ವಾಷಿಂಗ್ಟನ್ ಡಿಸಿ: ವಾಷಿಂಗ್ಟನ್ ಮೂಲದ ಭಾರತೀಯ ಪತ್ರಕರ್ತರೊಬ್ಬರ ಮೇಲೆ ಖಲಿಸ್ತಾನಿ ಪರ ಬೆಂಬಲಿಗರು ಹಲ್ಲೆ ನಡೆಸಿ, ನಿಂದಿಸಿರುವ ಘಟನೆ ಬೆಳಕಿಗೆ ಬಂದಿದೆ.
ಶನಿವಾರ ( ಮಾ.25 ರಂದು) ಮಧ್ಯಾಹ್ನ ಅಮೆರಿಕಾದ ಭಾರತೀಯ ರಾಯಭಾರಿ ಕಚೇರಿ ಪಕ್ಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಗ್ಗೆ ವರದಿ ಮಾಡಲು ತೆರಳಿದ್ದ ವಾಷಿಂಗ್ಟನ್ ಮೂಲದ ಭಾರತೀಯ ಪತ್ರಕರ್ತ ಲಲಿತ್ ಝಾ ಅವರನ್ನು ತಡೆದು ಕೆಲ ಖಲಿಸ್ತಾನಿ ಪರ ಬೆಂಬಲಿಗರು ಅಸಭ್ಯವಾಗಿ ಮಾತನಾಡಿ ನಿಂದಿಸಿದ್ದಾರೆ. ಇಷ್ಟೆಲ್ಲದೇ ಕೋಲುಗಳಿಂದ ಕಿವಿಗೆ ಹೊಡೆದಿದ್ದಾರೆ ಎಂದು ಪತ್ರಕರ್ತ ಲಲಿತ್ ಘಟನೆಯ ಬಗ್ಗೆ ವಿಡಿಯೋ ಚಿತ್ರೀಕರಿಸಿ ಟ್ವಿಟರ್ ನಲ್ಲಿ ಹಾಕಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದ ಬಿಕಾನೇರ್‌ನಲ್ಲಿ 4.2 ತೀವ್ರತೆಯ ಭೂಕಂಪ
ಯಾವಾಗ ನಿಂದನೆ ಹಾಗೂ ದೈಹಿಕ ಹಲ್ಲೆ ಆಯಿತೋ ಆ ವೇಳೆಗೆ ಪತ್ರಕರ್ತ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬಂದು ಲಲಿತ್ ಅವರನ್ನು ರಕ್ಷಿಸಿದ್ದಾರೆ.
Related Articles
ಹಿರಿಯ ಪತ್ರಕರ್ತರೊಬ್ಬರ ಮೇಲೆ ಖಲಿಸ್ತಾನಿ ಬೆಂಬಲಿಗರು ಮಾಡಿರುವ ಹಲ್ಲೆ ಖಂಡನೀಯ ಎಂದು ಅಮೆರಿಕಾದ ಭಾರತೀಯ ರಾಯಭಾರಿ ಕಚೇರಿ ಕಟುವಾಗಿ ಟೀಕಿಸಿದೆ.
ಇತ್ತೀಚೆಗೆ ಖಲಿಸ್ತಾನಿ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು.