ಇದೊಂದು ಸಾರ್ಸ್ ಮಾದರಿ ವೈರಸ್ ಎಂದು ಈಗ ವೈದ್ಯ ಸಮುದಾಯ ಹೇಳಿದೆ. 2002- 2003ರಲ್ಲಿ ಹಾಂಕಾಂಗ್ ಮತ್ತು ಚೀನದಲ್ಲಿ ಈ ಸೋಂಕು ಕಾಣಿಸಿ ಕೊಂಡು 650ಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು.
Advertisement
17 ಮಂದಿಗೆ ಸೋಂಕು: ಪ್ರೀತಿ ಮಹೇಶ್ವರಿ ಅವರು ಹೊಸದಿಲ್ಲಿ ಮೂಲದ ಉದ್ಯಮಿ ಅಶುಮಾನ್ ಖೋವಾಲ್ ಎಂಬವರ ಪತ್ನಿ. ಪತ್ನಿಯನ್ನು ನೋಡಲು ಖೋವಾಲ್‌ಗೆ ಕೆಲ ಹೊತ್ತು ಅವಕಾಶ ನೀಡಲಾಗಿತ್ತು. ಪತ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಹೊಸದಾಗಿ 17 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಒಟ್ಟಾರೆ 62ಕ್ಕೇರಿದಂತಾಗಿದೆ.
ಜ್ವರ, ಕೆಮ್ಮು, ಉಸಿರಾಡಲು ತೊಂದರೆ, ನ್ಯುಮೋನಿಯಾ, ಕಿಡ್ನಿ ವೈಫಲ್ಯ
Related Articles
– 2019ರ ಡಿ.8ರಂದು ಚೀನದ ವುಹಾನ್ ನಗರದಲ್ಲಿ ವ್ಯಕ್ತಿ ನ್ಯುಮೋನಿಯಾ ಇದೆ ಎಂದು ಹೇಳಿಕೊಂಡು ಆಸ್ಪತ್ರೆಗೆ ಬಂದಿದ್ದ. ಕೆಲವೇ ದಿನಗಳಲ್ಲಿ ಇದೇ ಮಾದರಿಯ ಸಮಸ್ಯೆಗಳನ್ನು ಹೇಳಿಕೊಂಡವರು ಚಿಕಿತ್ಸೆಗಾಗಿ ಬಂದರು.
Advertisement
– ಜ.7ರಂದು ಈ ವೈರಸ್ ಅನ್ನು 2019-ಎನ್‌ಸಿಒವಿ ವೈರಸ್ ಎಂದು ಹೆಸರಿಸಲಾಯಿತು. ಇದರ ಮೂಲ ಇನ್ನೂ ಪತ್ತೆಯಾಗಿಲ್ಲ. ಈಗಾಗಲೇ ಇಬ್ಬರು ಅಸುನೀಗಿದ್ದಾರೆ.