Advertisement

London: ಚಾಕುವಿನಿಂದ ಇರಿದು ಭಾರತೀಯ ಮೂಲದ ಮಹಿಳೆಯ ಹತ್ಯೆ

08:41 AM May 15, 2024 | Team Udayavani |

ಲಂಡನ್ : ನಗರದ ವಾಯುವ್ಯ ಭಾಗದ ಬಸ್ ನಿಲ್ದಾಣದಲ್ಲಿ 66 ವರ್ಷದ ಭಾರತೀಯ ಮೂಲದ ಮಹಿಳೆಯೊಬ್ಬರನ್ನು ಇರಿದು ಹತ್ಯೆ ಮಾಡಲಾಗಿದೆ. ಘಟನೆಯು ಮೇ 9 ರಂದು ಲಂಡನ್ ಸ್ಥಳೀಯ ಕಾಲಮಾನ ಸುಮಾರು 11.50 ಕ್ಕೆ ಸಂಭವಿಸಿದೆ. ಆರೋಪಿ 22 ವರ್ಷದ ಯುವಕನ ಮೇಲೆ ಕೊಲೆ ಆರೋಪ ಹೊರಿಸಲಾಗಿದ್ದು, ಮಂಗಳವಾರ ನಡೆದ ವಿಚಾರಣೆಯಲ್ಲಿ ಕಸ್ಟಡಿಗೆ ಪಡೆಯಲಾಗಿದೆ.

Advertisement

ವೈದ್ಯಕೀಯ ಕಾರ್ಯದರ್ಶಿಯಾಗಿ ರಾಷ್ಟ್ರೀಯ ಆರೋಗ್ಯ ಸೇವೆ (NHS) ಗಾಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ಅನಿತಾ ಮುಖಿ ಎಂಬ ಮಹಿಳೆ ಹತ್ಯೆಗೀಡಾಗಿದ್ದು, ಕಳೆದ ವಾರ ಲಂಡನ್‌ನ ಎಡ್ಗ್‌ವೇರ್ ಪ್ರದೇಶದ ಬರ್ಂಟ್ ಓಕ್ ಬ್ರಾಡ್‌ವೇ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಜಲಾಲ್ ಡೆಬೆಲ್ಲಾ ಎಂಬಾತ ಎದೆ ಮತ್ತು ಕುತ್ತಿಗೆ ಭಾಗಕ್ಕೆ ಮಾರಣಾಂತಿಕವಾಗಿ ಇರಿದಿದ್ದಾನೆ.

ಪೊಲೀಸರು ಹತ್ಯೆ ನಡೆದ ದಿನ ಉತ್ತರ ಲಂಡನ್‌ನ ಕೊಲಿಂಡೇಲ್ ಪ್ರದೇಶದಲ್ಲಿ ಡೆಬೆಲ್ಲಾನನ್ನು ಬಂಧಿಸಿದ್ದಾರೆ. ಆಕ್ರಮಣಕಾರಿ ಆಯುಧವನ್ನು ಹೊಂದಿದ್ದಕ್ಕಾಗಿ ಆತನ ಮೇಲೆ ಆರೋಪ ಹೊರಿಸಲಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮೆಟ್ರೋಪಾಲಿಟನ್ ಪೊಲೀಸರು, ಆರೋಪಿಯನ್ನು ಲಂಡನ್‌ನ ಓಲ್ಡ್ ಬೈಲಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next