ಹ್ಯೂಸ್ಟನ್: ಹ್ಯಾರಿಸ್ ಕೌಂಟಿಯ ನ್ಯಾಯಮೂರ್ತಿಯಾಗಿ ಭಾರತೀಯ ಮೂಲದ ಮಣಿಪ್ರೀತ್ ಮೋನಿಕಾ ಸಿಂಗ್ ಪ್ರಮಾಣವಚನ ಸ್ವೀಕರಿಸಿದ್ದು, ಈ ಮೂಲಕ ಅಮೆರಿಕದಲ್ಲಿ ನ್ಯಾಯಮೂರ್ತಿ ಪಟ್ಟಕ್ಕೇರಿದ ಮೊದಲ ಸಿಖ್ ಧರ್ಮದ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಹ್ಯಾರಿಸ್ ಕೌಂಟಿಯ ಸಿವಿಲ್ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಪದಗ್ರಹಣಗೊಂಡಿರುವ ಸಿಂಗ್, ಹ್ಯೂಸ್ಟನ್‌ನಲ್ಲಿಯೇ ಹುಟ್ಟಿ ಬೆಳೆದಿದ್ದು, ಪ್ರಸಕ್ತ ಪತಿ ಮತ್ತು ಮಕ್ಕಳೊಂದಿಗೆ ಬೆಲಾರೈನಲ್ಲಿ ವಾಸವಿದ್ದಾರೆ.
ಸಿಂಗ್ ಅವರ ತಂದೆ ಭಾರತೀಯರಾಗಿದ್ದು, 1970ರ ದಶಕದಲ್ಲಿ ಅಮೆರಿಕಕ್ಕೆ ವಲಸೆ ಬಂದರು ಎನ್ನಲಾಗಿದೆ. ಇನ್ನು ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಸಿಖ್ ಸಮುದಾಯದ ಮಹಿಳೆಯೊಬ್ಬರು ಜಡ್ಜ್ ಆಗಿದ್ದು, ಇದು ಇಡೀ ಸಮುದಾಯಕ್ಕೆ ಹೆಮ್ಮೆಯ ವಿಚಾರ ಎಂದು ಹ್ಯೂಸ್ಟನ್ ಮೇಯರ್ ಸಿಲ್ವೆಸ್ಟರ್ ಹೇಳಿದ್ದಾರೆ.