Advertisement

ಬಾಡಿಗೆ ಹಣ ಕೊಟ್ಟರೆ ಸಾಕು..ಹೆಲಿಕಾಪ್ಟರ್‌ ರೂಪದ ನ್ಯಾನೋ ಕಾರು ಸಿಗುತ್ತೆ!

06:34 PM Feb 21, 2022 | Team Udayavani |

ಪಾಟ್ನಾ:15 ಸಾವಿರ ರೂ. ಬಾಡಿಗೆ ಕೊಟ್ಟರೆ ಹೆಲಿಕಾಪ್ಟರ್‌ ರೂಪ ಪಡೆದಿರುವ ನ್ಯಾನೋ ಕಾರು ಸಿಗುತ್ತದೆ. ಇಂಥ ಒಂದು ಆವಿಷ್ಕಾರ ಮಾಡಿದ್ದು ಬಿಹಾರದ ಬಗಾಹ ಜಿಲ್ಲೆಯ ಗುಡ್ಡು ಶರ್ಮಾ. ಹಳೆಯ ನ್ಯಾನೋ ಕಾರ್‌ ಅನ್ನು ತೆಗೆದುಕೊಂಡು ಅವರು ತಲೆ ಓಡಿಸಿ ಇಂಥ ಒಂದು ವಿನ್ಯಾಸ ಮಾಡಿದ್ದಾರೆ. ಅವರ ವಿನ್ಯಾಸ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆದಿದೆ.

Advertisement

ಅಂದ ಹಾಗೆ ಇಂಥ ಬದಲಾವಣೆಯನ್ನು ತಂದ ವ್ಯಕ್ತಿ ಅಟೊಮೊಬೈಲ್‌ ಎಂಜಿನಿಯರಿಂಗ್‌ ಪದವೀಧರ ಅಲ್ಲವೇ ಅಲ್ಲ. ಅವರೊಬ್ಬ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದಾರೆ. ನ್ಯಾನೋ ಕಾರ್‌ನ ಮುಂಭಾಗಕ್ಕೆ ಹೆಲಿಕಾಪ್ಟರ್‌ನ ರೂಪ ನೀಡಿದ್ದಾರೆ.

ಇದನ್ನೂ ಓದಿ:ಹರ್ಷ ಹತ್ಯೆ ಪೂರ್ವ ನಿಯೋಜಿತ; ಹಿಂದೂ ಕಾರ್ಯಕರ್ತರ ಬೆಂಬಲಕ್ಕೆ ನಾವಿದ್ದೇವೆ: ಸಚಿವ ಸುಧಾಕರ್

ಜತೆಗೆ ಕಾರ್‌ನ ಚಾವಣಿಗೆ ಎರಡು ರೆಕ್ಕೆಗಳ ಮಾದರಿಯನ್ನು ಅಳವಡಿಸಿದ್ದಾರೆ. ಇದೀಗ, ಗುಡ್ಡು ಶರ್ಮಾ ಅವರಿಗೆ ಹೊಳೆದಿರುವ ಉಪಾಯವೆಂದರೆ, 15 ಸಾವಿರ ರೂ. ಬಾಡಿಗೆ ನಿಗದಿ ಮಾಡಿದ್ದಾರೆ ಮತ್ತು ಆಸಕ್ತರಿಗೆ ಅದನ್ನು ನೀಡುತ್ತಾರಂತೆ. ಸ್ಥಳೀಯ ವರದಿಗಳ ಪ್ರಕಾರ ಹಲವು ಕಾರ್ಯಕ್ರಮಗಳಿಗೆ ಹೆಲಿಕಾಪ್ಟರ್‌ ಮಾದರಿ ಕಾರನ್ನು ಬುಕಿಂಗ್‌ ಮಾಡಿಸುವ ಬಗ್ಗೆ ಫೋನ್‌ ಮಾಡಿ ವಿಚಾರಿಸುತ್ತಿದ್ದಾರಂತೆ.

2019ರಲ್ಲಿ ಬಿಹಾರದ ಛಪ್ರಾದ ವ್ಯಕ್ತಿಯೊಬ್ಬರೂ ಕೂಡ ಇದೇ ಮಾದರಿಯ ವಿನ್ಯಾಸ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next