ನವದೆಹಲಿ: ವಿವಾದಿತ ಇಸ್ಲಾಂ ಪ್ರಚಾರಕ ಝಕೀರ್ ನಾಯ್ಕಗೆ ದೋಹಾದಲ್ಲಿ ನಡೆಯುತ್ತಿರುವ ಫಿಫಾ ವರ್ಲ್ಡ್ ಕಪ್-2022 ಸಮಾರಂಭದಲ್ಲಿ ಭಾಗವಹಿಸಲು ಅಧಿಕೃತ ಆಹ್ವಾನ ನೀಡಿಲ್ಲ ಎಂದು ಕತಾರ್ ಸ್ಪಷ್ಟಪಡಿಸಿದೆ.
ಭಾರತ ಮತ್ತು ಕತಾರ್ ನಡುವಿನ ಸಂಬಂಧ ಹಾಳು ಮಾಡಲು ಇತರೆ ರಾಷ್ಟ್ರಗಳು ಸುಖಾಸುಮ್ಮನೆ ಸುಳ್ಳು ಮಾಹಿತಿ ಹರಡುತ್ತಿವೆ ಎಂದೂ ಕತಾರ್ ಸರ್ಕಾರ ಹೇಳಿದೆ.
ಒಂದು ವೇಳೆ ಝಕೀರ್ ನಾಯ್ಕನನ್ನು ಕತಾರ್ ಸರ್ಕಾರ ಅಧಿಕೃತವಾಗಿ ಆಹ್ವಾನಿಸಿದ್ದರೆ ಫಿಫಾ ವರ್ಲ್ಡ್ ಕಪ್ ಸಮಾರಂಭಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಭಾಗವಹಿಸುವುದಿಲ್ಲ ಎಂದು ಭಾರತ ಸರ್ಕಾರ ತನ್ನ ನಿಲುವು ಮಂಡಿಸಿದ್ದ ಹಿನ್ನೆಲೆಯಲ್ಲಿ ಕತಾರ್ ಸರ್ಕಾರದಿಂದ ಈ ಸ್ಪಷ್ಟನೆ ಬಂದಿದೆ.
ಇಸ್ಲಾಂಗೆ ಬಲವಂತದ ಮತಾಂತರ, ಆತ್ಮಹತ್ಯೆ ಬಾಂಬ್ ದಾಳಿ ಸಮರ್ಥನೆ, ಹಿಂದೂ ದೇವರು, ಹಿಂದೂ ಧರ್ಮ ಮತ್ತು ಇತರೆ ಧರ್ಮಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ, ಪೋಸ್ಟ್‌ಗಳು ಹಾಕಿರುವ ಆರೋಪ ನಾಯ್ಕ ಮೇಲಿದೆ. ಜತೆಗೆ ಈತನ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ.
Related Articles
ಹಿಜಾಬ್ ಪ್ರತಿಭಟನೆ:
ಹಿಜಾಬ್ ವಿರುದ್ಧ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕತಾರ್‌ಗೂ ವ್ಯಾಪಿಸಿದೆ. ಫಿಫಾ ವರ್ಲ್ಡ್ ಕಪ್ ನಡೆಯುತ್ತಿರುವ ಕ್ರೀಡಾಂಗಣದಲ್ಲಿ ವೀಕ್ಷಕರಿಬ್ಬರು ಹಿಜಾಬ್ ವಿರುದ್ಧ, ಮಹಿಳೆಯ ಸ್ವಾತಂತ್ರ್ಯ ಗೌರವಿಸುವ ಸಂಬಂಧ ಪೋಸ್ಟರ್ ಪ್ರದರ್ಶಿಸಿರುವ ಘಟನೆ ನಡೆದಿದೆ.