Advertisement

ದಕ್ಷಿಣದಲ್ಲಿ ಮತ್ತೆ ರಾಜಕೀಯ ಧ್ರುವೀಕರಣ

01:04 AM Oct 07, 2022 | Team Udayavani |

ಬೆಂಗಳೂರು: ದಕ್ಷಿಣ ಭಾರತದಲ್ಲಿ ರಾಜಕೀಯ ಧ್ರುವೀಕರಣದ ಭಾಗವಾಗಿ ಎಚ್‌.ಡಿ. ಕುಮಾರಸ್ವಾಮಿ, ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ, ಕೆ. ಚಂದ್ರಶೇಖರ ರಾವ್‌ ಹಾಗೂ ಎಂ.ಕೆ. ಸ್ಟಾಲಿನ್‌ ಜತೆಗೂಡಲು ತೀರ್ಮಾನಿಸಿದ್ದಾರೆ.

Advertisement

ದಲಿತ, ರೈತ, ಅಲ್ಪಸಂಖ್ಯಾಕ ಸಮುದಾಯ ಕೇಂದ್ರಿತ ವಾಗಿ ಆಂದೋಲನ ರೂಪಿಸಲು ಇವರೆಲ್ಲ ಒಂದಾಗಿದ್ದು, ಕರ್ನಾಟಕದ ಮುಂದಿನ ಚುನಾವಣೆಯಲ್ಲಿ ಈ ನಾಲ್ವರೂ ಜಂಟಿ ಪ್ರಚಾರಕ್ಕೆ ನಿರ್ಧರಿಸಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಯ ಲಿದ್ದು, ಅಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿ ಆಂದೋಲನಕ್ಕೆ ಚಾಲನೆ ನೀಡುವರು ಎನ್ನಲಾಗಿದೆ.

ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳು ನಾಡು ರಾಜ್ಯಗಳಲ್ಲಿ ಸ್ಥಳೀಯ ಪ್ರಾದೇಶಿಕ ಪಕ್ಷಗಳು ಗಟ್ಟಿಗೊಳ್ಳುವುದು, ಪರಸ್ಪರ ಸಹಕಾರ ಮತ್ತು ರಾಜಕೀಯ ನೆರವು ಮೂಲಕ ಬಲ ಹೆಚ್ಚಿಸಿ ಕೊಳ್ಳು ವುದು ಇದರ ಉದ್ದೇಶ ಎನ್ನಲಾಗಿದೆ.

ಮುಂದಿನ ಲೋಕಸಭೆ ಚುನಾವಣೆಗೆ ರಾಷ್ಟ್ರ ಮಟ್ಟದಲ್ಲಿ ಭಾರತ ರಾಷ್ಟ್ರೀಯ ಸಮಿತಿ(ಬಿಆರ್‌ಎಸ್‌) ನೇತೃತ್ವದಲ್ಲಿ ಒಕ್ಕೂಟ ರಚನೆಯಾಗಲಿದ್ದು, ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ, ಬಿಹಾರದ ನಿತೀಶ್‌ ಕುಮಾರ್‌ ಹಾಗೂ ತೇಜಸ್ವಿ ಯಾದವ್‌, ಒಡಿಶಾದ ನವೀನ್‌ ಪಟ್ನಾಯಕ್‌, ಉತ್ತರಪ್ರದೇಶದ ಅಖೀಲೇಶ್‌ ಯಾದವ್‌, ದಿಲ್ಲಿಯ ಅರವಿಂದ ಕೇಜ್ರಿವಾಲ್‌, ಪಂಜಾಬ್‌ನ ಭಗವಂತ್‌ ಮಾನ್‌ ಜತೆಗೂಡುವರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನೇತೃತ್ವದಲ್ಲೇ ಮುಂದಿನ ತಿಂಗಳು ಸಭೆ ನಡೆಯಲಿದೆ. ಪ್ರತ್ಯೇಕ ಪ್ರಣಾಳಿಕೆಯೊಂದಿಗೆ ಲೋಕಸಭೆ ಚುನಾವಣೆಯಲ್ಲಿ ಭಾರತ ರಾಷ್ಟ್ರೀಯ ಸಮಿತಿ ಒಕ್ಕೂಟದಡಿ 4 ರಾಜ್ಯಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯವರು ಎಂದು ತಿಳಿದು ಬಂದಿದೆ.

ಶಾಸಕರಿಗೆ ಕೆಸಿಆರ್‌ ಪಾಠ
ಈ ಮಧ್ಯೆ, ಭಾರತ ರಾಷ್ಟ್ರೀಯ ಸಮಿತಿ ಪಕ್ಷದ ಪ್ರಾರಂಭೋತ್ಸವಕ್ಕೆ ತೆರಳಿದ್ದ ಜೆಡಿಎಸ್‌ ಶಾಸಕರಿಗೆ ಕೆ.ಚಂದ್ರಶೇಖರರಾವ್‌ 2 ಗಂಟೆಗಳ ಕಾಲ ಪ್ರಾದೇಶಿಕ ಪಕ್ಷದ ಅಗತ್ಯ ಮತ್ತು ಮಹತ್ವದ ಬಗ್ಗೆ “ಪಾಠ’ ಮಾಡಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿಯತ್ತ ಮುಖ ಮಾಡಿದ್ದ ಜೆಡಿಎಸ್‌ ಶಾಸಕರಿಗೆ ಮುಂದೆ ನಡೆಯಲಿರುವ ರಾಜಕೀಯ ಧ್ರುವೀಕರಣದ ಸ್ಪಷ್ಟತೆ ಸಿಗಲಿ ಎಂಬ ಕಾರಣಕ್ಕೆ ಎಲ್ಲ ಶಾಸಕರನ್ನು ಕುಮಾರಸ್ವಾಮಿ ಅವರು ಭಾರತ ರಾಷ್ಟ್ರೀಯ ಸಮಿತಿ ಪ್ರಾರಂಭೋತ್ಸವಕ್ಕೆ ಕರೆದೊಯ್ದಿದ್ದರು ಎನ್ನಲಾಗಿದೆ.

Advertisement

ಗೌಡರ ಜತೆ ಸಮಾಲೋಚನೆ
ಹೈದರಾಬಾದ್‌ನಿಂದ ವಾಪಸಾದ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಅಲ್ಲಿನ ವಿದ್ಯಮಾನಗಳನ್ನು ವಿವರಿಸಿದ್ದಾರೆ. ಜಗನ್‌ಮೋಹನ್‌ ರೆಡ್ಡಿ, ಎಂ.ಕೆ.ಸ್ಟಾಲಿನ್‌ ಜತೆಗೂ ನಡೆಸಿದ ಚರ್ಚೆಯ ವಿವರವನ್ನೂ ತಿಳಿಸಿದ್ದಾರೆ.

ಬಿಜೆಪಿ ತಡೆಯಲು ತಂತ್ರ
ಕರ್ನಾಟಕದ ಅನಂತರ ಆಂಧ್ರ ಮತ್ತು ತೆಲಂ ಗಾಣ ದತ್ತ ಬಿಜೆಪಿ ಚಿತ್ತ ಹರಿಸಿರುವುದು, ಜೂ. ಎನ್‌ಟಿಆರ್‌ ಮತ್ತು ಅಮಿತ್‌ ಶಾಭೇಟಿ ಜಗನ್‌ ಹಾಗೂ ಕೆಸಿಆರ್‌ಗೆ ತಲೆಬಿಸಿ ಉಂಟು ಮಾಡಿದೆ. ಹೀಗಾಗಿ ಎಚ್‌ಡಿಕೆ ಹಾಗೂಸ್ಟಾಲಿನ್‌ ಸೇರಿಕೊಂಡು ಬಿಜೆಪಿ ತಡೆಗೆ ತಂತ್ರ ರೂಪಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next