Advertisement

ಲಂಡನ್‌: ಬಾಲಕನ ಕೊಲೆಗೈದ ಭಾರತೀಯ ಮೂಲದ ವ್ಯಕ್ತಿ ಸೆರೆ

04:03 PM Mar 20, 2017 | Team Udayavani |

ಲಂಡನ್‌ : ಉತ್ತರ ಪ್ರದೇಶದ ಫಿನ್ಸ್‌ಬರಿ ಪಾರ್ಕ್‌ ಪ್ರದೇಶದಲ್ಲಿ ಒಂದು ವರ್ಷದ ಬಾಲಕನನ್ನು ಕೊಂದು ಆತನ ಅವಳಿ ಸಹೋದರಿಯ ಮೇಲೆ ಹಲ್ಲೆಗೈದ ಆರೋಪದ ಮೇಲೆ ಭಾರತೀಯ ಮೂಲದ, 33 ವರ್ಷ ಪ್ರಾಯದ  ವಿದ್ಯಾಸಾಗರ ದಾಸ್‌ ಎಂಬಾತನನ್ನು ಸ್ಕಾಟ್ಲಂಡ್‌ ಯಾರ್ಡ್‌ ಪೊಲೀಸರು ಬಂಧಿಸಿದ್ದಾರೆ. 

Advertisement

ಕೊಲೆ ಆರೋಪಿ ವಿದ್ಯಾ ಸಾಗರ ದಾಸ್‌ ಕೂಡ ಫಿನ್ಸ್‌ಬರಿ ಪಾರ್ಕ್‌ ಪ್ರದೇಶದ ನಿವಾಸಿಯಾಗಿದ್ದಾನೆ. ಹೊಟೇಲ್‌ ಒಂದರಲ್ಲಿ ರಾತ್ರಿ ಶಿಫ್ಟ್ನಲ್ಲಿ ದುಡಿಯುತ್ತಿದ್ದ ಈತ ಈಚೆಗೆ ತನ್ನ ಉದ್ಯೋಗವನ್ನು ತೊರೆದಿದ್ದ. 

ಕೊಲೆ ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ವಿದ್ಯಾಸಾಗರ್‌ ದಾಸ್‌ ಫಿನ್ಸ್‌ಬರಿಯಿಂದ ಆರು ಕಿ.ಮೀ.ದೂರದ ಹ್ಯಾಕ್‌ನೇ ಲಂಡನ್‌ ಬರೋದಲ್ಲಿ ಪತ್ತೆಯಾದ. ಸ್ಕಾಟ್ಲಂಡ್‌ ಯಾರ್ಡ್‌ ಪೊಲೀಸರು ಈ ಕೊಲೆ ಪ್ರಕರಣದ ರಹಸ್ಯವನ್ನು ಭೇದಿಸಿದ್ದಾರೆ. ಇದು ಕೌಟುಂಬಿಕ ಕಾರಣದಿಂದ ನಡೆದಿರುವ ಕೊಲೆ ಕೃತ್ಯವೆಂದು ಪೊಲೀಸರು ಹೇಳಿದ್ದಾರೆ. 

ಬಾಲಕನ ತಲೆಗೆ ಸುತ್ತಿಗೆಯಿಂದ ಬಲವಾದ ಏಟು ಕೊಟ್ಟು ಸಾಯಿಸಿದ್ದ ಕೊಲೆ ಆರೋಪಿ ವಿದ್ಯಾಸಾಗರ್‌ ದಾಸ್‌ ಅನಂತರ ಆ ಬಾಲಕನ ಅವಳಿ ಸಹೋದರಿಯ ಮೇಲೂ ಮಾರಣಾಂತಿಕ ಹಲ್ಲೆ ಎಸಗಿದ್ದ. ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next