Advertisement

ಲಂಡನ್‌ನಲ್ಲಿ ಭಾರತೀಯ ಮೂಲದ ಯುವತಿ ಬರ್ಬರ ಹತ್ಯೆ

09:42 PM Mar 21, 2022 | Team Udayavani |

ಲಂಡನ್‌: ಯುನೈಟೆಡ್‌ ಕಿಂಗ್‌ಡಮ್‌ನ ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತ ಮೂಲದ ಯುವತಿ ಸಬೀತಾ ಥಾನ್ವಾಣಿ(19) ಅವರನ್ನು ಹತ್ಯೆ ಮಾಡಲಾಗಿದೆ.

Advertisement

ಆರ್ಬರ್‌ ಹೌಸ್‌ನ ವಿದ್ಯಾರ್ಥಿ ಫ್ಲಾಟ್‌ನಲ್ಲಿ ವಾಸವಿದ್ದ ಸಬೀತಾ, ಶನಿವಾರ ಶವವಾಗಿ ಪತ್ತೆಯಾಗಿರುವುದಾಗಿ ತಿಳಿಸಲಾಗಿದೆ.

ಸಬೀತಾ ಲಂಡನ್‌ ಸಿಟಿ ವಿಶ್ವವಿದ್ಯಾಲಯದಲ್ಲಿ ಸೈಕಾಲಜಿ ವಿದ್ಯಾರ್ಥಿನಿಯಾಗಿದ್ದರು. ಟುನೀಶಿಯನ್‌ ಮೂಲದ ಮೆಹೆರ್‌(22) ಎಂಬಾತನೊಂದಿಗೆ ಪ್ರೀತಿ ಮಾಡಿದ್ದಳು ಎನ್ನಲಾಗಿದೆ.

ಇದನ್ನೂ ಓದಿ:ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ: ಪರಿಶೀಲನೆಗೆ ತಜ್ಞರ ಸಮಿತಿ: ಬಿ.ಸಿ. ನಾಗೇಶ್‌

ಅವರ ಸಾವಿಗೆ ನಿಖರ ಕಾರಣ ಸಿಗದ ಹಿನ್ನೆಲೆ, ಪ್ರಿಯತಮ ಮೆಹೆರ್‌ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next