Advertisement

Canada ಮದುವೆಯಲ್ಲಿ ಪಂಜಾಬ್ ಮೂಲದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ

02:52 PM May 29, 2023 | Vishnudas Patil |

ಒಟ್ಟಾವಾ: ಗ್ಯಾಂಗ್ ಘರ್ಷಣೆಯ ಶಂಕಿತ ಪ್ರಕರಣದಲ್ಲಿ, ಕೆನಡಾದ ಪೊಲೀಸರ ಅತ್ಯಂತ ಹಿಂಸಾತ್ಮಕ ದರೋಡೆಕೋರರ ಪಟ್ಟಿಯಲ್ಲಿದ್ದ 28 ವರ್ಷದ ಪಂಜಾಬ್ ಮೂಲದ ಗ್ಯಾಂಗ್ ಸ್ಟರ್ ಒಬ್ಬನನ್ನು  ವ್ಯಾಂಕೋವರ್ ನಗರದ ಮದುವೆಯ ಸ್ಥಳದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.

Advertisement

ಸ್ಥಳೀಯ ಪತ್ರಿಕೆ ವ್ಯಾಂಕೋವರ್ ಸನ್‌ನ ವರದಿಗಳ ಪ್ರಕಾರ, ಅಮರ್‌ಪ್ರೀತ್ (ಚುಕ್ಕಿ) ಸಮ್ರಾ ಎಂಬಾತ ಫ್ರೇಸರ್‌ವ್ಯೂ ಬ್ಯಾಂಕ್ವೆಟ್ ಹಾಲ್‌ನ ಡ್ಯಾನ್ಸ್ ಫ್ಲೋರ್‌ನಲ್ಲಿ ಇತರ ವಿವಾಹ ಅತಿಥಿಗಳೊಂದಿಗೆ ಇದ್ದಾಗ ಗುಂಡು ಹಾರಿಸಲಾಗಿದೆ. ಸಮ್ರಾ ಮತ್ತು ಆತನ ಅಣ್ಣ, ದರೋಡೆಕೋರ ರವೀಂದರ್ ಇಬ್ಬರೂ ಮದುವೆಗೆ ಅತಿಥಿಗಳಾಗಿ ಆಹ್ವಾನಿತರಾಗಿದ್ದರು. ಅವರು ಯುಎನ್ ಗ್ಯಾಂಗ್‌ನೊಂದಿಗೆ ಗುರುತಿಸಿ ಕೊಂಡಿದ್ದರು ಎಂದು ತಿಳಿದು ಬಂದಿದೆ.

ಕೆಲವು ಅಪರಿಚಿತ ವ್ಯಕ್ತಿಗಳು ಮತ್ತೆ ಸಭಾಂಗಣಕ್ಕೆ ತೆರಳಿದರು ಮತ್ತು ಸಂಗೀತವನ್ನು ನಿಲ್ಲಿಸಲು ಡಿಜೆಗೆ ಆದೇಶಿಸಿದರು ಎಂದು ಕೆಲವು ಅತಿಥಿಗಳು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಆ ಸಮಯದಲ್ಲಿ ಸುಮಾರು 60 ಅತಿಥಿಗಳು ಸ್ಥಳದಲ್ಲಿ ಹಾಜರಿದ್ದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next