Advertisement
ಉದ್ಯಮ ಹಾಗೂ ಸೇವಾ ವಲಯಕ್ಕೆ ಹೋಲಿಸಿದರೆ ಕೃಷಿ ಕ್ಷೇತ್ರ ಕಡಿಮೆ ಬೆಳವಣಿಗೆಯಾಗಿದೆ. 1951-52ರಿಂದ ಇಲ್ಲಿಯವರೆಗೆ ಉದ್ಯಮ ಕ್ಷೇತ್ರ ಶೇ. 6.1 ಹಾಗೂ ಸೇವಾ ವಲಯ ಶೇ.6.2ರಷ್ಟು ಅಭಿವೃದ್ದಿಯಾಗಿದೆ. ಆದರೆ ಕೃಷಿ ವಲಯದ ಪ್ರಗತಿ ಶೇ 2.9ರಷ್ಟು ಮಾತ್ರ. ಇದರ ಫಲವಾಗಿ ದೇಶದ ಜಿಡಿಪಿಯಲ್ಲಿ ಕೃಷಿ ಪಾಲು ಕುಸಿ ದಿದೆ. ಡಾ| ಎಂ.ಎಸ್. ಸ್ವಾಮಿನಾಥನ್ ವರದಿ ಪ್ರಕಾರ ದೇಶದ ಶೇ.58ರಷ್ಟು ಜನಸಂಖ್ಯೆಗೆ ಕೃಷಿ ಹಾಗೂ ಕೃಷಿ ಆಧಾರಿತ ಉದ್ಯಮ ಗಳೇ ಉದ್ಯೋಗ ಸೃಷ್ಟಿಸುತ್ತಿವೆ. ಹೀಗಾಗಿ ಕೃಷಿಗೆ ವೃತ್ತಿಪರತೆ ತುಂಬಿ ಲಾಭದಾಯಕ ಉದ್ಯಮವಾಗಿ ಪರಿವರ್ತಿಸಬೇಕು. ಉತ್ಪಾದನ ಕೇಂದ್ರಿತವಾದ ಕೃಷಿಯು ಆದಾಯ ಕೇಂದ್ರಿತವಾಗಿಸಬೇಕು. ತಂತ್ರಜ್ಞಾನದ ಬಳಕೆ ಹಾಗೂ ಸುಧಾರಿತ ಕೃಷಿ ಪದ್ಧತಿಯು ಉತ್ಪಾದನ ವೆಚ್ಚಕ್ಕೆ ಕಡಿವಾಣ ಹಾಕುವ ಜತೆಗೆ ಉತ್ತಮ ಇಳು ವರಿಯನ್ನು ನೀಡುತ್ತದೆ. ಕೇಂದ್ರ ಸರಕಾರ ರೈತನಿಗೆ ಕೃಷಿಕಾರ್ಯ ಗಳಿಗೆ ಸಹಾಯವಾಗಲು ಪಿ.ಎಂ.ಕಿಸಾನ್ ಸಮ್ಮಾನ ಯೋಜನೆ ಯಡಿ ವಾರ್ಷಿಕ 6,000ರೂ.ಗಳ ಸಹಾಯಧನ ನೀಡುತ್ತಿದೆ. ರಾಜ್ಯ ಸರಕಾರವು ಹೆಚ್ಚುವರಿಯಾಗಿ 4,000 ರೂ. ನೀಡುತ್ತಿದೆ.
