Advertisement

ಎಫ್ಐಎಚ್‌ ಪುರುಷರ ಹಾಕಿ ಫೈವ್ಸ್‌ ಸರಣಿ: ಭಾರತ ಫೈನಲ್‌ಗೆ

10:55 PM Jun 05, 2022 | Team Udayavani |

ಲುಸಾನ್ನೆ: ಎಫ್ಐಎಚ್‌ ಪುರುಷರ ಹಾಕಿ ಫೈವ್ಸ್‌ ಸರಣಿಯಲ್ಲಿ ಭಾರತ ಫೈನಲ್‌ ತಲುಪಿದೆ. ಪ್ರಶಸ್ತಿ ಸಮರದಲ್ಲಿ ಪೋಲೆಂಡ್‌ ತಂಡವನ್ನು ಎದುರಿಸಲಿದೆ.

Advertisement

ರವಿವಾರದ ಎರಡೂ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿತು. ಮಲೇಷ್ಯವನ್ನು 7-3, ಪೋಲೆಂಡನ್ನು 6-2 ಗೋಲುಗಳಿಂದ ಮಣಿಸಿತು. ಶನಿವಾರ ಸ್ವಿಜರ್‌ಲ್ಯಾಂಡ್‌ ವಿರುದ್ಧ 4-3 ಜಯ ಸಾಧಿಸಿತ್ತು.

ಆದರೆ ಪಾಕಿಸ್ಥಾನ ವಿರುದ್ಧ 2-2 ಡ್ರಾ ಮಾಡಿಕೊಂಡಿತ್ತು. ಹೀಗೆ ರೌಂಡ್‌ ರಾಬಿನ್‌ ಲೀಗ್‌ ಕೂಟದಲ್ಲಿ 3 ಗೆಲುವು, ಒಂದು ಡ್ರಾ ಸಾಧನೆಯೊಂದಿಗೆ ಭಾರತ 10 ಅಂಕಗಳೊಂದಿಗೆ ಅಗ್ರಸ್ಥಾನಿಯಾಯಿತು. ಪೋಲೆಂಡ್‌ ದ್ವಿತೀಯ ಸ್ಥಾನ ಗಳಿಸಿತು (6 ಅಂಕ).

Advertisement

Udayavani is now on Telegram. Click here to join our channel and stay updated with the latest news.

Next