Advertisement

ಹೊಸ ವೈದ್ಯಕೀಯ ಶಿಕ್ಷಣ ನೀತಿ ಭವಿಷ್ಯದಲ್ಲಿ ಮಾರಕ

10:53 AM May 29, 2022 | Team Udayavani |

ಹುಬ್ಬಳ್ಳಿ: ರಾಷ್ಟ್ರೀಯ ವೈದ್ಯಕೀಯ ಪ್ರಾಧಿಕಾರ ನೂತನ ಶಿಕ್ಷಣ ನೀತಿ ಕುರಿತು ಅಧ್ಯಯನ ನಡೆಸಿದ್ದು, ಇದು ಪರಿಶುದ್ಧ ಔಷಧ ಉತ್ಪನ್ನಗಳಿಗೆ ಮಾರಕವಾಗಲಿದೆ. ಅಲ್ಲದೆ ಮುಂದಿನ ಯುವಜನಾಂಗದ ಭವಿಷ್ಯದ ಮೇಲೆ ತುಂಬಾ ಪರಿಣಾಮ ಬೀರಲಿದೆ ಎಂದು ವಿಶ್ವ ವೈದ್ಯಕೀಯ ಸಂಸ್ಥೆಯ ಖಜಾಂಚಿ ಡಾ| ರವೀಂದ್ರ ವಾಂಖೇಡ್ಕರ ಕಳವಳ ವ್ಯಕ್ತಪಡಿಸಿದರು.

Advertisement

ಕಿಮ್ಸ್‌ ಸಭಾಭವನದಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ) ಹುಬ್ಬಳ್ಳಿ ಶಾಖೆ ಶನಿವಾರ ಹಮ್ಮಿಕೊಂರಾಷ್ಟ್ರೀಯ ವೈದ್ಯಕೀಯ ಪ್ರಾಧಿಕಾರ ನೂತನ ಶಿಕ್ಷಣ ನೀತಿಡಿದ್ದ ಐಎಂಎ ಹುಬ್ಬಳ್ಳಿ ವಾರ್ಷಿಕ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ)-2022, ಐಎಂಎ ರಾಷ್ಟ್ರೀಯ ಎಎಂಎಸ್‌ ಪ್ರಾದೇಶಿಕ ಸಮ್ಮೇಳನ ಮತ್ತು ಐಎಂಎ ಶಾಖೆಯ ಸುವರ್ಣ ಕ್ಷಣಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಂದಿನ ಯುವ ಪೀಳಿಗೆಗೆ ವೈದ್ಯಕೀಯ ಶಿಕ್ಷಣದಲ್ಲಿ ತೀವ್ರ ತೆರನಾದ ಬದಲಾವಣೆ ಆಗಲಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹೊಸ ಶಿಕ್ಷಣ ನೀತಿಯು ವೈದ್ಯಕೀಯ ಪದ್ಧತಿ ಹದಗೆಡಿಸಲಿದೆ. ಹೀಗಾಗಿ 2030ರಲ್ಲಿ ಆಧುನಿಕ ಪರಿಶುದ್ಧ ಔಷಧ ವೈದ್ಯರು ಸಿಗುವುದು ದುರ್ಲಭ.ಭಾರತದಲ್ಲಿನ ಪ್ರತಿಯೊಬ್ಬ ವೈದ್ಯರು ಹೈಬ್ರಿಡ್‌ ಆಗಲಿದ್ದಾರೆ. ಆದ್ದರಿಂದ ಈ ಹೊಸ ವೈದ್ಯಕೀಯ ಶಿಕ್ಷಣ ನೀತಿಯು ಭವಿಷ್ಯದಲ್ಲಿ ತುಂಬಾ ಮಾರಕವಾಗಲಿದೆ. ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಯುವ ಜನಾಂಗವೇ ದೇಶದ ಭವಿಷ್ಯ. ಕಾರಣ ವೈದ್ಯಕೀಯ ವಿದ್ಯಾರ್ಥಿಗಳು ಹಿರಿಯ ವೈದ್ಯರ ಮಾರ್ಗದರ್ಶನ ಪಡೆಯಬೇಕು. ಐಎಂಎ ಸದಸ್ಯತ್ವ ಹೊಂದಿ ವೈದ್ಯಕೀಯ ವಿದ್ಯಾರ್ಥಿಗಳ ಹಾಗೂ ಕಿರಿಯ ವೈದ್ಯರ ಸಂಪರ್ಕ ಬೆಳೆಸಿಕೊಳ್ಳಬೇಕು. ಐಎಂಎ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಕಿಮ್ಸ್‌ ಆಸ್ಪತ್ರೆ ಸೂಪರ್‌ ಸ್ಪೆಷಾಲಿಟಿಯಾಗಿ ಮೇಲ್ದರ್ಜೆಗೇರಿದೆ. ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ಜನತೆಗೆ ಸಾಕಷ್ಟು ಅನುಕೂಲವಾಗಿದೆ ಎಂದರು.

