Advertisement

“3,000 ವರ್ಷ ಹಿಂದೆ ಗ್ರೀಕ್‌ನಲ್ಲಿತ್ತು ಭಾರತೀಯ ಧರ್ಮ’

12:43 AM Dec 29, 2021 | Team Udayavani |

ಉಡುಪಿ: ಸುಮಾರು 3,000 ವರ್ಷಗಳ ಹಿಂದೆ ಗ್ರೀಕ್‌ ಸಾಮ್ರಾಜ್ಯದಲ್ಲಿ ಭಾಗವತ, ವೈಷ್ಣವ ಧರ್ಮ ಚಾಲ್ತಿಯಲ್ಲಿತ್ತು ಎಂದು ಸಮುದ್ರದಲ್ಲಿ ಮುಳುಗಿದ ದ್ವಾರಕಾ ನಗರದ ಬಗ್ಗೆ ವಿಶೇಷ ಅಧ್ಯಯನ ನಡೆಸಿದ ಅಭಿರಾಮ ತಂತ್ರಿಯವರು ಹೇಳಿದರು.

Advertisement

ಶ್ರೀಕೃಷ್ಣಮಠದಲ್ಲಿ ಸೋಮವಾರ ದ್ವಾರಕಾ ನಗರದ ಪುರಾತಣ್ತೀ ಅನ್ವೇಷಣೆ ಕುರಿತು ಅವರು ಉಪನ್ಯಾಸ ನೀಡಿದರು.

ಗ್ರೀಕ್‌ನಿಂದ ಅಫ್ಘಾನಿಸ್ಥಾನದವರೆಗೆ ಹರಡಿಕೊಂಡಿದ್ದ ಗ್ರೀಕ್‌ ಸಾಮ್ರಾಜ್ಯದಲ್ಲಿ ರಾಜನಾಗಿದ್ದ ಅಗತೊಂಸನ ಕಾಲದಲ್ಲಿ ಶ್ರೀಕೃಷ್ಣ – ಬಲರಾಮರ ಚಿತ್ರ ಇರುವ ನಾಣ್ಯಗಳು ಸಿಕ್ಕಿವೆ. ಇದು ಸುಮಾರು 3,000 ವರ್ಷಗಳ (2921) ಹಿಂದಿನ ನಾಣ್ಯಗಳು. ಗ್ರೀಕ್‌ ದೊರೆ ತನ್ನನ್ನು ಭಾಗವತ, ವೈಷ್ಣವ ಎಂದು ಕರೆದುಕೊಂಡಿರುವುದು ಕಂಡುಬಂದಿದೆ. ಇದನ್ನು ಕಂಡು ಹಿಡಿದದ್ದು ಫ್ರೆಂಚ್‌ ಮತ್ತು ಇಸ್ರೇಲ್‌ ವಿಜ್ಞಾನಿಗಳು ಎಂದರು.

ಗ್ರೀಕ್‌ ರಾಜದೂತ ಹೆಲಿಒಡರಸ್‌ 3,000 ವರ್ಷಗಳ ಹಿಂದೆ ಭಾರತಕ್ಕೆ ಬಂದು 8-10 ಸ್ತಂಭಗಳನ್ನು ಸ್ಥಾಪಿಸಿದ್ದ. ಇದನ್ನು ಗರುಡಕಂಬ ಎಂದು ಕರೆಯಲಾಗಿದೆ. ಇದರಲ್ಲಿ ಶಾಸನ ಕೆತ್ತಿದ್ದು ಅದರಲ್ಲಿ ತಮ್ಮನ್ನು ಭಾಗವತೋತ್ತಮ, ದೇವಾದಿ ದೇವ ವಾಸುದೇವ, ಪಾದಸೇವಕ ಎಂದು ಇದೆ. ಶಾಸನದಲ್ಲಿ ಮಹಾಭಾರತದ ಸ್ತ್ರೀಪರ್ವದಲ್ಲಿ ಉಲ್ಲೇಖವಿರುವ ಮುಕ್ತಿಗೆ ದಾರಿ ಯಾವುದು ಎಂದು ಧೃತರಾಷ್ಟ್ರನಿಗೆ ಹೇಳುವ ವಿಷಯವಿದೆ ಎಂದರು.