Related Articles
Advertisement
ಪ್ರಧಾನಮಂತ್ರಿ ಅನ್ನದಾತ ಆಯ್ ಸಂರಕ್ಷಣ ಅಭಿಯಾನದ ಮೂಲಕ ರೈತರ ಆದಾಯ ಸಂರಕ್ಷಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರೈಸ್ ಸಪೊರ್ಟ್ ಸ್ಕಿಂ ಮೂಲಕ ಕೇಂದ್ರ ಸರಕಾರದ ನೋಡಲ್ ಏಜನ್ಸಿ ರಾಜ್ಯಗಳ ಸಹಭಾಗಿತ್ವದಲ್ಲಿ ಬೆಳೆ ಕಾಳುಗಳು, ಎಣ್ಣೆಕಾಳುಗಳು ಹಾಗೂ ಕೊಬ್ಬರಿಯನ್ನು ಖರೀದಿಸು ತ್ತದೆ. ಖರೀದಿ ಏಜನ್ಸಿಗಳಿಗೆ ಬ್ಯಾಂಕ್ ಗ್ಯಾರಂಟಿ ನೀಡಲು ಕೇಂದ್ರ ಸರಕಾರ 16,000 ಕೋಟಿ ರೂ. ಮೀಸಲಿಟ್ಟಿದೆ. ಪ್ರçಸ್ ಡೆಫಿಶಿಯನ್ಸಿ ಪೆಮೆಂಟ್ ಯೋಜನೆಯಡಿ ಎಂ.ಎಸ್.ಪಿ.ಗಿಂತ ಮಾರುಕಟ್ಟೆ ಬೆಲೆ ಕಡಿಮೆ ಇದ್ದಲ್ಲಿ ಆ ವ್ಯತ್ಯಾಸದ ಹಣವನ್ನು ರಾಜ್ಯ ಸರಕಾರ ಒದಗಿಸುತ್ತದೆ. ಪಿ.ಪಿ.ಎಸ್. ಹಾಗೂ ಪಿ.ಡಿ.ಪಿ.ಎಸ್. ಬದಲಿಗೆ ಕೆಲ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಪೈಲೆಟ್ ಆಪ್ ಪ್ರವೈಟ್ ಪ್ರೋಕ್ಯುಪಮೆಂಟ್ ಸ್ಟಾಕಿಸ್ಟ್ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಮೂಲಕ ಖಾಸಗಿ ಏಜನ್ಸಿಗಳು ಸರಕಾರದ ಸಹಯೋಗದೊಂದಿಗೆ ಎಣ್ಣೆಕಾಳುಗಳನ್ನು ಸಂಗ್ರಹಿಸುತ್ತವೆ.
ಕೃಷಿ ಯೋಜನೆಗಳು ಹತ್ತಾರು ಇಲಾಖೆಗಳಡಿ ಸಾಗುವುದರಿಂದ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಹೀಗಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ನೀರಾವರಿ, ಪಶು ಸಂಗೋಪನೆ, ಕೈಗಾರಿಕೆ, ಸಕ್ಕರೆ, ಕೃಷಿ ಮಾರುಕಟ್ಟೆ ಎಲ್ಲ ಸಚಿವರನ್ನು ಒಳಗೊಂಡ “”ಕೃಷಿ ಕ್ಯಾಬಿನೆಟ್” ಹೆಸರಿನಡಿ ಸಂಪುಟ ಉಪಸಮಿತಿ ಹಾಗೂ ಜಿಲ್ಲಾವಾರು ಅಗ್ರಿ ಟಾಸ್ಕಫೋರ್ಸ್ ರಚಿಸುವುದರಿಂದ ಯೋಜನೆಗಳನ್ನು ರೈತರಿಗೆ ತ್ವರಿತವಾಗಿ ತಲುಪಿಸಬಹುದು.
ರೈತರ ಉತ್ಪನ ಮಾರುಕಟ್ಟೆಗೆ ತಲುಪುವ ಮೊದಲೇ ಶೇ. 20-30ರಷ್ಟು ನಾಶವಾಗುತ್ತಿದೆ. ಇದನ್ನು ತಡೆಯಲು ಸ್ಟೋರೇಜ್, ಸಾರಿಗೆ ಮತ್ತು ಪ್ರೊಸೆಸಿಂಗ್ ಬಗ್ಗೆ ಗಮನ ಹರಿಸಬೇಕಿದೆ. ಕೇಂದ್ರ ಸರಕಾರವು ಮೊದಲ ಹಂತದಲ್ಲಿ 22 ಸಾವಿರ ಚಿಕ್ಕ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಸ್ಥಾಪಿಸುತ್ತಿದೆ. ರೈತನ ಬಹುತೇಕ ಆದಾಯ ಮಧ್ಯವರ್ತಿಗಳ ಪಾಲಾಗುತ್ತಿದೆ. ಆನಲೈನ್ ಸ್ಪರ್ಧಾತ್ಮಕ ಮಾರುಕಟ್ಟೆ ಸೃಷ್ಟಿಸಿ ಪಾರದರ್ಶಕತೆ ಕಾಯ್ದುಕೊಳ್ಳಲು ಇ-ನ್ಯಾಮ್ ವ್ಯವಸ್ಥೆ ಸಹಕಾರಿಯಾಗುತ್ತದೆ. ಕೇಂದ್ರ ಸರಕಾರ ಹೊಸ ರಫ್ತು ನೀತಿ ರೂಪಿ ಸಿದ್ದು, ಕೃಷಿ ಉತ್ಪನ ರಫ¤ನ್ನು ದುಪ್ಪಟ್ಟು ಮಾಡುವ ಚಿಂತನೆಗಳು ನಡೆಯುತ್ತಿವೆ. ಅಗತ್ಯ ಸರಕುಗಳ ಕಾಯ್ದೆ-1955ಕ್ಕೆ ತಿದ್ದುಪಡಿ ತಂದ ಪರಿಣಾಮ ವಿವಿಧ ಕೃಷಿ ಸರಕುಗಳ ಮೇಲಿನ ನಿಯಂತ್ರ ಣವನ್ನು ತೆರವುಗೊಳಿಸಿದ್ದು ರೈತರಿಗೆ ಅನುಕೂಲವಾಗಲಿದೆ.
