Advertisement

“ವಂದೇ ಭಾರತ್‌’ಗೆ ವೇಗ! 2 ವರ್ಷಗಳಲ್ಲೇ 75 ರೈಲುಗಳು ಸಿದ್ಧ

08:39 PM Oct 10, 2021 | Team Udayavani |

ನವದೆಹಲಿ: ರೈಲ್ವೆ ಖಾಸಗೀಕರಣದ ಉದ್ದೇಶದಿಂದ ಕೆಲ ತಿಂಗಳ ಹಿಂದೆಯೇ ಖಾಸಗಿ ರೈಲುಗಳಿಗಾಗಿ ಟೆಂಡರ್‌ ಕರೆದಿದ್ದರೂ, ಅದಕ್ಕೆ ಉತ್ತಮ ಸ್ಪಂದನೆ ಸಿಕ್ಕಿರಲಿಲ್ಲ. ಹಾಗಂತ, ಭಾರತೀಯ ರೈಲ್ವೆ ಸುಮ್ಮನೆ ಕುಳಿತಿಲ್ಲ. ಖಾಸಗಿ ರೈಲುಗಳ ಬದಲಾಗಿ ವಂದೇ ಭಾರತ್‌ ರೈಲುಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಓಡಿಸಲು ಚಿಂತನೆ ನಡೆಸಿದೆ.

Advertisement

2023ರ ಆಗಸ್ಟ್‌ನೊಳಗಾಗಿ ಸ್ವದೇಶಿ ನಿರ್ಮಿತ, 75 ಸೆಮಿ ಹೈಸ್ಪೀಡ್‌ ವಂದೇ ಭಾರತ್‌ ರೈಲುಗಳನ್ನು ಉತ್ಪಾದಿಸಲು ಪಣ ತೊಟ್ಟು, ಸಮರೋಪಾದಿಯಲ್ಲಿ ಕೆಲಸ ಶುರುವಿಟ್ಟುಕೊಂಡಿದೆ.

ಕಳೆದ ಸ್ವಾತಂತ್ರ್ಯೋತ್ಸವದ ದಿನ ಕೆಂಪುಕೋಟೆಯಲ್ಲಿ ಭಾಷಣ ಮಾಡುವ ವೇಳೆ ಪ್ರಧಾನಿ ಮೋದಿ ಅವರೇ ಈ ಗಡುವನ್ನು ವಿಧಿಸಿದ್ದರು. ಸ್ವಾತಂತ್ರ್ಯದ ಅಮೃತಮಹೋತ್ಸವದ 75 ವಾರಗಳಲ್ಲಿ (2021ರ ಮಾ.12- 2023ರ ಆ.15) 75 ವಂದೇ ಭಾರತ್‌ ರೈಲುಗಳು ದೇಶದ ಪ್ರತಿಯೊಂದು ಮೂಲೆಯನ್ನೂ ಸಂಪರ್ಕಿಸಲಿದೆ ಎಂದು ಅವರು ಹೇಳಿದ್ದರು.

1 ಲಕ್ಷ ಕಿ.ಮೀ. ಪ್ರಾಯೋಗಿಕ ಸಂಚಾರ:
ಅದರಂತೆ, ರೈಲ್ವೆ ಇಲಾಖೆಯು ಕ್ಷಿಪ್ರವಾಗಿ ತನ್ನ ಕೆಲಸ ಆರಂಭಿಸಿದೆ. ಈಗಾಗಲೇ 44 ರೈಲುಗಳಿಗೆ ಅಗತ್ಯವಿರುವ ವಿದ್ಯುತ್‌ ಉಪಕಪರಣಗಳನ್ನು ಪೂರೈಸುವ ಕೆಲಸವನ್ನು ಖಾಸಗಿ ಕಂಪನಿಗಳಿಗೆ ವಹಿಸಲಾಗಿದೆ. ಡ್ಯಾಂಪರ್‌ಗಳು, ವೀಲ್‌ ಆಕ್ಸೆಲ್‌ಗ‌ಳು, ಟ್ರ್ಯಾಕ್ಷನ್‌ ಮೋಟಾರ್‌, ಬ್ರೇಕ್‌ ವ್ಯವಸ್ಥೆ ಇತ್ಯಾದಿಗಳ ತಯಾರಿ ಆರಂಭವಾಗಿದೆ. 2022ರ ಏಪ್ರಿಲ್‌ನಲ್ಲಿ ರೈಲಿನ ಮಾದರಿ ಸಿದ್ಧಗೊಳ್ಳಲಿದ್ದು, ಕಡ್ಡಾಯವಾಗಿ 1 ಲಕ್ಷ ಕಿ.ಮೀ. ಪ್ರಾಯೋಗಿಕ ಸಂಚಾರ ನಡೆಸಲಿದೆ. ಪ್ರತಿ ತಿಂಗಳಿಗೆ 3 ಹೊಸ ರೇಕುಗಳನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾದರೆ, ಖಂಡಿತಾ ಡೆಡ್‌ಲೈನ್‌ಗೆ ಮುನ್ನ ಎಲ್ಲ ರೈಲುಗಳೂ ಸಿದ್ಧವಾಗಲಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು. ಮೊದಲಿಗೆ 44 ರೈಲುಗಳನ್ನು ತಯಾರಿಸಿ, ನಂತರದಲ್ಲಿ ಉಳಿದ ರೈಲುಗಳ ತಯಾರಿಯೂ ಆರಂಭವಾಗಲಿದೆ ಎಂದು “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

