ನವದೆಹಲಿ: ನಾವೆಲ್ಲ ಕೂದಲಿಗೇನು ಮಹಾ ಬೆಲೆಯಿರುತ್ತದೆ ಎಂದು ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಈ ಕೂದಲನ್ನು ಭಾರತದಿಂದ ಚೀನಾಕ್ಕೆ ಅಕ್ರಮವಾಗಿ ಕಳ್ಳಸಾಗಣೆ ಮಾಡಲಾಗುತ್ತದೆ.
ಹಾಗೆಯೇ ಕಳ್ಳಮಾರ್ಗದಲ್ಲಿ ಕೂದಲು ಕಳುಹಿಸಿಕೊಟ್ಟ ವ್ಯಕ್ತಿಗಳಿಗೆ ಕೋಟ್ಯಂತರ ರೂ. ಹಣವೂ ಪಾವತಿಯಾಗುತ್ತದೆ. ಈ ರೀತಿಯ ಒಂದು ದೊಡ್ಡ ದಂಧೆಯೇ ನಡೆಯುತ್ತಿದೆ. ಹೀಗೊಂದು ಅಚ್ಚರಿಯ ಮಾಹಿತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ನೀಡಿದೆ.
ಫೆ.9, 10ರಂದು ಅಕ್ರಮ ಹಣಸಾಗಣೆಗೆ ಸಂಬಂಧಪಟ್ಟಂತೆ ಚೀನಾದ ಮೊಬೈಲ್ ಬೆಟ್ಟಿಂಗ್ ಆ್ಯಪ್‌ಗ್ಳ ಬಗ್ಗೆ ಇಡಿ ತನಿಖೆ ನಡೆಸಿತ್ತು. ಆಗ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್‌ನಿಂದ ಮಿಜೋರಾಮ್‌ನ ಚಂಫಾಯ್‌ವರೆಗೆ ಕೂದಲು ಕಳ್ಳಸಾಗಣೆಯಾಗುತ್ತಿರುವುದು ಪತ್ತೆಯಾಗಿದೆ. ಚಂಫಾಯ್, ನೆರೆಯ ರಾಷ್ಟ್ರ ಮಾಯೆನ್ಮಾರ್‌ಗೆ ಹತ್ತಿರದಲ್ಲಿದೆ. ಹೀಗೆ ಮಾಯೆನ್ಮಾರ್‌ಗೆ ತಲುಪುವ ಕೂದಲು, ಅಲ್ಲಿಂದ ಚೀನಾಕ್ಕೆ ಹೋಗುತ್ತದೆ!
ಇದನ್ನೂ ಓದಿ:ಕೆಐಎಡಿಬಿಯಿಂದ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ : ನಿರಾಣಿ
ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ದೇವಸ್ಥಾನವಿರುವುದು ಆಂಧ್ರಪ್ರದೇಶದಲ್ಲಿ. ಇಲ್ಲಿಗೆ ಕೋಟ್ಯಂತರ ಭಕ್ತರು ಬಂದು ಕೂದಲನ್ನು ಅರ್ಪಿಸುತ್ತಾರೆ. ಈ ರಾಜ್ಯದಲ್ಲಿ ಕೂದಲ ಮಾರಾಟವೂ ಜೋರಾಗಿದೆ. ಇದು ಮುಂದೆ ಗುವಾಹಟಿ, ಕೋಲ್ಕತ, ಮಾಯೆನ್ಮಾರ್, ನಂತರ ಚೀನಾಕ್ಕೂ ಹೋಗುತ್ತದೆ. ಇಲ್ಲಿಗೆಲ್ಲ ಹಣ ಪಾವತಿಯಾಗುವುದು ಮಿಜೋರಾಮ್‌ನ ಶೆಲ್ ಬ್ಯಾಂಕ್‌ಗಳ (ಈ ಬ್ಯಾಂಕ್‌ಗಳು ಭೌತಿಕವಾಗಿ ಅಸ್ತಿತ್ವದಲ್ಲಿರುವುದಿಲ್ಲ) ಮೂಲಕ ಎಂದು ಇಡಿ ಹೇಳಿದೆ!
ಇಡಿ ತನ್ನ ತನಿಖೆಯಲ್ಲಿ 1.2 ಕೋಟಿ ರೂ. ನಗದು ವಶ ಮಾಡಿಕೊಂಡಿದೆ. ಹಾಗೆಯೇ 139 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ.