ನವದೆಹಲಿ: 2016ರಲ್ಲಿ ಯೆಮೆನ್ ವೃದ್ಧಾಶ್ರಮದಿಂದ ಅಪಹರಿಸಿ, ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದ ಕೇರಳ ಮೂಲದ ಪಾದ್ರಿ ಟೋಮ್ ಅವರನ್ನು ಐಸಿಸ್ ಉಗ್ರರು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಕಳೆದ ವರ್ಷ ಮಾರ್ಚ್ ನಲ್ಲಿ ಯೆಮೆನ್ ನ ದಕ್ಷಿಣ ಬಂದರು ನಗರಿಯಾದ ಆಡೆನ್ ನಲ್ಲಿನ ವೃದ್ಧಾಶ್ರಮದಲ್ಲಿದ್ದ ಭಾರತೀಯ ಮೂಲದ ಪಾದ್ರಿ ಟೋಮ್ ಅವರನ್ನು ಐಸಿಸ್ ಉಗ್ರರು ಅಪಹರಿಸಿಕೊಂಡು ಹೋಗಿದ್ದರು.
ಭಾರತೀಯ ಮೂಲದ ಕ್ರಿಶ್ಚಿಯನ್ ಪಾದ್ರಿಯನ್ನು ಒಮಾನ್ ನಲ್ಲಿ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ನ್ಯೂಸ್ ಏಜೆನ್ಸಿ ವರದಿ ಮಾಡಿದ್ದು, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಈ ಸುದ್ದಿಯನ್ನು ಖಚಿತಪಡಿಸಿರುವುದಾಗಿ ತಿಳಿಸಿದೆ.