Advertisement

ಇನ್ನು ರೈಲಿನಲ್ಲೂ ತಲೆ ಮಸಾಜ್‌ ಮಾಡಿಸಿಕೊಳ್ಳಿ!

01:32 AM Jun 09, 2019 | Team Udayavani |

ನವದೆಹಲಿ: ರೈಲು ಪ್ರಯಾಣಿಕರಿಗೊಂದು ಸಿಹಿಸುದ್ದಿ. ಇನ್ನು ಮುಂದೆ ನೀವು ರೈಲಲ್ಲಿ ಪ್ರಯಾಣಿಸುತ್ತಿರುವಂತೆಯೇ ಹಾಯಾಗಿ ಕುಳಿತುಕೊಂಡು ಮಸಾಜ್‌ ಮಾಡಿಸಿಕೊಳ್ಳಬಹುದು!

Advertisement

ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣಿಕರಿಗೆ ಅಂಗಮರ್ದನ(ಮಸಾಜ್‌) ಸೌಲಭ್ಯ ಕಲ್ಪಿಸಲು ಇಲಾಖೆ ನಿರ್ಧರಿಸಿದೆ. ಅದರಂತೆ, ಇಂದೋರ್‌ನಿಂದ ಹೊರಡುವ 39 ರೈಲುಗಳಲ್ಲಿ ಈ ಸೇವೆಯನ್ನು ಕಲ್ಪಿಸಲಾಗಿದೆ.

ಆದಾಯದ ಉದ್ದೇಶ: ಹೆಚ್ಚುವರಿ ಆದಾಯ ಗಳಿಕೆ ಹಾಗೂ ಪ್ರಯಾಣಿಕರ ಸಂಖ್ಯೆಯನ್ನೂ ಹೆಚ್ಚಿಸುವುದು ಈ ಯೋಜನೆಯ ಉದ್ದೇಶ. ಇದರಿಂದಾಗಿ ವಾರ್ಷಿಕವಾಗಿ ರೈಲ್ವೆಗೆ ಹೆಚ್ಚುವರಿ 20 ಲಕ್ಷ ರೂ. ಆದಾಯ ಬರಲಿದೆ. ಜತೆಗೆ, ಸುಮಾರು 20 ಸಾವಿರ ಹೆಚ್ಚುವರಿ ಟಿಕೆಟ್‌ಗಳ ಮಾರಾಟದಿಂದಾಗಿ 90 ಲಕ್ಷ ರೂ. ಆದಾಯ ಪಡೆಯುವ ಸಾಧ್ಯತೆಯಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.

ಶೀಘ್ರವೇ ಆರಂಭ: ಮುಂದಿನ 15-20 ದಿನಗಳಲ್ಲೇ ಈ ಸೇವೆ ಆರಂಭವಾಗಲಿದ್ದು, ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಸೇವೆ ನೀಡಲಾಗುತ್ತದೆ. ತಲೆ ಮಸಾಜ್‌ ಮತ್ತು ಪಾದದ ಮಸಾಜ್‌ಗೆ ತಲಾ 100 ರೂ. ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ರೈಲಲ್ಲೂ 3-5 ಮಸಾಜ್‌ ಸೇವಾದಾರರು ಲಭ್ಯವಿರಲಿದ್ದಾರೆ. ರೈಲ್ವೆಯು ಇವರಿಗೆ ಗುರುತಿನ ಚೀಟಿ ಒದಗಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next