Advertisement

ಭಾರತ-ಆಸ್ಟ್ರೇಲಿಯ ಹಾಕಿ ಟೆಸ್ಟ್‌ ಸರಣಿ

10:49 PM Oct 03, 2022 | Team Udayavani |

ಹೊಸದಿಲ್ಲಿ: ಭಾರತ ಹಾಕಿ ತಂಡ 5 ಪಂದ್ಯಗಳ ಹಾಕಿ ಟೆಸ್ಟ್‌ ಸರಣಿಗಾಗಿ ವರ್ಷಾಂತ್ಯ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿದೆ.

Advertisement

ನ. 26-ಡಿ. 4ರ ಅವಧಿಯಲ್ಲಿ ಅಡಿಲೇಡ್‌ನ‌ “ಮೇಟ್‌ ಸ್ಟೇಡಿಯಂ’ನಲ್ಲಿ ಈ ಸರಣಿ ನಡೆಯಲಿದೆ.

ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ ಬಳಿಕ ಭಾರತ-ಆಸ್ಟ್ರೇಲಿಯ ತಂಡಗಳ ನಡುವಿನ ಮೊದಲ ಮುಖಾಮುಖಿ ಇದಾಗಿದೆ. ಪ್ರಸ್ತುತ ಆಸ್ಟ್ರೇಲಿಯ ವಿಶ್ವದ ನಂ.1 ತಂಡವಾಗಿದ್ದರೆ, ಭಾರತ 5ನೇ ಸ್ಥಾನದಲ್ಲಿದೆ.

ಮುಂದಿನ ವರ್ಷ ಒಡಿಶಾದಲ್ಲಿ ನಡೆಯಲಿರುವ ವಿಶ್ವಕಪ್‌ ಹಾಕಿ ಪಂದ್ಯಾವಳಿಗೆ ಈ ಸರಣಿ ಉತ್ತಮ ಅಭ್ಯಾಸವಾಗಲಿದೆ.

ಭಾರತದ ವನಿತಾ ಹಾಕಿ ತಂಡ ಕೂಡ ಮುಂದಿನ ಮೇ ತಿಂಗಳಲ್ಲಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್‌ ಸರಣಿ ಆಡಲಿದೆ. ಇದರ ದಿನಾಂಕ ನಿಗದಿಯಾಗಿಲ್ಲ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next