Advertisement

ಸಯಾಮಿ ಅವಳಿಗಳಿಗೆ ಭಾರತ ಮೂಲದ ವೈದ್ಯನಿಂದ ಯಶಸ್ವಿ ಶಸ್ತ್ರಚಿಕಿತ್ಸೆ

07:32 PM Sep 13, 2021 | Team Udayavani |

ಜೆರುಸಲೇಂ: ಪ್ರಸ್ತುತ ಯು.ಕೆ.ಯಲ್ಲಿರುವ ಭಾರತೀಯ ಮೂಲದ ಜಗತ್ಪ್ರಸಿದ್ಧ  ನರಶಸ್ತ್ರಚಿಕಿತ್ಸಾ ತಜ್ಞ ಡಾ. ನೂರುಲ್‌ ಒವೇಸ್‌ ಜೀಲಾನಿ ಅವರು ಸಯಾಮಿ ಅವಳಿಗಳನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಮಕ್ಕಳೂ ಇನ್ನು ಸಹಜ ಜೀವನ ನಡೆಸಬಹುದಾಗಿದೆ.

Advertisement

ಇಸ್ರೇಲ್‌ನಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದ್ದು, ಕಾಶ್ಮೀರದವರಾದ ಡಾ. ನೂರುಲ್‌ ಅವರು ಇದೇ ಮೊದಲ ಬಾರಿಗೆ ಯು.ಕೆ.ಯ ಹೊರಗಡೆ ಇಂಥದ್ದೊಂದು ಆಪರೇಷನ್‌ ನಡೆಸಿದ್ದಾರೆ. ಇಸ್ರೇಲ್‌ನ ಸೊರೊಕಾ ಆಸ್ಪತ್ರೆಯ ವೈದ್ಯರ ಕೋರಿಕೆಯ ಮೇರೆಗೆ ಅವರು ಅಲ್ಲಿಗೆ ತೆರಳಿ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿಸಿದ್ದಾರೆ.

ಇಸ್ರೇಲ್‌ನ ಅವಳಿಗಳ ತಲೆಗಳು ಒಂದಕ್ಕೊಂದು ಅಂಟಿಕೊಂಡಿದ್ದು, ಅದನ್ನು ಬೇರ್ಪಡಿಸುವುದು ಅತ್ಯಂತ ಸಂಕೀರ್ಣ ಕೆಲಸವಾಗಿತ್ತು. ಡಾ.ನೂರುಲ್‌ ಅವರು ಈಗಾಗಲೇ ಇಂಥ 4 ಶಸ್ತ್ರಚಿಕಿತ್ಸೆ ನಡೆಸಿರುವ ಹಿನ್ನೆಲೆಯಲ್ಲಿ ಅವರನ್ನೇ ಕರೆಸಿ ನೆರವು ಪಡೆಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next