಲೆ, ಇಲ್ಲವೇ ಬಿದಿರಿನ ಪಳೆಯುಳಿಕೆ ಅಂದರೆ ಅದರ ಅಡಿಯಲ್ಲಿ ಅವಿತಿರುವ ಕ್ರಿಮಿ, ಹುಳು -ಹುಳುಗಳ ಮೊಟ್ಟೆ , ಇರುವೆ, ಗೆದ್ದಲು ಹುಳುಗಳನ್ನು ಕೆದಕಿ ತಿನ್ನುತ್ತದೆ. ಹೀಗಾಗಿ ಜೈವಿಕ ಸಮತೋಲನ 
ಕಾಯ್ದುಕೊಳ್ಳುವಲ್ಲಿ ಇದರ ಪಾತ್ರ ಹಿರಿದೆಂದರೆ ತಪ್ಪಾಗಲಾರದು. ಮರಗಳ ತೊಗಟೆ ಅಡಿಯಲ್ಲಿ ಅಡಗಿ- ಮರಗಳನ್ನು ಕೊರೆಯುವ ಹುಳಗಳನ್ನು ತಿನ್ನುತ್ತದೆ. ಹೀಗೆ ಪರೋಕ್ಷವಾಗಿ ಮರಗಳು ನಾಶವಾಗದಂತೆ ತಡೆದು ಕಾಡನ್ನು ಉಳಿಸುವಲ್ಲಿ ಪಟ್ಟೆಚಿಕ್ಕನದು ಮಹತ್ವದ ಪಾತ್ರವಿದೆ. ಹಿಮಾಲಯ ಪರ್ವತ ಪ್ರದೇಶದಲ್ಲಿ 1500 ಮೀ. 2000ಮೀ ಎತ್ತರದವರೆಗೂ ಈ ಹಕ್ಕಿಯನ್ನು ನೋಡಬಹುದು. ನಿತ್ಯ ಹರಿದ್ವರ್ಣ ಕಾಡು, ಪಸೆಮಣ್ಣಿರುವ ಕಡೆ ಇರುವ ಮಣ್ಣಿನ ಹುಳಗಳ ವಾಸಸ್ಥಳದಲ್ಲಿ ಇದನ್ನು ಹುಡುಕುವುದು ಸುಲಭ. 

ಇದರಲ್ಲಿ 11 ಉಪಜಾತಿಗಳ  ಎಲ್ಲಾ ತಳಿಗಳು ಭಾರತದ ಪಶ್ಚಿಮಘಟ್ಟದಲ್ಲಿ ಇವೆ. ಕಾಡು, ಬಿದಿರುಮಳೆಗಳ ನಾಶದಿಂದಾಗಿ ಇದರ ಇರುನೆಲೆ ವ್ಯಾಪ್ತಿ ಕಡಿಮೆ ಯಾಗುತ್ತಿದೆ. ಹೀಗಾಗಿ ಬಹುದೂರ ಹಾರಿ ವಲಸೆ ಹೋಗದಿರುವುದರಿಂದ ಇದರ ಸಂತತಿ ಕಡಿಮೆ ಯಾಗುತ್ತಿದೆ. ಈ ಸುಂದರ ಹಕ್ಕಿಯನ್ನು ಎಲ್ಲರೂ ಸಂರಕ್ಷಿಸ ಬೇಕಾದ ಅನಿವಾರ್ಯತೆ ಎದುರಾಗಿದೆ.   

Advertisement
Advertisement

Udayavani is now on Telegram. Click here to join our channel and stay updated with the latest news.

Next