ವಾಷಿಂಗ್ಟನ್: ಭಾರತೀಯ ಅಮೆರಿಕನ್ ರಾಜಾ ಕೃಷ್ಣಮೂರ್ತಿ ಅವರು ಡೆಮಾಕ್ರಾಟಿಕ್ ಪಕ್ಷದ ಪ್ರೈಮರಿ ಚುನಾವಣೆಯಲ್ಲಿ ಗೆದ್ದಿದ್ದಾರೆ.
Advertisement
ಇಲಿನಾಯ್ಸ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಪ್ರತಿಸ್ಪರ್ಧಿ ಜುನೈದ್ ಅಹ್ಮದ್ ವಿರುದ್ಧ ಶೇ.71 ಮತಗಳನ್ನು ಪಡೆದು ಜಯಸಾಧಿಸಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಅವರು ರಿಪಬ್ಲಿಕನ್ ಪಕ್ಷದ ಕ್ರಿಸ್ ಡಾರ್ಗಿಸ್ ಅವರನ್ನು ಎದುರಿಸಲಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ರಾಜಾ ಕೃಷ್ಣಮೂರ್ತಿ ತಮ್ಮ ಪಕ್ಷದ ನಾಯಕರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಸಂಸತ್ ಸದಸ್ಯನಾಗಿರುವ ತಾವು ಮಧ್ಯಮ ವರ್ಗದ ಪರ ಸದಾ ಹೋರಾಟ ನಡೆಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.