ಇದನ್ನೂ ಓದಿ:‘ಜೈ ಮಾತಾ ದಿ’: ವಾರಾಣಸಿ ಪ್ರಚಾರ ಸಭೆಯಲ್ಲಿ ದುರ್ಗೆಯ ಭಜಿಸಿದ ಪ್ರಿಯಾಂಕಾ ಗಾಂಧಿ

Advertisement

ಪ್ರಸ್ತುತ ಸಂಚರಿಸುತ್ತಿವೆ 2 ರೈಲು:
ವಂದೇ ಭಾರತ್‌ ಎನ್ನುವುದು 16 ಬೋಗಿಗಳ ರೈಲು. ಇದರಲ್ಲಿ ಪ್ರತ್ಯೇಕ ಲೋಕೋಮೋಟಿವ್‌ ಇರುವುದಿಲ್ಲ. ಚೆನ್ನೈನಲ್ಲಿರುವ ಸರ್ಕಾರಿ ಸ್ವಾಮ್ಯದ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ(ಐಸಿಎಫ್)ನಲ್ಲಿ ಈ ರೈಲುಗಳನ್ನು ತಯಾರಿಸಲಾಗಿದೆ. 2018ರ ಅಂತ್ಯದಲ್ಲೇ ಈ ರೈಲಿನ ಮೊದಲ ಮಾದರಿ ಸಿದ್ಧಗೊಂಡಿತ್ತು. ಈಗಾಗಲೇ ಇಂಥ ಎರಡು ರೈಲುಗಳನ್ನು ತಯಾರಿಸಲಾಗಿದ್ದು, ಒಂದು ರೈಲು ದೆಹಲಿ ಮತ್ತು ವಾರಾಣಸಿ ನಡುವೆ ಸಂಚರಿಸುತ್ತಿದ್ದರೆ, ಮತ್ತೂಂದು ದೆಹಲಿ ಮತ್ತು ಕಟ್ರಾ(ಜಮ್ಮು ಮತ್ತು ಕಾಶ್ಮೀರ) ನಡುವೆ ಸಂಚರಿಸುತ್ತಿದೆ. ಇದರ ವೇಗ ಗಂಟೆಗೆ 160 ಕಿ.ಮೀ.

ವಂದೇಭಾರತ್‌ ಕೋಚ್‌ ಉತ್ಪಾದನಾ ಪ್ಲ್ಯಾನ್
2021-22 – 32
2022-23 -672
2023-24 -944

– ಪ್ರಸ್ತುತ ಕಾರ್ಯಾಚರಿಸುತ್ತಿರುವ ವಂದೇ ಭಾರತ್‌ ರೈಲುಗಳು- 2
– 2022ರ ಏಪ್ರಿಲ್‌ನಲ್ಲಿ ಸಿದ್ಧವಾಗಲಿರುವ ನಿರೀಕ್ಷಿತ ಮಾದರಿಗಳು- 2
– 2023ರ ಆಗಸ್ಟ್‌ ವೇಳೆಗೆ ಭಾರತದಾದ್ಯಂತ ನಿಯೋಜನೆಗೊಳ್ಳಲಿರುವ ರೈಲುಗಳು- 75
– ಪ್ರತಿ ರೈಲಿನ ನಿರ್ಮಾಣಕ್ಕೆ ತಗಲುವ ವೆಚ್ಚ – 110-115 ಕೋಟಿ ರೂ.
– ಮೊದಲ 75 ರೈಲುಗಳಿಂದ ಎಷ್ಟು ನಗರಗಳಿಗೆ ಸಂಪರ್ಕ ಸಾಧ್ಯ? – 300
– ರೈಲ್ವೆ ಇಲಾಖೆಯ ಪ್ರಕಾರ ಈ ರೈಲುಗಳು ರಫ್ತಾಗುವ ವರ್ಷ – 2026-27

ವಂದೇ ಭಾರತ್‌ ಸರಣಿಯ ರೈಲುಗಳ ನಿರ್ಮಾಣ ಕಾರ್ಯವು 2023ರ ನಂತರವೂ ನಡೆಯಲಿದೆ. ಏಕೆಂದರೆ, ಈ ಮೇಡ್‌ ಇನ್‌ ಇಂಡಿಯಾ ರೈಲುಗಳನ್ನು 2026-27ರ ವೇಳೆಗೆ ವಿದೇಶಗಳಿಗೆ ರಫ್ತು ಮಾಡುವ ಗುರಿಯನ್ನು ರೈಲ್ವೆ ಇಲಾಖೆ ಹಾಕಿಕೊಂಡಿದೆ.
– ಅಶ್ವಿ‌ನಿ ವೈಷ್ಣವ್‌, ರೈಲ್ವೆ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next