ಐಎಂಎ ಪ್ರಧಾನ ಕಚೇರಿ ಗೌರವ ಮಹಾಕಾರ್ಯದರ್ಶಿ ಡಾ| ಜಯೇಶ ಲೇಲೆ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ಆಯೋಜಿಸುವ ಕಾರ್ಯಕ್ರಮಕ್ಕೆ ಐಎಂಎ ಸ್ಥಳೀಯ ಶಾಖೆಗಳಿಂದ ಅಗತ್ಯ ಸಹಕಾರ ನೀಡಲಾಗುವುದು. ಐಎಂಎ ಡಿಜಿಟಲೀಕರಣ ಆಗಬೇಕಿದ್ದು, ಎಲ್ಲಾ ರಾಜ್ಯಗಳು ಇದಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದರು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಐಎಂಎ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಮತ್ತು ಐಎಂಎ ಕೆಎಸ್‌ಬಿ ಹಿರಿಯ ಉಪಾಧ್ಯಕ್ಷ ಡಾ| ಎಸ್‌.ವೈ. ಮುಲ್ಕಿಪಾಟೀಲ, ಮುಂದಿನ ದಿನಗಳಲ್ಲಿ ಐಎಂಎ ಹುಬ್ಬಳ್ಳಿ ಶಾಖೆಯಿಂದ ರಾಷ್ಟ್ರೀಯ ಮಟ್ಟದ ಸಮ್ಮೇಳನ ಆಯೋಜಿಸಲು ಯೋಜಿಸಲಾಗಿದೆ. ಶಾಖೆಯಿಂದ ಇದೇ ಮೊದಲ ಬಾರಿಗೆ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು.

ಮಹಿಳಾ ಐಎಂಎ ವಿಭಾಗ ಪ್ರಾರಂಭಿಸಲಾಗಿದ್ದು, ಜೂ. 5ರಂದು ನಗರದಲ್ಲಿ ರಾಜ್ಯಮಟ್ಟದ ಮಹಿಳಾ ವೈದ್ಯರ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಅಂಗವಿಕಲ ಮಕ್ಕಳನ್ನು ಒಳಗೊಂಡು ಗಿನ್ನಿಸ್‌ ದಾಖಲೆ ಸೃಷ್ಟಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಡಾ| ಸಂಜೀವಸಿಂಗ್‌ ಯಾದವ, ಡಾ| ಅರವಿಂದ ಗೋಂಡವೆ, ಡಾ| ವೆಂಕಟಾಚಲಪತಿ, ಡಾ| ಜಿ.ಎನ್‌. ಪ್ರಭಾಕರ, ಡಾ| ಎಸ್‌.ಬಿ. ಲಕ್ಕೋಲ, ಡಾ| ಎಸ್‌.ಎಂ. ಪ್ರಸಾದ, ಡಾ| ಅರುಣಕುಮಾರ ಸಿ., ಡಾ| ಜಿ.ಕೆ. ಭಟ್‌, ಡಾ| ಮಂಜುನಾಥ ನೇಕಾರ, ಡಾ| ಸಚಿನ ಹೊಸಕಟ್ಟಿ, ಡಾ| ಮಧುಕರ ದೇವದಾಸ ಮೊದಲಾದವರಿದ್ದರು. ಡಾ| ಎಂ.ವೈ. ಮುಲ್ಕಿಪಾಟೀಲ ಅವರ ವೈದ್ಯಕೀಯ ಸಂಶೋಧನಾ ಕೃತಿ ಹಾಗೂ ಐಎಂಎ ಹುಬ್ಬಳ್ಳಿ ಶಾಖೆ ಕೈಪಿಡಿ ಬಿಡುಗಡೆ ಮಾಡಲಾಯಿತು.

