ನವದೆಹಲಿ: ಇನ್ನು ಮುಂದೆ ರೈಲ್ವೆಯ ಪ್ರಮುಖ 36 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಧಿಕಾರಿಗಳು “ಭಾವನಾತ್ಮಕ ಬುದ್ಧಿಮತ್ತೆ’ ಪರೀಕ್ಷೆಗೆ ಒಳಗಾಗಬೇಕು!
ಹೀಗೆಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
12 ಖಾಲಿ ಹುದ್ದೆಗಳ ಭರ್ತಿಗೆ ಸದ್ಯದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಇದೇ ಮೊದಲ ಬಾರಿಗೆ ಈ ನೇಮಕಾತಿಯ ವೇಳೆ ರೈಲ್ವೆ ಅಧಿಕಾರಿಗಳನ್ನು “ಎಮೋಷನಲ್ ಕೋಷಂಟ್'(ಭಾವನಾತ್ಮಕ ಬುದ್ಧಿಮತ್ತೆ) ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆನ್‌ಲೈನ್ ಮೂಲಕ ಈ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ:ಆರ್ಥಿಕ ದುಸ್ಥಿತಿ: ಶ್ರೀಲಂಕಾದಲ್ಲಿ ಪೆಟ್ರೋಲ್, ಡೀಸೆಲ್ ಮತ್ತಷ್ಟು ತುಟ್ಟಿ
Related Articles
ಅಂಕಗಳ ಆಧಾರದಲ್ಲಿ ಕೆಲಸ:
ಮುಖ್ಯಸ್ಥ, ಸದಸ್ಯ ಅಥವಾ ಪ್ರಧಾನ ವ್ಯವಸ್ಥಾಪಕ(ಜಿಎಂ) ಸೇರಿದಂತೆ 36 ಪ್ರಮುಖ ಹುದ್ದೆಗಳ ನೇಮಕಾತಿಗೆ ಈ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳನ್ನು ಆಧರಿಸಿ, ಅಧಿಕಾರಿಗಳಿಗೆ ಕಾರ್ಯಾಚರಣಾ ವಿಭಾಗದಲ್ಲಿ ನೇಮಕ ಮಾಡಬೇಕೇ, ಆಡಳಿತಾತ್ಮಕ ಕೆಲಸ ನೀಡಬೇಕೇ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಲಾಗಿದೆ.
ಈ ಆನ್‌ಲೈನ್ ಪರೀಕ್ಷೆಯು 15-20 ನಿಮಿಷಗಳ ಕಾಲ ನಡೆಯಲಿದೆ. ಮುಂದಿನ ದಿನಗಳಲ್ಲಿ ಡಿಆರ್‌ಎಂಗಳ ನೇಮಕದಲ್ಲೂ ಇದೇ ನಿಯಮವನ್ನು ಜಾರಿ ಮಾಡುವ ಸಾಧ್ಯತೆಯಿದೆ.