ಆರ್ಥಿಕ ಪ್ರಗತಿ ಎನ್ನುವುದು ಯಾವತ್ತೂ ಸುಲಭವಲ್ಲ. ರೈತರ ಬದುಕಿನಲ್ಲಿ ಸಾಲ ಎನ್ನುವುದು ಬಹುಮುಖ್ಯ ಪಾತ್ರ ವಹಿಸುತ್ತದೆ. ರೈತರಿಗೆ ಆರ್ಥಿಕ ಬೆಂಬಲ ನೀಡಲು ಬ್ಯಾಂಕ್‌ಗಳು ಕೃಷಿ ವಲಯಕ್ಕೆ ನೀಡುವ ವಾರ್ಷಿಕ ಗುರಿಯನ್ನು ಹೆಚ್ಚಿಸಲಾಗುತ್ತಿದೆ. ಸಾಂಸ್ಥಿಕ ಸಾಲದ ವ್ಯಾಪ್ತಿಯನ್ನು ಹೆಚ್ಚು-ಹೆಚ್ಚು ರೈತರಿಗೆ ವಿಸ್ತರಿಸುವುದಕ್ಕಾಗಿ ಸರಕಾರ ರೈತರಿಗೆ ಶೇ.4 ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗೆ ಅಲ್ಪಾವಧಿ ಬೆಳೆಸಾಲ ನೀಡುತ್ತಿದೆ. ತ್ವರಿತ ಮರುಪಾವತಿ ಮಾಡುವವರಿಗೆ ಶೇ. 2 ಬಡ್ಡಿದರದ ರಿಯಾಯಿತಿ ಸೌಲಭ್ಯ ನೀಡಲಾಗಿದೆ. 2018-19ರ ಬಡ್ಡಿ ಉಪದಾನ ಯೋಜನೆಯಡಿ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ರೈತರಿಗೆ ಆ ವರ್ಷ ನವೀಕರಿಸುವ ಬೆಳೆಸಾಲದ ಮೇಲಿನ ಶೇ. 2 ಬಡ್ಡಿ ರಿಯಾಯತಿ ನೀಡಲಾಗುತ್ತಿದೆ. ರೈತರಿಗೆ ಮಾರುಕಟ್ಟೆ ಸಂಕಷ್ಟ ಎದುರಾದಾಗ ಗೋದಾಮಿನಲ್ಲಿಯ ದಾಸ್ತಾನುವಿನ ನೆಗೋಶಿಯಬಲ್ ಬೆಲೆ ನಿರ್ಧರಿಸಿ ಈ ಯೋಜನೆ ಲಾಭ ಪಡೆಯಬಹುದು.