ಡಾ| ಸ್ವಾತಿ ಪ್ರಾರ್ಥಿಸಿದರು. ಐಎಂಎ ವಾರ್ಷಿಕ ಸಿಎಂಇ-2022 ಅಧ್ಯಕ್ಷ ಡಾ| ಈಶ್ವರ ಹೊಸಮನಿ ಸ್ವಾಗತಿಸಿದರು. ಐಎಂಎ ಎಎಂಎಸ್‌ ಕರ್ನಾಟಕ ಅಧ್ಯಕ್ಷ ಡಾ| ಶಿವಕುಮಾರ ಕುಂಬಾರ ವಂದಿಸಿದರು. ತಾಂತ್ರಿಕ ಗೋಷ್ಠಿಗಳು, ಉಪನ್ಯಾಸಗಳು ನಡೆದವು. ಉದ್ಘಾಟನಾ ಸಮಾರಂಭದ ನಂತರ ಐಎಂಎ ರಾಷ್ಟ್ರೀಯ ಎಎಂಎಸ್‌ ಪ್ರಾದೇಶಿಕ ಸಮ್ಮೇಳನ, ಅಭಿನಂದನಾ ಸಮಾರಂಭ ನಡೆಯಿತು.

ವೈದ್ಯರ ಮೇಲೆ ಆಗುತ್ತಿರುವ ಹಲ್ಲೆಗಳ ಬಗ್ಗೆ ದೂರು ದಾಖಲಿಸಬೇಕು. ಐಎಂಎ ಇಂತಹ ಪ್ರಕರಣಗಳ ಕುರಿತು ಅಧ್ಯಯನ ಮಾಡಿ ಪ್ರತ್ಯೇಕವಾಗಿ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಯೋಚಿಸಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಐಎಂಎ ಪ್ರಧಾನ ಕಚೇರಿಯು ಎಲ್ಲ ರೀತಿಯ ಸಹಕಾರ ನೀಡುತ್ತದೆ. ಎಲ್ಲ ವಿದ್ಯಾರ್ಥಿಗಳು ಐಎಂಎ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಕಿರಿಯ ವೈದ್ಯರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಬೇಕು. ಡಾ| ರವೀಂದ್ರ ರೆಡ್ಡಿ, ಐಎಂಎ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷ

ಐಎಂಎ ಹುಬ್ಬಳ್ಳಿ ರಾಜ್ಯದಲ್ಲಿ ಅತೀ ಹಳೆಯ ಶಾಖೆಯಾಗಿದೆ. ಭವಿಷ್ಯದ ದೃಷ್ಟಿಯಿಂದ ಉತ್ತಮ ಕಾರ್ಯಕ್ರಮ ನಡೆಸುತ್ತಿದೆ. ಐಎಂಎ ರಾಷ್ಟ್ರ, ರಾಜ್ಯ ಹಾಗೂ ಸ್ಥಳೀಯ ಮಟ್ಟದ ನಡುವಿನ ಅಂತರ ಕಡಿಮೆಗೊಳಿಸಲು, ಚ್ಚಿನ ಸಂಬಂಧ ಬೆಳೆಸಲು ಕಾರ್ಯಕ್ರಮ ಆಯೋಜನೆ ಆಗಬೇಕು. ಹಲವಾರು ಸಂಘಟನೆಗಳ ನಡುವೆ ವೈದ್ಯರು ಹಂಚಿ ಹೋಗಿದ್ದು, ಅದನ್ನು ತಡೆದು ಎಲ್ಲಾ ವೈದ್ಯರು ಐಎಂಎ ಅಡಿಯಲ್ಲಿ ಬರುವಂತೆ ಆಗಬೇಕಿದೆ. ಡಾ| ಕಟೀಲ ಸುರೇಶ ಕುದ್ವಾ, ರಾಜ್ಯ ಐಎಂಎ ಅಧ್ಯಕ್ಷ

ಮುಖ್ಯಮಂತ್ರಿ ಸಂದೇಶ: ವಾರ್ಷಿಕ ಸಿಎಂಇ-2022 ಸಮ್ಮೇಳನ ಕುರಿತು ವಿಡಿಯೋ ಸಂದೇಶ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೋವಿಡ್‌ ಹಿನ್ನೆಲೆಯಲ್ಲಿ ಸಾಕಷ್ಟು ಸವಾಲು ವೈದ್ಯಕೀಯ ಕ್ಷೇತ್ರದಲ್ಲಿದೆ. ವೈದ್ಯಕೀಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next