Advertisement
ಗುಜರಾತ್‌ನಲ್ಲಿ ಜನಿಸಿದ ಕಲಾವಿದರಾದ ಜಿಗ್ನೇಶ್ ಮತ್ತು ಯಶ್ ಪಟೇಲ್ ಪ್ರಸ್ತುತ ಪಶ್ಚಿಮ ಲಂಡನ್‌ನಲ್ಲಿ ನೆಲೆಸಿದ್ದಾರೆ. ಕಳೆದ ಗುರುವಾರ 96 ವರ್ಷದ ರಾಣಿ ಎರಡನೇ ಎಲಿಜಬೆತ್ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಈ ಕಲಾವಿದರು ಬೃಹತ್ ಗೋಡೆ ಚಿತ್ರ ಬಿಡಿಸಿದ್ದಾರೆ.
ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಮೃತದೇಹವನ್ನು ಬ್ರಿಟನ್ ಸಂಸತ್‌ನ ವೆಸ್ಟ್‌ಮಿನಿಸ್ಟರ್ ಹಾಲ್‌ನ ಅಂತಿಮ ದರ್ಶನಕ್ಕಿಡಲಾಗಿದೆ.
Related Articles
Advertisement
ಅಂತ್ಯಕ್ರಿಯೆಗೆ 9 ಮಿಲಿಯನ್ ಡಾಲರ್ ಖರ್ಚು:ರಾಣಿ ಎರಡನೇ ಎಲಿಜಬೆತ್ ಅವರ ಅಂತ್ಯಕ್ರಿಯೆಗೆ ಬ್ರಿಟನ್ ಸರ್ಕಾರ 9 ಮಿಲಿಯನ್ ಡಾಲರ್ ವ್ಯಯಿಸುತ್ತಿದೆ. ಅಂತ್ಯಕ್ರಿಯೆಯಲ್ಲಿ ವಿಶ್ವದ ಹಲವು ನಾಯಕರು ಭಾಗವಹಿಸುತ್ತಿದ್ದಾರೆ 5 ಮಿಲಿಯನ್ ಜನರಿಂದ ವೀಕ್ಷಣೆ:
ರಾಣಿ ಎರಡನೇ ಎಲಿಜಬೆತ್ ಅವರ ಮೃತದೇಹವನ್ನು ಎಡಿನ್‌ಬರ್ಗ್‌ನಿಂದ ಲಂಡನ್‌ಗೆ ವಿಶೇಷ ವಿಮಾನದಲ್ಲಿ ರವಾನಿಸಲಾಯಿತು. ಆನ್‌ಲೈನ್‌ನಲ್ಲಿ ರಾಣಿಯ ಅಂತಿಮ ವಿಮಾನಯಾತ್ರೆಯನ್ನು ಲೈವ್‌ನಲ್ಲಿ 4.79 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಜತೆಗೆ ಹೆಚ್ಚುವರಿಯಾಗಿ 0.25 ಮಿಲಿಯನ್ ಜನರು ಯೂಟೂಬ್ ಚಾನಲ್‌ನಲ್ಲಿ ವೀಕ್ಷಿಸಿದ್ದಾರೆ ಎಂದು ಫ್ಲೈಟ್‌ಟ್ರೇಡರ್ 24 ಮಾಹಿತಿ ನಿಡಿದೆ.