Advertisement

ಜಾಗತಿಕ ವಿದ್ಯಾರ್ಥಿ ಪ್ರಶಸ್ತಿ ಫೈನಲ್‌ ಪಟ್ಟಿಯಲ್ಲಿ ಅನಘಾ

09:59 PM Sep 02, 2022 | Team Udayavani |

ಲಂಡನ್‌: ಜಾಗತಿಕ ವಿದ್ಯಾರ್ಥಿ ಪ್ರಶಸ್ತಿ 2022ರ ಅಂತಿಮ 10 ಸ್ಪರ್ಧಿಗಳ ಪಟ್ಟಿಯಲ್ಲಿ ಭಾರತದ ಅನಘಾ ರಾಜೇಶ್‌ ಸ್ಥಾನ ಪಡೆದಿದ್ದಾರೆ.

Advertisement

ಸಮಾಜದಲ್ಲಿ ಬದಲಾವಣೆ ತರುವುದಕ್ಕಾಗಿ ಯತ್ನಿಸುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ 1,00,000 ಡಾಲರ್‌ ಅನ್ನು ಬಹುಮಾನವಾಗಿ ಕೊಡಲಾಗುತ್ತದೆ.

ಗೋವಾದ ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿ ಅನಘಾ, ಮಾನಸಿಕ ಆರೋಗ್ಯದ ಪ್ರಚಾರಕರೂ ಆಗಿದ್ದಾರೆ. “Yours Mindfully” ಹೆಸರಿನ ಎನ್‌ಜಿಒ ಸ್ಥಾಪಿಸಿಕೊಂಡು, ಮಾನಸಿಕ ಆರೋಗ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನದಲ್ಲಿದ್ದಾರೆ.

ಈ ಪ್ರಶಸ್ತಿಗೆ ಒಟ್ಟು 150 ರಾಷ್ಟ್ರಗಳಿಂದ 7000 ಅರ್ಜಿಗಳು ಬಂದಿದ್ದು, ಅದರಲ್ಲಿ ಅನಘಾ ಟಾಪ್‌ 10ರೊಳಗಿನ ಸ್ಥಾನದಲ್ಲಿದ್ದಾರೆ. ಮುಂದಿನ ತಿಂಗಳು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದ್ದು, ಅಲ್ಲಿ ವಿಜೇತರ ಘೋಷಣೆಯಾಗುವ ಸಾಧ್ಯತೆಯಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next