Advertisement

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡಕ್ಕೆ ಪದಕ ಗೆಲ್ಲಲು ಉತ್ತಮ ಅವಕಾಶ: ಧನರಾಜ್‌

11:14 PM Jul 14, 2021 | Team Udayavani |

ಹೊಸದಿಲ್ಲಿ : ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡ ಉತ್ತಮ ಪ್ರದರ್ಶನ ನೀಡ ಲಿದ್ದು, ಪದಕ ಗೆಲ್ಲುವ ಸಾಧ್ಯತೆ ಇದೆ ಎಂದು ಮಾಜಿ ಹಾಕಿ ಆಟಗಾರ ಧನರಾಜ್‌ ಪಿಳ್ಳೆ ಹೇಳಿದ್ದಾರೆ.

Advertisement

ಸಂದರ್ಶನವೊಂದರಲ್ಲಿ ಮಾತನಾಡಿದ ಧನರಾಜ್‌, “ನಮ್ಮ ಹಾಕಿ ತಂಡ ಅತ್ಯಂತ ಸಮರ್ಥವಾಗಿದೆ. ನನ್ನ ಪೀಳಿಗೆಯ ಆಟಗಾರರು ಗೆಲ್ಲಲಾಗದ ಪದಕವನ್ನು ಈಗಿನ ಆಟಗಾರರು ಗೆಲ್ಲುವ ನಿರೀಕ್ಷೆ ಹಾಗೂ ವಿಶ್ವಾಸ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಭಾರತದ ಹಾಕಿ ತಂಡಕ್ಕೆ ಫಿಟ್‌ನೆಸ್‌ ಅತ್ಯಂತ ದೊಡ್ಡ ಆಸ್ತಿಯಾಗಿದೆ. ಕಳೆದ 5 ವರ್ಷಗಳಲ್ಲಿ ನಮ್ಮವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇದನ್ನು ಟೋಕಿಯೊದಲ್ಲೂ ಮುಂದುವರಿಸಬೇಕು’ ಎಂದಿದ್ದಾರೆ ಪಿಳ್ಳೆ.

“ನಾನು ಬೆಂಗಳೂರಿನಲ್ಲಿಯೇ ಇದ್ದೆ. ಕೋವಿಡ್‌ ನಿಯಮಾವಳಿಯಿಂದಾಗಿ ತಂಡವನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಆದರೆ ತಂಡಕ್ಕೆ ಶುಭ ಸಂದೇಶ ಕಳುಹಿಸಿದ್ದೇನೆ’ ಎಂದರು.

ಇದನ್ನೂ ಓದಿ : 2020ರ ಗಲಭೆ ಪ್ರಕರಣಗಳ ತನಿಖೆ ವಿಫಲ : ದೆಹಲಿ ಪೊಲೀಸರಿಗೆ 25 ಸಾವಿರ ರೂ. ದಂಡ

Advertisement

ಭಾರತಕ್ಕೆ ಪಾಕ್‌ ಆಟಗಾರನ ಬೆಂಬಲ
ಪಾಕಿಸ್ಥಾನದ ಮಾಜಿ ಹಾಕಿ ಆಟಗಾರ ಹಸನ್‌ ಸರ್ದಾರ್‌ ಭಾರತಕ್ಕೆ ಬೆಂಬಲ ಸೂಚಿಸಿದ್ದು, ಮನ್‌ಪ್ರೀತ್‌ ಪಡೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಿದೆ ಎಂದು ಹೇಳಿದ್ದಾರೆ.

“ಪಾಕಿಸ್ಥಾನದ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳದ ಕಾರಣ ನಾನು ಭಾರತ ತಂಡವನ್ನು ಬೆಂಬಲಿಸುತ್ತೇನೆ. ಕಳೆದ ಎರಡು-ಮೂರು ವರ್ಷಗಳಲ್ಲಿ ಭಾರತ ಅದ್ಭುತವಾಗಿ ಆಡಿದೆ. ವಿಶ್ವದ ಅಗ್ರ ತಂಡಗಳನ್ನು ಸೋಲಿಸಿದೆ. ಹಿಗಾಗಿ ಮಾನಸಿಕವಾಗಿ ಸದೃಢವಾಗಿರುವ ಭಾರತೀಯ ಪುರುಷರ ತಂಡ ಆಕ್ರಮಣಕಾರಿಯಾಗಿ ಆಡಿದರೆ ಟೋಕಿಯೊದಲ್ಲಿ ಪದಕ ಗೆಲ್ಲಬಹುದು’ ಎಂದು ಸರ್ದಾರ್‌ ಭರವಸೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next