Advertisement
ಈ ವರ್ಷ ಬಿಡುಗಡೆಯಾಗಿರುವ ನುಶ್ರತ್‌ಳ ಚಿತ್ರ ಸೋನು ಕೆ ಟಿಟು ಕಿ ಸ್ವೀಟಿ ಎಂಬ ಚಿತ್ರ ಸದ್ದಿಲ್ಲದೆ ನೂರು ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ನಿಧಾನವಾಗಿ ನುಶ್ರತ್ ಪ್ರಚಾರಕ್ಕೆ ಬರುತ್ತಿದ್ದಾಳೆ. 2006ರಲ್ಲೇ ಚಿತ್ರರಂಗಕ್ಕೆ ಬಂದಿರುವ ನುಶ್ರತ್ 12 ವರ್ಷಗಳಲ್ಲಿ ನಟಿಸಿದ್ದು ಬೆರಳೆಣಿಕೆಯ ಚಿತ್ರಗಳಲ್ಲಿ. ಒಂದು ಚಿತ್ರದಿಂದ ಇನ್ನೊಂದು ಚಿತ್ರಕ್ಕೆ ಕನಿಷ್ಠ ಒಂದು ವರ್ಷದ ಅಂತರವಿರುವುದು ನುಶ್ರತ್‌ಳ ವಿಶೇಷತೆ. ಕಲ್ ಕಿಸ್ನೆ ದೇಖಾ, ಪ್ಯಾರ್ ಕಾ ಪಂಚ್‌ನಾಮ, ಆಕಾಶ್‌ವಾಣಿ, ಡರ್ ಎಟ್ ಮಾಲ್ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ನುಶ್ರತ್ ತೆಲುಗು ಮತ್ತು ತಮಿಳಿನಲ್ಲೂ ಮುಖ ತೋರಿಸಿ ಬಂದಿದ್ದಾಳೆ. ನುಶ್ರತ್ ಚಿತ್ರಗಳ ಆಯ್ಕೆಯಲ್ಲಿ ತೀರಾ ಚೂಸಿ ಅಲ್ಲದಿದ್ದರೂ ಅವಳಿಗೆ ಸಿಗುವುದು ಲಘು ದಾಟಿಯ ಸಿನೆಮಾಗಳೇ. ಇದೀಗ ಮೆಂಟಲ್ ಹೈ ಕ್ಯಾ ಎಂಬ ಇದೇ ಮಾದರಿಯ ಚಿತ್ರವೊಂದರಲ್ಲಿ ನಟಿಸುತ್ತಿದ್ದಾಳೆ. ಯಥಾಪ್ರಕಾರ ಇದರ ನಾಯಕ, ನಿರ್ದೇಶಕ ಸೇರಿದಂತೆ ಬಹುತೇಕ ಹೊಸಬರೇ. ಆದರೆ, ಕಥೆ ಚೆನ್ನಾಗಿರುವುದರಿಂದ ಚಿತ್ರದ ಮೇಲೆ ನುಶ್ರತ್‌ಗೆ ಭಾರೀ ಭರವಸೆಯಿದೆ. ಏನೇ ಆದರೂ ಸಂಪ್ರದಾಯವಾದಿ ಮುಸ್ಲಿಮ್ ಕುಟುಂಬವೊಂದರಲ್ಲಿ ಜನಿಸಿದ ಸಾಮಾನ್ಯ ಹುಡುಗಿ ಬಣ್ಣದ ಹುಚ್ಚು ಬೆಳೆಸಿಕೊಂಡು ಯಶಸ್ವಿ ನಟಿಯಾಗುವತ್ತ ಒಂದೊಂದೇ ಹೆಜ್ಜೆಯಿಡುತ್ತಿರುವುದು ಸಾಧನೆಯೇ ಸರಿ. Advertisement
ನುಶ್ರತ್ ಎಂಬ ಮಂದಗಾಮಿನಿ
06:00 AM Jun 29, 2018 | |
Advertisement
Udayavani is now on Telegram. Click here to join our channel and stay updated with the latest news.