Advertisement

ನಾಳೆಯಿಂದ 15ನೇ ಹಾಕಿ ವಿಶ್ವಕಪ್‌;  ಡಿ ಗುಂಪಿನಲ್ಲಿ ಹರ್ಮನ್‌ಪ್ರೀತ್‌ ನಾಯಕತ್ವದ ಭಾರತ

11:30 PM Jan 11, 2023 | Team Udayavani |

ಭುವನೇಶ್ವರ: ಶುಕ್ರವಾರದಿಂದ ಒಡಿಶಾದ ಭುವನೇಶ್ವರ-ರೂರ್ಕೆಲಾದಲ್ಲಿ 15ನೇ ಹಾಕಿ ವಿಶ್ವಕಪ್‌ ಕೂಟವು ಆರಂಭವಾಗಲಿದೆ. ರಾಜ್ಯದ ಎರಡು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ.ಇದರಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ತಲಾ 4 ತಂಡಗಳನ್ನು ಎ,ಬಿ,ಸಿ,ಡಿ ಎಂದು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಭಾರತ “ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

Advertisement

ನಾಲ್ಕು ಗುಂಪುಗಳಲ್ಲಿ 16 ತಂಡಗಳ ಸ್ಪರ್ಧೆ

“ಎ’ ಗುಂಪು
ಆಸ್ಟ್ರೇಲಿಯ (ನಾಯಕ: ಎಡ್ಡೀ ಆಕೆಂಡೆನ್‌, ಕೋಚ್‌: ಕಾಲಿನ್‌ ಬ್ಯಾಚ್‌)
ಆರ್ಜೆಂಟೀನಾ (ನಾಯಕ: ಮತಿಯಾಸ್‌ ರೇ, ಕೋಚ್‌: ಮರಿಯಾನೊ ರಾಂಕೊನಿ)
ಫ್ರಾನ್ಸ್‌ (ನಾಯಕ: ವಿಕ್ಟರ್‌ ಚಾರ್ಲೆಟ್‌, ಕೋಚ್‌: ಫ್ರೆಡ್‌ ಸೊಯೆಝ್)
ದಕ್ಷಿಣ ಆಫ್ರಿಕಾ (ನಾಯಕ: ಡಯಾನ್‌ ಕ್ಯಾಸಿಯೆಮ್‌, ಕೋಚ್‌: ಚೆಸ್ಲಿನ್‌ ಗೀ)

“ಬಿ’ ಗುಂಪು
ಬೆಲ್ಜಿಯಂ (ನಾಯಕ: ಫೆಲಿಕ್ಸ್‌ ಡೆನಾಯೆರ್‌, ಕೋಚ್‌: ಮಿಚೆಲ್‌ ಹ್ಯೂವೆಲ್‌)
ಜರ್ಮನಿ (ನಾಯಕ: ಮ್ಯಾಟ್ಸ್‌ ಗ್ರಾಂಬುಶ್‌, ಕೋಚ್‌: ಆಂಡ್ರೆ ಹೆನಿಂಗ್‌)
ದಕ್ಷಿಣ ಕೊರಿಯ (ನಾಯಕ: ಲೀ ನಾಮ್ಯಾಂಗ್‌, ಕೋಚ್‌: ಶಿನ್‌ ಸಿಯೊಕ್‌ )
ಜಪಾನ್‌ (ನಾಯಕ: ಸೆರೆನ್‌ ತನಕ, ಕೋಚ್‌: ಅಕಿರ ತಕಹಶಿ)

“ಸಿ’ ಗುಂಪು
ಚಿಲಿ (ನಾಯಕ: ಫೆರ್ನಾಂಡೊ ರೆನ್‌l, ಕೋಚ್‌: ಜಾರ್ಜ್‌ ಡಬಾಂಚ್‌)
ಮಲೇಷ್ಯಾ (ನಾಯಕ: ಜಲೀಲ್‌ ಮರ್ಹಾನ್‌, ಕೋಚ್‌: ಅರುಳ್‌ ಆಂಥೋನಿ)
ನೆದರ್ಲೆಂಡ್ಸ್‌ (ನಾಯಕ: ಥಿಯರಿ ಬ್ರಿಂಕ್‌ಮ್ಯಾನ್‌, ಕೋಚ್‌: ಜೆರೋನ್‌ ಡೆಲ್ಮೀ)
ನ್ಯೂಜಿಲ್ಯಾಂಡ್‌ (ನಾಯಕ: ನಿಕ್‌ ವುಡ್ಸ್‌ , ಕೋಚ್‌: ಗ್ರೆಗ್‌ ನಿಕೋಲ್‌)

Advertisement

“ಡಿ’ ಗುಂಪು
ಭಾರತ (ನಾಯಕ: ಹರ್ಮನ್‌ಪ್ರೀತ್‌ ಸಿಂಗ್‌, ಕೋಚ್‌: ಗ್ರಹಾಮ್‌ ರೀಡ್‌)
ಇಂಗ್ಲೆಂಡ್‌ (ನಾಯಕ: ಡೇವಿಡ್‌ ಅಮೆಸ್‌, ಕೋಚ್‌: ಪೌಲ್‌ ರೆವಿಂಗ್ಟನ್‌)
ಸ್ಪೇನ್‌ (ನಾಯಕ: ಮಾರ್ಕ್‌ ಮಿರಾಲ್ಲೆಸ್‌, ಕೋಚ್‌: ಮ್ಯಾಕ್ಸಿಮಿಲಿಯಾನೊ ಕಾಲ್ಡಾಸ್‌)
ವೇಲ್ಸ್‌ (ನಾಯಕ: ಲೂಕ್‌ ಹಾಕರ್‌, ಕೋಚ್‌: ಡೇನಿಯೆಲ್‌ ನ್ಯೂಕಾಂಬ್‌)