ಗುಜರಾತ್‌ನಲ್ಲಿದ್ದ ಶಿಲಾದಿತ್ಯ ಎಂಬ ರಾಜನ ಶಾಸನದಲ್ಲಿ (3674ರ ವಿಕ್ರಮ ನಾಮ ಸವಂತ್ಸರದಲ್ಲಿ) ಕೃಷ್ಣ-ಬಲರಾಮರ ಕತೆಗಳನ್ನು ಕೆತ್ತಲಾಗಿದೆ. ಇದನ್ನು ಭಾರತೀಯ ವಿಜ್ಞಾನ ಮಂದಿರದವರು (ಐಐಎಸ್ಸಿ) ದಾಖಲಿಸಿದ್ದಾರೆ. ಪಾಶ್ಚಾತ್ಯರು 1,000, 1,500 ವರ್ಷಗಳ ಹಿಂದೆ ಮಹಾಭಾರತಾದಿ ಗ್ರಂಥಗಳು ರಚನೆಯಾದದ್ದು ಎಂದು ಸುಳ್ಳು ಹೇಳುವಾಗ 3,000 ವರ್ಷಗಳ ಹಿಂದೆ ಗ್ರೀಕ್‌ ರಾಜದೂತರೇ ಮೊದಲಾದವರು ಬರೆದ ಶಾಸನಗಳಿಂದ ಸತ್ಯ ಹೊರಬೀಳುತ್ತದೆ ಎಂದು ತಂತ್ರಿ ಬೆಟ್ಟು ಮಾಡಿದರು.

Advertisement

ಇದನ್ನೂ ಓದಿ:ನೀಟ್‌ ಪಿಜಿ 2021ರ ಕೌನ್ಸೆಲಿಂಗ್‌ ವಿಳಂಬ : ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದ ವೈದ್ಯರು

ಉತ್ತರಾದಿ ಮಠದ ಶ್ರೀಸತ್ಯಾತ್ಮತೀರ್ಥ ಶ್ರೀಪಾದರು “ದೇಶದ ಪ್ರಗತಿಯಲ್ಲಿ ಮಠಮಂದಿರಗಳ ಪಾತ್ರ’ ಎಂಬ ವಿಷಯದ ಕುರಿತು ಮಾತನಾಡಿದರು. ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀಸತ್ಯಾತ್ಮತೀರ್ಥ ಶ್ರೀಪಾದರಿಗೆ ದೇವರ ದರ್ಶನವನ್ನು ಮಾಡಿಸಿದರು.

ಮುಳುಗಿದ ದ್ವಾರಕೆ ನೋಡಬಹುದು
ಕರ್ನಾಟಕದವರೇ ಆದ ಡಾ| ಎಸ್‌. ಆರ್‌. ರಾವ್‌ ಅವರು ಭಾರತೀಯ ಪುರಾತಣ್ತೀ ಇಲಾಖೆ ಮತ್ತು ಗೋವಾದ ಸಾಗರಶಾಸ್ತ್ರ ಸಂಸ್ಥೆ ಮೂಲಕ ಮೂಲದ್ವಾರಕೆಯನ್ನು ಸಂಶೋಧಿಸಿದರು. ಈಗ ಬೇಟ್‌ ದ್ವಾರಕಾ ದ್ವೀಪವಾಗಿದೆ. ಸುಮಾರು 5,000 ವರ್ಷಗಳ ಹಿಂದೆ ಸಮುದ್ರದ ಮಟ್ಟ 40-50 ಅಡಿ ಕೆಳಗೆ ಇತ್ತು. ಆಗ ಹಡಗು ಕಟ್ಟಲು ನಿರ್ಮಿಸಿದ ಶಿಲಾರಚನೆ, 8-10 ಅಡಿಯ ಶಿಲಾ ಗೋಡೆಗಳು ಸಿಕ್ಕಿದ್ದು ಇದನ್ನು ಈಗಲೂ ನೋಡಬಹುದು ಎಂದು ಅಭಿರಾಮ ತಂತ್ರಿ ಹೇಳಿದರು.

ಸಿಂಧು ಕಣಿವೆ ನಾಗರಿಕತೆಯಂತೆ ದ್ವಾರಕೆಯಲ್ಲಿ ವಿವಿಧ ಮುದ್ರೆಗಳು ದೊರಕಿವೆ. ಇದು ನದಿ ತೀರ, ಭೂಭಾಗ, ಸಮುದ್ರದಲ್ಲಿ ಸಿಗುತ್ತಿವೆ. ಪ್ರಾಯಃ ಗೋಮತಿ ನದಿ ದ್ವಾರಕೆಯೊಳಗೆ ಹರಿಯುತ್ತಿದ್ದಿರಬೇಕು. ಆರ್ಯರ ದಾಳಿ, ಅಲ್ಲಿಂದ ವೇದ – ಸಂಸ್ಕೃತಗಳು ಬಂದವು ಎಂದು ಹೇಳುತ್ತಿರುವವರು 3000 ವರ್ಷಗಳ ಹಿಂದೆ ಗ್ರೀಕರು ಭಾಗವತ ಧರ್ಮ ಪಾಲಿಸುತ್ತಿದ್ದರು ಎಂಬುದನ್ನು ಗಮನಿಸಬೇಕು ಎಂದರು. ಎಸ್‌.ಆರ್‌.ರಾವ್‌ ಅವರ ಪುತ್ರಿ ನಳಿನಿ ರಾವ್‌ ತಂದೆಯವರು ನಡೆಸಿದ ಉತVನನದ ಕುರಿತು ಆನ್‌ಲೈನ್‌ ಉಪನ್ಯಾಸದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next