Advertisement

ಇನ್ನು ಮುಂದೆ ಎಸಿ 3 ಟೈರ್‌ ಕೋಚ್‌ನಲ್ಲೂ ಬೆಡ್‌ರೋಲ್‌: ರೈಲ್ವೆ ಇಲಾಖೆ ನಿರ್ಧಾರ

06:37 PM Sep 18, 2022 | Team Udayavani |

ನವದೆಹಲಿ: ಇನ್ನು ಮುಂದೆ ಎಸಿ 3 ಟೈಯರ್‌ ಇಕಾನಮಿ ಕೋಚ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬೆಡ್‌ ರೋಲ್‌ ನೀಡುವುದಕ್ಕೆ ರೈಲ್ವೆ ಇಲಾಖೆ ನಿರ್ಧರಿಸಿದೆ.

Advertisement

ಇದೇ ವಾರದಿಂದ ಇದು ಜಾರಿಗೆ ಬರಲಿದೆ. ಈ ಹಿಂದೆ ಎಸಿ ಫ‌ಸ್ಟ್‌ ಕ್ಲಾಸ್‌ ಮತ್ತು ಎಸಿ 2 ಟೈಯರ್‌ನಲ್ಲಿ ಮಾತ್ರ ಪ್ರಯಾಣಿಕರಿಗೆ ಮಾತ್ರ ಈ ಸೌಲಭ್ಯವಿತ್ತು.

ಬೆಡ್‌ ರೋಲ್‌ ಹೆಸರಿನಲ್ಲಿ ಒಂದು ಹೊದಿಕೆ, ಒಂದು ದಿಂಬು ಮತ್ತು 2 ಬೆಡ್‌ಶೀಟ್‌ಗಳನ್ನು ಕೊಡಲಾಗುತ್ತಿತ್ತು. ಇನ್ನು ಮುಂದೆ ಈ ಸೌಲಭ್ಯ ಎಸಿ 3 ಟೈಯರ್‌ ಎಕಾನಮಿ ಬೋಗಿಯ ಪ್ರಯಾಣಿಕರಿಗೂ ಅನ್ವಯವಾಗಲಿದೆ.

ಒಂದು ವೇಳೆ ಬೆಡ್‌ರೋಲ್‌ ಸಿಗದೇ ಹೋದಲ್ಲಿ 20 ರೂ. ಮರುಪಾವತಿಯನ್ನೂ ಪಡೆಯುವುದಕ್ಕೆ ಅವಕಾಶ ಪ್ರಯಾಣಿಕರಿಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next