Home

ಜರ್ಮನಿ ತಂಡವನ್ನು ಸೋಲಿಸಿದ ಭಾರತ ಹಾಕಿ ತಂಡ

Home Stories
ಇಂದಿನ ಪಂದ್ಯದಲ್ಲಿ ಭಾರತ ತಂಡ 5-4 ಗೋಲುಗಳ ಅಂತರದಿಂದ ಜಯಿಸಿತು. ಇದರೊಂದಿಗೆ 1980ರ ಬಳಿಕ ಮೊದಲ ಬಾರಿಗೆ ಒಲಿಂಪಿಕ್ ಹಾಕಿಯಲ್ಲಿ ಪದಕ ಗೆದ್ದು ಸಂಭ್ರಮಿಸಿತು.
Home Stories
ಮೊದಲ ಕ್ವಾರ್ಟರ್ ನಲ್ಲಿಯೇ ಗೋಲು ಗಳಿಸಿದ ಜರ್ಮನಿ ಮುನ್ನಡೆ ಕಾಯ್ದುಕೊಂಡಿತ್ತು. ಎರಡನೇ ಕ್ವಾರ್ಟರ್ ನ 13ನೇ ನಿಮಿಷದಲ್ಲಿ ಸಿಮ್ರನ್ ಜೀತ್ ಭಾರತದ ಮೊದಲ ಗೋಲು ಗಳಿಸಿದರು.
Home Stories
ನಂತರ ಜರ್ಮನಿ ಸತತ ಎರಡು ಗೋಲು ಗಳಿಸಿ 3-1 ಅಂತರದ ಮುನ್ನಡೆ ಸಾಧಿಸಿತ್ತು. ಆದರೆ ಮತ್ತೆ ಹಾರ್ದಿಕ್ ಮತ್ತು ಸಿಮ್ರನ್ ಜೀತ್ ತಲಾ ಒಂದು ಗೋಲು ಗಳಿಸಿದರು. ಎರಡನೇ ಕ್ವಾರ್ಟರ್ ಅಂತ್ಯಕ್ಕೆ ಭಾರತ ಮತ್ತು ಜರ್ಮನಿ ತಂಡಗಳು 3-3 ಗೋಲು ಗಳಿಸಿದ್ದವು.
Home Stories
ಮೂರನೇ ಕ್ವಾರ್ಟರ್ ನಲ್ಲಿ ಪೆನಾಲ್ಟಿ ಅವಕಾಶ ಬಳಸಿಕೊಂಡ ರೂಪಿಂದರ್ ಗೋಲು ಗಳಿಸಿ ಮುನ್ನಡೆ ಒದಗಿಸಿದರು. ಮತ್ತೊಂದು ಗೋಲು ಗಳಿಸಿದ ಸಿಮ್ರನ್ ಜೀತ್ ಭಾರತದ ಗೋಲು ಸಂಖ್ಯೆಯನ್ನು 5ಕ್ಕೆ ಏರಿಸಿದರು.
Home Stories
. ಅಂತಿಮ ಕ್ವಾರ್ಟರ್ ನಲ್ಲಿ ಜರ್ಮನಿಯ ವಿಂಡ್ ಫೆಡರ್ ಗೋಲು ಗಳಿಸಿದರು. ಅಂತಿಮ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಪಡೆದರೂ ಜರ್ಮನಿ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ಭಾರತ ತಂಡ 5-4 ಗೋಲು ಅಂತರದಿಂದ ಜಯಿಸಿತು.