ನವದೆಹಲಿ: ಗೋಧಿ, ಸಕ್ಕರೆ ರಫ್ತಿನ ಮೇಲೆ ನಿಷೇಧ ಹೇರಿದಂತೆ ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಲಾಗುತ್ತದೆ ಎಂಬ ವರದಿಗಳು ಸುಳ್ಳು.
ಇಂಥ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಗುರುವಾರ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಬಾಸುಮತಿ ಹೊರತಾ ಗಿರುವ ಅಕ್ಕಿಯ ತಳಿಯ ರಫ್ತಿಗೆ ನಿರ್ಬಂಧ ಹೇರಲಾಗುತ್ತದೆ ಎಂಬ ವರದಿಯಲ್ಲಿ ಯಾವುದೇ ಆಧಾರವಿಲ್ಲ ಎಂದು ಇಬ್ಬರು ಹಿರಿಯ ಅಧಿಕಾರಿ ಗಳು ತಿಳಿಸಿದ್ದಾರೆ.
“ರಫ್ತಿನ ಮೇಲೆ ನಿಷೇಧವೂ ಇಲ್ಲ ಮತ್ತು ಇಂತಿಷ್ಟೇ ಮಿತಿಯಲ್ಲಿ ರಫ್ತು ಮಾಡಬೇಕು ಎಂಬ ನಿಯಮ ಜಾರಿ ಮಾಡುವ ಇರಾದೆಯೂ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶ ಬಾಸುಮತಿ ಸೇರಿ ವಿವಿಧ ತಳಿಯ ಅಕ್ಕಿಯನ್ನು 21.1 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಈಗಾಗಲೇ ರಫ್ತು ಮಾಡಿದೆ. ಮೇ 1ರ ಮಾಹಿತಿ ಪ್ರಕಾರ ಭಾರತೀಯ ಆಹಾರ ನಿಗಮದ ವ್ಯಾಪ್ತಿಯಲ್ಲಿ 33.27 ಮಿಲಿಯನ್ ಟನ್ ಅಕ್ಕಿ, 26.61 ಮಿಲಿಯನ್ ಟನ್ ಭತ್ತ ಸಂಗ್ರಹವಾಗಿ ಉಳಿದಿದೆ.