Advertisement

ಕಿಡಿಗೇಡಿಗಳ ಫೇಸ್‌ಗೆ ಸಾಫ್ಟ್ ವೇರ್ ಗುದ್ದು !

07:53 AM Dec 29, 2019 | Team Udayavani |

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಕೆಲವು ಕಡೆ ಇವು ಹಿಂಸೆಯ ರೂಪ ತಾಳಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗ “ಫೇಸ್‌ ರೆಕಗ್ನಿಶನ್‌'(ಮುಖ ಗುರುತಿಸುವಿಕೆ) ಅಸ್ತ್ರವನ್ನು ಪ್ರಯೋಗಿಸಲು ಆರಂಭಿಸಿದ್ದಾರೆ.

Advertisement

ಪ್ರತಿಭಟನ ರ್ಯಾಲಿಗಳಲ್ಲಿ ಸಾವಿರಾರು ಮಂದಿ ಭಾಗವಹಿಸುವ ಕಾರಣ, ಹಿಂಸಾಚಾರದಲ್ಲಿ ತೊಡಗಿ ದವರು ಯಾರು ಎಂಬುದನ್ನು ಕರಾರುವಕ್ಕಾಗಿ ಪತ್ತೆಹಚ್ಚುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಫೇಸ್‌ ರೆಕಗ್ನಿಶನ್‌ ಸಾಫ್ಟ್ವೇರ್‌ ಬಳಸಿಕೊಂಡು, ಅದರ ಮೂಲಕ ಕಿಡಿಗೇಡಿಗಳನ್ನು ಪತ್ತೆಹಚ್ಚುವ ಉಪಾಯವನ್ನು ಹೂಡಲಾಗಿದೆ.

ಸಾಫ್ಟ್ ವೇರ್ಗೆ ಅಪ್‌ಲೋಡ್‌
ಪ್ರಸ್ತುತ ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ದೃಶ್ಯಾವಳಿಗಳನ್ನು ಪೊಲೀಸರು ಈ ಸಾಫ್ಟ್ ವೇರ್‌ಗೆ ಅಪ್‌ಲೋಡ್‌ ಮಾಡುತ್ತಿದ್ದು, ಆ ಮೂಲಕ ವೃತ್ತಿಪರ “ಪ್ರತಿಭಟನಕಾರರು’ ಹಾಗೂ “ರೌಡಿ’ಗಳನ್ನು ಪತ್ತೆಹಚ್ಚುವ ಕಾರ್ಯ ವನ್ನು ಈಗಾಗಲೇ ಆರಂಭಿಸಲಾಗಿದೆ.

ಡೇಟಾಸೆಟ್‌ ರೆಡಿ
ಈವರೆಗೆ ದಿಲ್ಲಿ ಪೊಲೀಸರು ಮಾಮೂಲಿ ಅಪರಾಧ ಪ್ರಕರಣ ಗಳ ತನಿಖೆಗೆ ಅನುಕೂಲವಾಗ ಲೆಂದು ಸುಮಾರು 1.5 ಲಕ್ಷ “ಹಿಸ್ಟರಿ ಶೀಟರ್‌’ಗಳ ಫೋಟೋಗಳನ್ನು ಒಳಗೊಂಡ ಡೇಟಾಸೆಟ್‌ ತಯಾರಿಸಿಕೊಂಡಿದ್ದಾರೆ. ಇನ್ನು ಅತ್ಯಂತ ಸೂಕ್ಷ್ಮವಾದ ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ನಿಗಾ ಇಡಲೆಂದು ಶಂಕಿತ ಉಗ್ರರು ಹಾಗೂ ದುಷ್ಕರ್ಮಿಗಳ ಸುಮಾರು 2,000 ಫೋಟೋಗಳುಳ್ಳ ಮತ್ತೂಂದು ಸೆಟ್‌ ಅನ್ನು ಸಿದ್ಧಪಡಿಸಿಟ್ಟು ಕೊಂಡಿದ್ದಾರೆ.

ಮೋದಿ ರ್ಯಾಲಿಯಲ್ಲೂ ಬಳಕೆ
ಡಿ. 22ರಂದು ದಿಲ್ಲಿಯ ರಾಮಲೀಲಾ ಮೈದಾನ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ನಡೆದಾಗಲೂ ಪೊಲೀಸರು ಈ ಸಾಫ್ಟ್ವೇರ್‌ ಅನ್ನು ಮುನ್ನೆಚ್ಚರಿಕೆಯಾಗಿ ಬಳಸಿದ್ದರು. ಈ ರ್ಯಾಲಿ ವೇಳೆ ಉಗ್ರರ ದಾಳಿ ನಡೆಯ ಬಹುದು ಅಥವಾ ಪ್ರತಿ ಭಟನೆ ಮೂಲಕ ಕೆಲವು ಶಕ್ತಿಗಳು ರ್ಯಾಲಿಗೆ ಅಡ್ಡಿ ಉಂಟು ಮಾಡ ಬಹುದು ಎಂಬ ಹಿನ್ನೆಲೆಯಲ್ಲಿಯೂ ಇದನ್ನು ಬಳಸಿಕೊಳ್ಳಲಾಗಿತ್ತು.

Advertisement

ಯಾವಾಗೆಲ್ಲ ಬಳಸಲಾಗಿತ್ತು?
– ನಮ್ಮ ದೇಶದಲ್ಲಿ ಈ ಸಾಫ್ಟ್ವೇರ್‌ ಅನ್ನು ಆರಂಭದಲ್ಲಿ ಬಳಸಿಕೊಂಡದ್ದು ನಾಪತ್ತೆ ಯಾದ ಮಕ್ಕಳನ್ನು ಪತ್ತೆಹಚ್ಚಲು. 2018ರ ಮಾರ್ಚ್‌ನಲ್ಲಿ ದಿಲ್ಲಿ ಹೈಕೋರ್ಟ್‌ ಆದೇಶದ ಅನ್ವಯ ಪೊಲೀಸರು ಈ ಸಾಫ್ಟ್ವೇರ್‌ ಬಳಸಿ, ಕಣ್ಮರೆಯಾದ ಮಕ್ಕಳ ಫೋಟೋ ಗಳೊಂದಿಗೆ ಹೋಲಿಕೆ ಮಾಡಿಕೊಂಡು, ಯಾರೆಲ್ಲ ನಾಪತ್ತೆ ಯಾಗಿದ್ದಾರೆ, ಯಾರು ಪತ್ತೆಯಾಗಿದ್ದಾರೆ ಎಂಬುದನ್ನು ಕಂಡುಕೊಂಡಿದ್ದರು.

– ಇದಕ್ಕೂ ಮುನ್ನ ಎರಡು ಬಾರಿ ಸ್ವಾತಂತ್ರ್ಯ ದಿನದ ಪರೇಡ್‌ನ‌ಲ್ಲಿ ಹಾಗೂ ಒಂದು ಬಾರಿ ಗಣರಾಜ್ಯೋತ್ಸವದ ಪರೇಡ್‌ನ‌ಲ್ಲಿ ದಿಲ್ಲಿ ಪೊಲೀಸರು ಮುಖ ಗುರುತಿಸುವಿಕೆ ಸಾಫ್ಟ್ ವೇರ್‌ನ ಪ್ರಯೋಜನ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next