ಭೂಮಿಯಿಂದ ಫಸಲು ತೆಗೆಯುವುದು ಪ್ರೈಮರಿ ಅಗ್ರಿಕಲ್ಚರ್. ಆದರೆ ಆ ಉತ್ಪನ್ನವನ್ನು ಮೌಲ್ಯವರ್ಧನಗೊಳಿಸಿ ಗ್ರಾಹಕರಿಗೆ ತಲುಪಿಸುವುದು ಸೆಕೆಂಡರಿ ಅಗ್ರಿಕಲ್ಚರ್. ರೈತ ತನ್ನ ಉತ್ಪನದ ಸ್ಟೋರೇಜ್, ಪ್ರೊಸೆಸಿಂಗ್, ಪ್ಯಾಕಿಂಗ್, ಬ್ರಾಂಡಿಂಗ್, ಮಾರ್ಕೆಟಿಂಗ್ ಮಾಡುವುದನ್ನು ಕಲಿಯಬೇಕು. ಇದರರ್ಥ ಕೇವಲ ಉತ್ಪಾದನೆ ಮಾತ್ರವಲ್ಲ, ಮಾರುಕಟ್ಟೆ ಲಾಭಗಳು ರೈತನಿಗೆ ದೊರೆಯಬೇಕು. ಮಾರುಕಟ್ಟೆ ಜ್ಞಾನ, ಮೌಲ್ಯವರ್ಧನೆ ಬಗೆಗಳನ್ನು ಅರಿಯದೆ ರೈತ ತನ್ನ ಉತ್ಪನ್ನವನ್ನು ಕಡಿಮೆ ಬೆಲೆಗೆ ಮಾರಿ ಸೋಲುತ್ತಿದ್ದಾನೆ. ಹಾಲು ನಮ್ಮದು, ಪನ್ನೀರ್ ಅವರದ್ದು, ಟೋಮೆಟೋ ನಮ್ಮದು ಕಿಚಪ್ ಲಾಭ ಇನ್ನಾರಧ್ದೋ ಆಗಿದೆ. ರೈತನೂ ಕಿರು ಉದ್ಯಮ ತೆರೆಯುವುದರಿಂದ ಆದಾಯವನ್ನು ಬಹುಬೇಗನೇ ದ್ವಿಗುಣಗೊಳಿಸಿಕೊಳ್ಳಬಹುದು. ಈ ದೆಸೆಯಲ್ಲಿ ಕರ್ನಾಟಕ ಸರಕಾರವು ದೇಶದಲ್ಲಿಯೇ ಪ್ರಥಮ ಬಾರಿಗೆ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಿದೆ. ನವೋದ್ಯಮ(ಸ್ಟಾರ್ಟ್‌ಪ್)ದ ವಿಕಾಸ ಕೃಷಿರಂಗಕ್ಕೂ ವಿಸ್ತರಿಸಬೇಕು. “”ಪ್ರಧಾನಮಂತ್ರಿ ಫಾರ್ಮಲೈಜೇಶನ್ ಆಫ್ ಮೈಕ್ರೋ ಫುಡ್ ಪ್ರೋಸೆಸಿಂಗ್ ಎಂಟರ್‌ಪ್ರçಸಸ್ ಸ್ಕೀಂ” ಸಣ್ಣ ಆಹಾರ ಉತ್ಪಾದನ ಘಟಕಗಳ ವಿಸ್ತರಣೆಗೆ ಹಣಕಾಸು, ತಾಂತ್ರಿಕ ಹಾಗೂ ಮಾರುಕಟ್ಟೆ ಸಹಾಯ ಕಲ್ಪಿಸುತ್ತಿದೆ.
ಸರಕಾರ ರೈತರ ಆತ್ಮಹತ್ಯೆಗೆ ಸಹಾನುಭೂತಿ ತೋರುವ ಬದಲು ಆತ್ಮಹತ್ಯೆ ಮಾಡಿಕೊಳ್ಳದಂತೆ ಸದೃಢವಾಗಿ ಜತೆ ನಿಲ್ಲಬೇಕು. ಸ್ಥಿತಿವಂತರು ಸರಕಾರದ ಸವಲತ್ತುಗಳನ್ನು ಸಣ್ಣ ರೈತರಿಗೆ ಬಿಟ್ಟು ಕೊಡಬೇಕು. ನಮ್ಮ ಹಳ್ಳಿ, ತಾಲೂಕು, ಜಿಲ್ಲೆಗಳು ಹಾಗೂ ರೈತ ಮೊದಲು ಆತ್ಮನಿರ್ಭರವಾಗಬೇಕು. ರೈತ ವಿಕಾಸವಾದರೆ ಮಾತ್ರ ಭಾರತ ವಿಕಾಸ, ಎಂಬುದನ್ನು ಅರಿತು ನಡೆದರೆ ರೈತರ ಆದಾಯವನ್ನು ದ್ವಿಗುಣಗೊಳಿಸಬಹುದು!
– ಸಂಗಮೇಶ ಆರ್. ನಿರಾಣಿಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