Advertisement

ಟೆಕ್ಸಾಸ್‌ ಶಾಲೆಯಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ

10:12 PM May 17, 2022 | Team Udayavani |

ಟೆಕ್ಸಾಸ್‌: ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನ ಮೇಲೆ ಅಮೆರಿಕದ ಟೆಕ್ಸಾಸ್‌ನ ಶಾಲೆಯಲ್ಲಿ ಹಲ್ಲೆ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

Advertisement

ಕೊಪೆಲ್‌ ಮಿಡಲ್‌ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಶಾಲೆ 3 ದಿನಗಳ ಕಾಲ ಅಮಾನತು ಮಾಡಿದ್ದರೆ ಹಲ್ಲೆ ಮಾಡಿರುವ ವಿದ್ಯಾರ್ಥಿಯನ್ನು ಕೇವಲ ಒಂದು ದಿನದ ಮಟ್ಟಿಗೆ ಅಮಾನತು ಮಾಡಿರುವುದಾಗಿ ಹಲ್ಲೆಗೊಳಗಾದ ವಿದ್ಯಾರ್ಥಿಯ ಪೋಷಕರು ದೂರಿದ್ದಾರೆ.

ಇದನ್ನೂ ಓದಿ : ಪಾಕ್‌ನಲ್ಲಿ ಇಬ್ಬರ ಸಿಖ್ಖರ ಹತ್ಯೆ: ಎಫ್ಐಆರ್‌ ದಾಖಲು

ಒಂದೆಡೆ ಕುಳಿತಿದ್ದ ಭಾರತೀಯ ವಿದ್ಯಾರ್ಥಿಯ ಬಳಿ ಬರುವ ಮತ್ತೂಬ್ಬ ವಿದ್ಯಾರ್ಥಿ ಆ ಸೀಟನ್ನು ತನಗೆ ಬಿಟ್ಟುಕೊಡಲು ಕೇಳುತ್ತಾನೆ. ಅದಕ್ಕೆ ಆತ ಒಪ್ಪದಿದ್ದಾಗ ಹಲ್ಲೆ ಮಾಡಿ, ಆತನನ್ನು ಕೆಳಗೆ ಬೀಳಿಸುವ ವಿಡಿಯೋ ಅದಾಗಿದೆ. ವಿಡಿಯೋ ನೋಡಿರುವ ನೆಟ್ಟಿಗರು ಶಾಲಾಡಳಿತದ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಶಾಲಾ ಆಡಳಿತ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next