ಐದು ಮೆಚ್ಚಿನ ತಂಡಗಳು
ಭಾರತ
ಟೋಕಿಯೋ ಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಭಾರತ ತಂಡ ಕನಿಷ್ಠ ಫೈನಲ್‌ಗೇರುವ ವಿಶ್ವಾಸದಲ್ಲಿದೆ. ತನ್ನದೇ ನೆಲದಲ್ಲಿ ಕೂಟ ನಡೆಯುತ್ತಿರುವುದರಿಂದ ಹೆಚ್ಚುವರಿ ಬೆಂಬಲ ಸಿಕ್ಕಿದಂತಾಗಿದೆ. 2021-22ರ ಪ್ರೊ ಹಾಕಿ ಲೀಗ್‌ನಲ್ಲಿ ಭಾರತ 3ನೇ ಸ್ಥಾನಿಯಾಗಿದೆ. 2018ರ ವಿಶ್ವಕಪ್‌ನಲ್ಲಿ ಭಾರತ ಕ್ವಾರ್ಟರ್‌ ಫೈನಲ್‌ವರೆಗೆ ಹೋಗಿತ್ತು. ಈ ಬಾರಿ ಅದನ್ನು ಮೀರುವ ಎಲ್ಲ ಅವಕಾಶಗಳು ತಂಡಕ್ಕಿವೆ.

ಜರ್ಮನಿ
ವಿಶ್ವ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನ ಪಡೆದಿರುವ ಜರ್ಮನಿ ಈ ಕೂಟದ ಬಲಿಷ್ಠ ತಂಡಗಳಲ್ಲೊಂದು. ಈ ತಂಡ 2002, 2006ರಲ್ಲಿ ಸತತ ಎರಡು ಬಾರಿ ಕಪ್‌ ಗೆದ್ದಿದೆ. 2021-22 ಅವಧಿಯ ಪ್ರೊ ಲೀಗ್‌ ಹಾಕಿಯಲ್ಲಿ ಈ ತಂಡ 4ನೇ ಸ್ಥಾನ ಪಡೆದಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ತಂಡ ಭಾರತದೆದುರು ಸೋತು ಕಂಚನ್ನು ಕಳೆದುಕೊಂಡಿತ್ತು. 2018ರ ವಿಶ್ವಕಪ್‌ನಲ್ಲಿ ಈ ತಂಡ ಕ್ವಾರ್ಟರ್‌ ಫೈನಲ್‌ವರೆಗೆ ತಲುಪಿತ್ತು.

ನೆದರ್ಲೆಂಡ್ಸ್‌
ನೆದರ್ಲೆಂಡ್‌ ತಂಡ 3 ಬಾರಿ ವಿಶ್ವಕಪ್‌ ಗೆದ್ದಿದೆ. 2018ರ ವಿಶ್ವಕಪ್‌ನಲ್ಲಿ ಅದು ಫೈನಲ್‌ಗೆ ಹೋಗಿ, ಅಲ್ಲಿ ಬೆಲ್ಜಿಯಂ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ ಸೋತು ಹೋಗಿತ್ತು. 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲೇ ಸೋತುಹೋಗಿದೆ. ಸದ್ಯ ಅದರ ಲಯ ಹೇಗಿದೆ ಎನ್ನುವುದರ ಬಗ್ಗೆ ಖಾತ್ರಿಯಿಲ್ಲ. ಆದರೂ ಈ ತಂಡವನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ.

ಆಸ್ಟ್ರೇಲಿಯ
ಆಸ್ಟ್ರೇಲಿಯ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದಿದ್ದು 1986ರಲ್ಲಿ. 2010, 2014ರಂದು ಸತತ 2 ಬಾರಿ ಟ್ರೋಫಿ ಗೆದ್ದಿದೆ. 2018ರ ವಿಶ್ವಕಪ್‌ನಲ್ಲಿ ಕಂಚು ಗೆದ್ದಿದೆ, 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚನ್ನು ಗೆದ್ದಿದೆ. ಈ ತಂಡ ಯಾವಾಗಲೂ ಅತ್ಯಂತ ಭರವಸೆಯ ತಂಡವಾಗಿಯೇ ಅಂಕಣಕ್ಕಿಳಿಯುತ್ತದೆ.

ಬೆಲ್ಜಿಯಂ
ಬೆಲ್ಜಿಯಂ ತಂಡ ಇತ್ತೀಚೆಗೆ ಅತ್ಯಂತ ಬಲಿಷ್ಠವಾಗಿದೆ. 2018ರ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿತ್ತು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನವನ್ನೇ ಗೆದ್ದಿದೆ. ಪ್ರೊ ಹಾಕಿ ಲೀಗ್‌ನಲ್ಲಿ 2ನೇ ಸ್ಥಾನಿಯಾಗಿ ಕೂಟ ಮುಗಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ತಂಡ ಪ್ರಮುಖ ಕೂಟಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಹಾಗಾಗಿ ನೇರಾನೇರವಾಗಿ ಕೂಟದ ಅತ್ಯಂತ ಮೆಚ್ಚಿನ ತಂಡವೆನಿಸಿಕೊಂಡಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next