Advertisement

ಫುಟ್ಬಾಲ್ ಆಡಳಿತಾಧಿಕಾರಿಗಳ ಸಮಿತಿ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

11:32 PM Aug 22, 2022 | Team Udayavani |

ಹೊಸದಿಲ್ಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇ ಶನ್‌ (ಎಐಎಫ್ಎಫ್) ಆಡಳಿತಾಧಿಕಾರಿ ಗಳ ಸಮಿತಿಯನ್ನು (ಸಿಒಎ) ಸುಪ್ರೀಂ ಕೋರ್ಟ್‌ ಸೋಮವಾರ ರದ್ದುಗೊಳಿಸಿದೆ. ಎಐಎಫ್ಎಫ್ ಅನ್ನು ಫಿಫಾ ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಈ ಮಹತ್ವದ ಆದೇಶ ನೀಡಿದೆ.

Advertisement

ಇನ್ನೊಂದು ಮಹತ್ವದ ಬೆಳವಣಿಗೆ ಯಲ್ಲಿ ಆ. 28ಕ್ಕೆ ನಿಗದಿಯಾಗಿದ್ದ ಎಐಎಫ್ಎಫ್ ಚುನಾವಣೆಯನ್ನು ಒಂದು ವಾರ ಮುಂದೂಡಿ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಎ.ಎಸ್‌. ಬೋಪಣ್ಣ ಅವರನ್ನೊಳಗೊಂಡ ಪೀಠವು ಆಡಳಿತಾಧಿಕಾರಿಗಳ ಸಮಿತಿ ಯನ್ನು ವಜಾಗೊಳಿಸಿತು. ಇದರ ದೈನಂದಿನ ನಿರ್ವಹಣೆಯನ್ನು ಎಐಎಫ್ಎಫ್ ನ ಹಂಗಾಮಿ ಪ್ರಧಾನ ಕಾರ್ಯದರ್ಶಿಗಳಿಗೆ ನೋಡಿ ಕೊಳ್ಳುವಂತೆ ಸೂಚಿಸಿದೆ.

ಇದರಿಂದ ಎಐಎಫ್ಎಫ್ ಮೇಲೆ ಫಿಫಾ ಹೇರಿರುವ ಅಮಾನತನ್ನು ರದ್ದುಗೊಳಿಸಲು ಮತ್ತು ಫಿಫಾ ಅಂಡರ್‌-17 ವನಿತಾ ವಿಶ್ವಕಪ್‌ ಪಂದ್ಯಾವಳಿಯನ್ನು ಭಾರತದಲ್ಲಿ ನಡೆಸಲುಬ ಅನುಕೂಲವಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next