Advertisement

ಉಗ್ರರಿಂದ ಹತ್ಯೆಯಾದ ಸಹೋದರನಿಗಾಗಿ ಕುಟುಂಬದ ಇಬ್ಬರು ಸೇನೆಗೆ

06:41 PM Jul 24, 2019 | sudhir |

ಮಣಿಪಾಲ: ದೇಶದ ಕುರಿತು ಸೇನೆಯ ಕುರಿತು ಎಲ್ಲರೂ ಅಭಿಮಾನವನ್ನು ಹೊಂದಿದವರೇ. ಆದರೆ ಈ ಅತ್ಯುನ್ನತ ಸೇವೆಗೆ ನಮ್ಮಲ್ಲಿ ಕೆಲವೇ ಕುಟುಂಬಗಳು ಅರ್ಪಿಸಿಕೊಂಡಿದೆ. ಗಡಿಯಲ್ಲಿನ ಪ್ರಕ್ಷುಬ್ದ ಪರಿಸ್ಥಿತಿಗಳನ್ನು ಗಮನಿಸಿ ಸೇನೆಯತ್ತ ಮುಖ ಮಾಡುವ ಜನರು ಸ್ವಲ್ಪ ಆತಂಕಕ್ಕೆ ಒಳಗಾಗಿದ್ದರೂ ಆಶ್ಚರ್ಯ ಇಲ್ಲ. ಆದರೆ ನೈಜ ದೇಶ ಪ್ರೇಮದ ಎದುರು ಯಾವುದೇ ಜೀವ ಭಯ ದೊಡ್ಡ ಲೆಕ್ಕವೇ ಅಲ್ಲ. ನನ್ನ ಒಬ್ಬ ಮಗ ಭಯೋತ್ಪಾದಕರ ಕೈಯಿಂದ ಹುತಾತ್ಮನಾದರೆ ಏನಂತೆ, ನನ್ನ ಎರಡು ಮಕ್ಕಳನ್ನೂ ಸೇನೆಗೆ ಸೇರಿಸುತ್ತೇನೆ ಎಂದು ಹೇಳಿದ ಅನೇಕ ಕುಟುಂಬಗಳು ನಮ್ಮಲ್ಲಿದೆ.

Advertisement

ಫೆಬ್ರವರಿ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಯೋಧ ಔರಂಗಜೇಬ್‌ ಉಗ್ರರ ನಡುವಿನ ಕಾಳಗದಲ್ಲಿ ವೀರ ಮರಣವನ್ನಪ್ಪಿದ್ದರು. ಗಡಿಯಲ್ಲಿ ಸೇನೆ ನಡೆಸಿದ “ಅಪರೇಶನ್‌ ಆಲ್‌ ಔಟ್‌’ನ ಸಂದರ್ಭ ಔರಂಗಜೇಬ್‌ ಅವರನ್ನು ಉಗ್ರರು ಅಪಹರಿಸಿ ಹತ್ಯೆ ಮಾಡಿತ್ತು. ಇವರ ತಂದೆ ಮೊಹಮ್ಮದ್‌ ಹನೀಫ್ ಅವರೂ ಸೇನೆಯಲ್ಲಿ ಸೇವೆ ಸಲ್ಲಿಸಿದ ಅನುಭವನ್ನು ಹೊಂದಿದ್ದರು.

ಇಷ್ಟಕ್ಕೆ ಸುಮ್ಮನಾಗದ ಕುಟುಂಬ ಇದೀಗ ಔರಂಗಜೇಬ್‌ನ 2 ಮಂದಿ ಸಹೋದರರಾದ ತಾರಿಖ್‌ (23) ಮತ್ತು ಶಾಬೀರ್‌ (21) ಅವರನ್ನು ಸೇನೆಗೆ ನೀಡಿದೆ. ತಮ್ಮ ಸಹೋದರನನ್ನು ಹತ್ಯೆ ಮಾಡಿದ್ದಕ್ಕೆ ಪ್ರತಿಯಾಗಿ ಇಬ್ಬರು ಸಹೋದರರನ್ನು ಕುಟುಂಬ ದೇಶಕ್ಕೆ ನೀಡಿದೆ. ಪೂಂಚ್‌ನ ಸೂರನ್‌ಕೋಟೆಯಲ್ಲಿ ನಡೆದ ಸೇನೆಯ ನೇಮಕಾತಿಯಲ್ಲಿ ಈ ಪ್ರಕ್ರಿಯೆ ನಡೆದಿದೆ. ಈ ಮೂಲಕ ದೇಶದ ಮೇಲಿನ ಅಭಿಮಾನ ಮತ್ತು ರಾಷ್ಟ್ರ ಭಕ್ತಿಗಾಗಿ ತಮ್ಮ ಕುಟುಂಬವನ್ನು ಅರ್ಪಿಸಿಕೊಂಡಿದೆ.

ಮಾಜಿ ಸೈನಿಕರಾಗಿರುವ ಹುತಾತ್ಮ ಔರಂಗಜೇಬ್‌ ಅವರ ತಂದೆ ಮೊಹಮ್ಮದ್‌ ಹನೀಫ್ ಸಲಾನಿ 3 ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next